ಗೂಗಲ್​ ಮ್ಯಾಪ್​ನಿಂದ ಇಲ್ಲೊಂದು ಸಂಸಾರವೇ ಮುರಿದುಬಿತ್ತು​!..ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!!

|

ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವನ ಮೊಬೈಲ್ ಒಂದು ಆತನ ಎಲ್ಲಾ ಸುಳಿವನ್ನು ಬಿಟ್ಟುಕೊಡುತ್ತದೆ. ಮೊಬೈಲ್​ನಲ್ಲಿನ ವಿಡಿಯೋದಿಂದಲೋ, ಫೋಟೋದಿಂದಲೋ ಎಷ್ಟೋ ಸಂಭಂದಗಳು ಮುರಿದುಬಿದ್ದ ಉದಾಹರಣೆಗಳೂ ಇವೆ. ಕೆಲವೊಮ್ಮೆ ತಂತ್ರಜ್ಞಾನ ನಮ್ಮ ಊಹೆಗೂ ನಿಲುಕದಂತೆ ಕೆಲಸ ಮಾಡಿರುತ್ತದೆ. ಅಂಥದ್ದೇ ಘಟನೆಯೊಂದು ಎಲ್ಲೆಡೆ ವೈರಲ್ ಆಗಿದೆ.

ಹೌದು, ಇದು ನೀವು ಹಿಂದೆಂದೂ ಕೇಳಿರದ, ಹೀಗೂ ಆಗಬಹುದಾ ಎಂದು ಆಶ್ಚರ್ಯಚಕಿತರನ್ನಾಗಿಸುವ ಕುತೂಹಲಕಾರಿ ಕಥೆ ಇದಾಗಿದ್ದು, ಪೆರುವಿನಲ್ಲಿ ನಡೆದಿರುವ ಘಟನೆಯೊಂದು ನಾವು ಈವರೆಗೂ ಕೇಳಿರುವ ಘಟನೆಗಳನ್ನು ಮೀರಿಸುವಂತಿದೆ. ತನ್ನ ಪತ್ನಿ ಬೋರೊಬ್ಬ ಗಂಡಸಿನ ಜೊತೆ ಇರುವುದು ವ್ಯಕ್ತಿಯೊಬ್ಬನಿಗೆ ಗೂಗಲ್‌ ಮ್ಯಾಪ್‌ನಿಂದ ಅಚಾನಕ್ ಆಗಿ ತಿಳಿದುಬಂದಿದೆ.

ಗೂಗಲ್​ ಮ್ಯಾಪ್​ನಿಂದ ಇಲ್ಲೊಂದು ಸಂಸಾರವೇ ಮುರಿದುಬಿತ್ತು​!

ತಂತ್ರಜ್ಞಾನದ ಅಭಿವೃದ್ಧಿಯಾದಂತೆಲ್ಲ ಸಂಬಂಧಗಳು ಮುರಿದು ಬೀಳುವುದೂ ಹೆಚ್ಚಾಗುತ್ತಿದೆ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಅದಕ್ಕೆ ಇಂಬು ಕೊಡುವಂಥ ಈ ಘಟನೆ ಇಲ್ಲಿ ವಿಚ್ಛೇದನ ಪಡೆಯಲು ಕಾರಣವಾಗಿದೆ. ಹಾಗಾದರೆ, ಏನಿದು ವಿಚಿತ್ರ ಘಟನೆ? ಅಷ್ಟಕ್ಕೂ ಗೂಗಲ್‌ ಮ್ಯಾಪ್‌ನಲ್ಲಿ ಆ ಜೋಡಿ ಸಿಕ್ಕಿಹಾಕಿಕೊಂಡಿದ್ದೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೀಗೂ ಆಗಬಹುದಾ?

ಹೀಗೂ ಆಗಬಹುದಾ?

ಗೂಗಲ್​ ಮ್ಯಾಪ್​ನಿಂದ ಇಲ್ಲೊಂದು ಸಂಸಾರವೇ ಮುರಿದುಬಿದ್ದಿದೆ. ಗೂಗಲ್‌ ಮ್ಯಾಪಿನಲ್ಲಿ ತನ್ನ ಹೆಂಡತಿ ಬೇರೊಬ್ಬನ ಜೊತೆಗೆ ರೊಮ್ಯಾನ್ಸ್​ ಮಾಡುವುದನ್ನು ನೋಡಿದ ವ್ಯಕ್ತಿಯೋರ್ವ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುತ್ತಾರೆ. ಆಕೆ ತನಗೆ ಬೇರೆಯವನ ಜೊತೆಗೆ ಸಂಬಂಧ ಇರುವುದು ನಿಜವೆಂದು ಒಪ್ಪಿಕೊಳ್ಳುತ್ತಾಳೆ. ಬಳಿಕ, ಅವರಿಬ್ಬರೂ ವಿಚ್ಛೇದನ ಪಡೆದಿದ್ದಾರೆ.

ಗೂಗಲ್‌ ಮ್ಯಾಪಿನಲ್ಲಿ ಹೇಗೆ ಸಾಧ್ಯ?

ಗೂಗಲ್‌ ಮ್ಯಾಪಿನಲ್ಲಿ ಹೇಗೆ ಸಾಧ್ಯ?

ಈ ಸುದ್ದಿಯಲ್ಲಿ ಅಚ್ಚರಿ ಮೂಡಲು ಕಾರಣವಾಗಿರುವುದು ಗೂಗಲ್‌ ಮ್ಯಾಪಿನಲ್ಲಿ ಆತ ಅವನ ಹೆಂಡತಿಯನ್ನು ನೊಡಿದ್ದೇಗೆ ಎಂಬುದು ಅಲ್ಲವೇ. ಇದಕ್ಕೆ ಉತ್ತರ ಅಕಸ್ಮಾತ್ ಆಗಿ ಎನ್ನಬಹುದು. ಏಕೆಂದರೆ, ವ್ಯಕ್ತಿಯೋರ್ವ ಗೂಗಲ್‌ ಮ್ಯಾಪ್‌ ಬಳಸಿ ಪೆರುವಿನ ಪ್ರಸಿದ್ಧ ಸೇತುವೆಯೊಂದಕ್ಕೆ ತಲುಪುವ ಮಾರ್ಗಕ್ಕಾಗಿ ಶೋಧ ನಡೆಸುತ್ತಿದ್ದ ವೇಳೆ ಅಚಾನಕ್ ಆಗಿ ಇದು ಕಂಡುಬಂದಿದೆ.

ಘಟನೆ ನಡೆದದ್ದು ಹೀಗೆ!

ಘಟನೆ ನಡೆದದ್ದು ಹೀಗೆ!

ಆತ ಗೂಗಲ್​ ಮ್ಯಾಪ್​ನಲ್ಲಿ ಏನನ್ನೋ ಹುಡುಕುತ್ತಿರುತ್ತಾನೆ. ಅಷ್ಟರಲ್ಲಿ ಪಾರ್ಕ್​ ಒಂದರಲ್ಲಿ ಬಿಳಿ ಟಾಪ್​ ಧರಿಸಿ ಕುಳಿತಿದ್ದ ಯುವತಿಯೊಬ್ಬಳು ಬೆಂಚ್​ ಮೇಲೆ ಕುಳಿತಿರುವುದು ಮ್ಯಾಪ್​ ಫೋಟೋದಲ್ಲಿ ಕಾಣುತ್ತದೆ. ಆಕೆಯ ತೊಡೆಯ ಮೇಲೆ ಯಾರೋ ಒಬ್ಬ ಮಲಗಿರುತ್ತಾನೆ. ಈ ಫೋಟೋವನ್ನು ನೋಡಿದವನಿಗೆ ಯಾಕೋ ಸ್ವಲ್ಪ ಅನುಮಾನವಾಗುತ್ತದೆ.

ಅನುಮಾನವೇ ನಿಜ!

ಅನುಮಾನವೇ ನಿಜ!

ಆ ಫೋಟೊದಲ್ಲಿ ಕುಳಿತಿರುವ ಯುವತಿ ಆತನಿಗೆ ಅವಳು ತನ್ನ ಹೆಂಡತಿ ಎಂಬ ಅನುಮಾನ ಮೂಡುತ್ತದೆ. ಆ ಚಿತ್ರವನ್ನು ಇನ್ನೂ ಝೂಮ್​ ಮಾಡಿ ನೋಡಿದಾಗ ಅದು ಸ್ವತಃ ತನ್ನ ಹೆಂಡತಿ ಎಂಬುದು ಆತನಿಗೆ ಗೊತ್ತಾಗುತ್ತದೆ. ಆತನ ಹೆಂಡತಿಯೂ ಸಹ ಬೇರೆಯವನ ಜೊತೆಗೆ ಸಂಬಂಧ ಇರುವುದು ನಿಜವೆಂದು ಒಪ್ಪಿಕೊಳ್ಳುತ್ತಾಳೆ. ನಂತರ ವಿಚ್ಛೇದನವಾಗುತ್ತದೆ.

ಅಷ್ಟಕ್ಕೂ ಅಲ್ಲೇಕೆ ಫೋಟೊ ಬಂತು?

ಅಷ್ಟಕ್ಕೂ ಅಲ್ಲೇಕೆ ಫೋಟೊ ಬಂತು?

ಕಾರು, ಬೈಕ್​ ಮುಂತಾದ ವಾಹನಗಳ ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ 360 ಡಿಗ್ರಿ ದೃಶ್ಯ ಸೆರೆಯಾಗುತ್ತದೆ. ಅವು ಚಲಿಸುವಾಗ ಸೆರೆಹಿಡಿಯುವ ದೃಶ್ಯಾವಳಿಗಳಿಂದ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಇಲ್ಲೂ ಕೂಡ ಅದೇ ಆಗಿದ್ದು, ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ 360 ಡಿಗ್ರಿ ಫೋಟೊದಲ್ಲಿ ಇವರಿಬ್ಬರ ಫೋಟೊ ಸೆರೆಯಾಗಿದೆ. ಈಗ ತಂತ್ರಜ್ಞಾನ ಎಲ್ಲವನ್ನು ಬಿಚ್ಚಿಟ್ಟಿದೆ.

ವಿಶ್ವ ವಿಜ್ಞಾನಕ್ಕೆ ನಿಗೂಢವಾಗಿರುವ ಭಾರತದ ಐದು ವಿಚಿತ್ರ ಸ್ಥಳಗಳು!!

ವಿಶ್ವ ವಿಜ್ಞಾನಕ್ಕೆ ನಿಗೂಢವಾಗಿರುವ ಭಾರತದ ಐದು ವಿಚಿತ್ರ ಸ್ಥಳಗಳು!!

ಭೂಮಿಯ ಮೇಲೆ ನೈಸರ್ಗಿಕವಾಗಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳನ್ನು ನಮಗೆ ಯಥಾವತ್ತಾಗಿ ವಿಜ್ಞಾನದ ಮೂಲಕ ವಿವರಿಸಲಾಗುವುದಿಲ್ಲ ಎಂದರೆ ಅಲ್ಲೊಂದು ಪವಾಡ ನಡೆಯಬೇಕು ಅಥವಾ ಅದು ಮನುಷ್ಯನನ್ನು ಮೀರಿದ ವಿಜ್ಞಾನ ಆದಾಗಿರಬೇಕು.! ನಿಗೂಢತೆಯು ಅದ್ಭುತವನ್ನು ಸೃಷ್ಟಿಸುತ್ತದೆ ಮತ್ತು ಆ ಅದ್ಭುತವು ಮಾನವನ ಅರ್ಥಮಾಡಿಕೊಳ್ಳುವ ಬಯಕೆಯ ಮೂಲವಾಗಿದೆ ಎಂದು ಚಂದ್ರನ ಮೇಲೆ ಮೊದಲು ಕಾಲಿಟ್ಟ ಮಾನವ ನೀಲ್ ಆರ್ಮ್ಸ್ಟ್ರಾಂಗ್ ಹೇಳಿದ್ದು ವಿಜ್ಞಾನ ಪ್ರಪಂಚದ ಕೌತುಕ ವಿಷಯವನ್ನು ಪ್ರಸ್ತಾಪಿಸುತ್ತದೆ.

ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ. ಅಜ್ವಾತ, ಕೌತುಕಮಯವಾಗಿರುವ ಅಂಶಗಳನ್ನು ನಾವು ನಿಗೂಢತೆಯೊಂದಿಗೆ ಜೋಡಿಸುತ್ತೇವೆ. ನೈಸರ್ಗಿಕವಾಗಿ ನಡೆಯುವ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಈ ಭೂ ಸೃಷ್ಟಿಯು ಒಳಗೊಂಡಿದೆ. ವಿಶ್ವದ ಹಲವು ಪ್ರದೇಶಗಳು ಹಲವಾರು ರೀತಿಯ ನಿಗೂಢತೆಯನ್ನು ಹೊಂದಿರುವ ಮಾಹಿತಿಗಳನ್ನು ನೀವು ಕೇಳಿರುತ್ತೀರಾ ಅಲ್ಲವೇ.

ಇದೇ ರೀತಿಯ ನಿಗೂಢತೆಯನ್ನು ಹೊತ್ತ ಹಲವು ಪ್ರದೇಶಗಳು ಭಾರತದಲ್ಲಿ ಕೂಡ ಇವೆ. ಭಾರತದ ಇತಿಹಾಸವೇ ಒಂದು ನಿಗೂಢವಾದರೂ ಕೂಡ ಇಂದಿನ ಆಧುನಿಕ ಪ್ರಪಂಚದಲ್ಲಿಯೂ ನಿಗೂಢತೆಯನ್ನು ಉಳಿಸಿಕೊಂಡಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವ ವಿಜ್ಞಾನ ಪ್ರಪಂಚಕ್ಕೆ ಕೌತುಕವಾಗಿರುವ ಭಾರತದ 5 ಸ್ಥಳಗಳ ಬಗ್ಗೆ ಸ್ಥಳಗಳ ಬಗೆಗೆ ಮಾಹಿತಿ ತಿಳಿಸುವ ಪ್ರಯತ್ನ ಇಲ್ಲಿದೆ. ಅವುಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   ಅಯಸ್ಕಾಂತೀಯ ಪ್ರಭಾವ

ಅಯಸ್ಕಾಂತೀಯ ಪ್ರಭಾವ

ಕಾರ್ಗಿಲ್- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಸ್ಕಾಂತೀಯ ಗುಡ್ಡ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ಕಾರಿನಲ್ಲಿ ಬರುವ ಪ್ರವಾಸಿಗರಿಗೆ ಆಯಸ್ಕಾಂತಿಯ ಗುಡ್ಡ ಪ್ರಸಿದ್ಧ ನಿಲುಗಡೆ ಸ್ಥಳ. ಲೇಹ್ನಿಂದ ಕಾಗರ್ಗಿಲ್ ಗೆ ತೆರಳುವ 30 ಕಿ.ಮಿ. ಉದ್ದದ ರಸ್ತೆಯಲ್ಲಿನ ಒಂದು ನಿರ್ದಿಷ್ಟ ಜಾಗದಲ್ಲಿ ಇಂಥದ್ದೊಂದು ಅನುಭವ ಆಗುತ್ತದೆ. ರಸ್ತೆಯ ಪಕ್ಕದಲ್ಲಿ ಆಯಸ್ಕಾಂತೀಯ ಗುಡ್ಡ ಆರಂಭವಾಗುತ್ತಿದೆ ಎಂಬುದನ್ನು ತೋರಿಸುವ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಸೂಚನಾ ಫಲಕದ ಪಕ್ಕದಲ್ಲಿ ಒಂದು ಚೌಕಾಕಾರದ ಗುರುತನ್ನು ಹಾಕಲಾಗಿದೆ. ಅಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಇಂಜಿನ್ ಆಫ್ ಮಾಡಬೇಕು. ತಕ್ಷಣವೇ ಕಾರು ತನ್ನಿಂದ ತಾನಾಗಿ ಗಂಟೆಗೆ ಸುಮಾರು 20 ಕಿ.ಮೀ. ವೇಗದಲ್ಲಿ ಏರು ಮುಖವಾಗಿ ಚಲಿಸಲು ಆರಂಭಿಸುತ್ತದೆ. ಮುಂದೆ ಕಾಣುವ ಬೆಟ್ಟದ ಪ್ರಭಾವದಿಂದಲೇ ಕಾರು ಮುಂದೆ ಚಲಿಸುತ್ತಿದೆ ಎಂಬ ಅನುಭವಕ್ಕೆ ಚಾಲಕರು ಒಳಗಾಗುತ್ತಾರೆ. ಒಂದು ವೇಳೆ ಕಾರನ್ನು ಹಿಮ್ಮುಖವಾಗಿ ನಿಲ್ಲಿಸಿರೂ ಅದೇ ದಿಕ್ಕಿಗೆ ಚಲಿಸಲು ಆರಂಭಿಸುತ್ತದೆ. ಆದರೆ, ಕ್ರಿಯೆಗೆ ಏನು ಕಾರಣ ಎಂಬುದು ಮಾತ್ರ ನಿಗೂಢ.

ಇಲ್ಲೇನು ಜಾದೂ ನಡೆಯುತ್ತಾ?

ಇಲ್ಲೇನು ಜಾದೂ ನಡೆಯುತ್ತಾ?

ಚಾಂಡಿಪುರ ಸಮುದ್ರ ಇರುವುದು ಒಡಿಶಾ ರಾಜಧಾನಿ ಭುವನೇಶ್ವರದಿಂದ 200 ಕಿ.ಮೀ. ದೂರದಲ್ಲಿ. ಬಾಲಾಸೋರ್ ಜಿಲ್ಲೆಂದ 10 ಕಿ.ಮೀ. ಪ್ರಯಾಣಿಸಿದರೆ ಈ ಜಾಗವನ್ನು ತಲುಪಬಹುದು. ನೀರು ಇದ್ದಕ್ಕಿಂದ್ದಂತೆ ಮಾಯವಾಗುವ ವಿದ್ಯಮಾನದಿಂದಾಗಿ ಚಂಡಿಪುರ ಸಮುದ್ರ ತೀರ ಜಗತ್ತಿನ ಗಮನ ಸೆಳೆದಿದೆ. ದಡಕ್ಕೆ ಬಂದು ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು ನೋಡ ನೋಡುತ್ತಿದ್ದಂತೆ 5-6 ಕಿ.ಮೀ. ಹಿಂದೆ ಸರಿಯುತ್ತವೆ. ಸಮುದ್ರದ ಉಬ್ಬರ ಮತ್ತು ಇಳಿತದ ವೇಳೆ ಪ್ರತಿನಿತ್ಯವೂ ಇಂಥದ್ದೊಂದು ವಿದ್ಯಮಾನ ನಡೆಯುತ್ತದೆ. ಇಳಿತದ ವೇಳೆ ಸಮುದ್ರ ಬಯಲಿನಂತಾಗುತ್ತದೆ. ಆಗ ಅಲ್ಲಿ ಅಕ್ಷರಶಃ ನಡೆದಾಡಬಹುದು. ಅಷ್ಟೇ ಅಲ್ಲ ಸಮುದ್ರದಲ್ಲಿ ಬೈಕನ್ನೂ ಓಡಿಸಬಹುದು. ಹೀಗೆ ಮಾಯವಾದ ಸಮುದ್ರದ ನೀರು ಉಬ್ಬರದ ಸಮಯದಲ್ಲಿ ಮರಳಿ ಬರುತ್ತದೆ. ಬರಿದಾಗಿದ್ದ ಸಮುದ್ರದ ಒಡಲು ಮತ್ತೆ ತುಂಬಿಕೊಳ್ಳುತ್ತದೆ. ಅಲೆಗಳು ವಾಪಸ್ ಬರುವುದನ್ನು ನೋಡುವುದೂ ಕೂಡ ಅಷ್ಟೇ ಕುತೂಹಲ. ಸ್ಥಳಿಯರಿಗೆ ಇದೊಂದು ನಿತ್ಯದ ವಿದ್ಯಮಾನದಂತೆ ಕಂಡರೂ ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡುತ್ತದೆ. ಉಬ್ಬರ ಮತ್ತು ಇಳಿತದ ವೇಳೆ ಸಮುದ್ರದ ನೀರಿನ ಮಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುವುದು ಸಾಮಾನ್ಯ. ಆದರೆ, ಕಿಲೋಮೀಟರ್ಗಟ್ಟಲೆ ಹಿಂದೆ ಸರಿಯುವುದನ್ನು ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. ಈ ರೀತಿ ಆಗುವುದಕ್ಕೆ ಏನು ಕಾರಣ ಎನ್ನುವುದಕ್ಕೆ ಇದುವರೆಗೂ ನಿಖರ ಉತ್ತರ ಸಿಕ್ಕಿಲ್ಲ.

ಇಳಿಜಾರಿನಲ್ಲಿ ಇದ್ದರೂ ಉರುಳದ ಬಂಡೆ!!

ಇಳಿಜಾರಿನಲ್ಲಿ ಇದ್ದರೂ ಉರುಳದ ಬಂಡೆ!!

ಈ ಬಂಡೆ ಇರುವುದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹಾಬಲಿಪುರಂನಲ್ಲಿ. ಇಲ್ಲಿ 250 ಟನ್ ತೂಕದ ಬೃಹತ್ ಬಂಡೆಯೊಂದು ಕದಲದೇ ಇಳಿಜಾರಿನಲ್ಲಿ ನಿಂತುಕೊಂಡಿದೆ. ಅದೂ 1200 ವರ್ಷಗಳಿಂದಲೂ ಅಲ್ಲಿಯೇ ಇದೆ ಎಂದು ಹೇಳಲಾಗಿದೆ. ಇಷ್ಟೊಂದು ಸುದೀರ್ಘ ವರ್ಷಗಳಿಂದ ಬಂಡೆ ಎಂತಹ ಮಳೆ, ಗಾಳಿಗೂ ಜಗ್ಗದೇ ಇರುವುದಕ್ಕೆ ವೈಜ್ಞಾನಿಕವಾಗಿಯೂ ಕಾರಣ ಸಿಕ್ಕಿಲ್ಲ. ಈ ಬಂಡೆಗೆ ತಮಿಳಿನ ಮೂಲ ಹೆಸರು "ವಾಣಿರೈ ಕಲ್". ಅಂದರೆ ಆಕಾಶ ದೇವತೆಯ ಬಂಡೆ ಎಂದು ಅರ್ಥವಿದೆ. 1908ರಲ್ಲಿ ಮದ್ರಾಸ್ ಗವರ್ನರ್ ಆರ್ಥರ್ ಲಾವ್ಲಿ, ಈ ಬಂಡೆ ಹೀಗೆಯ ಇದ್ದರೆ ಜನರಿಗೆ ಅಪಾಯ ಎಂಬುದನ್ನು ಅರಿತು ಅದನ್ನು ಉರುಳಿಸಲು ಮುಂದಾಗಿದ್ದರು. ಅದಕ್ಕಾಗಿ ಏಳು ಆನೆಗಳನ್ನು ಬಂಡೆಗೆ ಕಟ್ಟಿ ಎಳೆಸುವ ಯತ್ನ ಮಾಡಲಾಯಿತು. ಆದರೆ, ಬಂಡೆ ಒಂದಿಚೂ ಕದಲಲಿಲ್ಲ. ಕೊನೆಗೆ ಗವರ್ನರ್ ಬಂಡೆಯನ್ನು ಉರುಳಿಸುವ ಪ್ರಯತ್ನವನ್ನು ಕೈಬಿಡಬೇಕಾಯಿತು.

ಅವಳಿ ಮಕ್ಕಳ ಊರು!

ಅವಳಿ ಮಕ್ಕಳ ಊರು!

ಕೇರಳದ ಗ್ರಾಮವೊಂದರಲ್ಲಿ ಬರೋಬ್ಬರಿ 400 ಜೋಡಿ ಅವಳಿ ಮಕ್ಕಳಿದ್ದಾರೆ. ಮಲಪ್ಪುರಂ ಜಿಲ್ಲೆಯ ಕೊಡಿನ್ಹಿ ಎಂಬ ಗ್ರಾಮದ ವೈಶಿಷ್ಟ್ಯತೆ ವಿಜ್ಞಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ಸುಮಾರು 2 ಸಾವಿರ ಕುಟುಂಬಗಳಿರುವ ಈ ಗ್ರಾಮದಲ್ಲಿ ಸದ್ಯ 400 ಜೋಡಿ ಅವಳಿ ಮಕ್ಕಳಿದ್ದಾರೆ. ದೇಶದ ಸರಾಸರಿ ಪ್ರಕಾರ ಪ್ರತಿ ಸಾವಿರ ಮಕ್ಕಳಿಗೆ 9 ಕ್ಕಿಂತ ಕಡಿಮೆ ಅವಳಿ ಮಕ್ಕಳು ಜನಿಸುತ್ತವೆ. ಆದರೆ, ಕೊಡಿನ್ಹಿ ಗ್ರಾಮದಲ್ಲಿ ಮಾತ್ರ ಪ್ರತಿ ಸಾವಿರ ಮಕ್ಕಳಿಗೆ 45 ಅವಳಿ ಮಕ್ಕಳು ಹುಟ್ಟುತ್ತಾರೆ. ಈ ಗ್ರಾಮದಲ್ಲಿ ಅವಳಿ ಮಕ್ಕಳ ಜನನದ ಹಿಂದಿನ ವಿಸ್ಮಯ ಪತ್ತೆ ಹಚ್ಚಲು ವಿಜ್ಞಾನಿಗಳು ಕೂಡ ಮುಂದಾಗಿದ್ದರು. ಆದರೆ, ವಿಜ್ಞಾನಿಗಳಿಗೆ ಅದನ್ನು ಸಂಪೂರ್ಣವಾಗಿ ಭೇದಿಸಲು ಸಾಧ್ಯವಾಗಿಲ್ಲ. ಸಂಶೋಧಕರು ಈ ಸಂಬಂಧ ನಡೆಸಿದ ಸಂಶೋಧನೆ ಅವಳಿ ಮಕ್ಕಳ ಜನನಕ್ಕೆ ಅನುವಂಶೀಯತೆ ಕಾರಣ ಎಂದು ಹೇಳುತ್ತದೆ.

 ಜಂತರ್ ಮಂತರ್

ಜಂತರ್ ಮಂತರ್

ಇಂದಿನ ತಾಂತ್ರಿಕ ಯುಗದಲ್ಲಿ ಬೆರಳಿನ ತುದಿಯಲ್ಲೇ ನಮಗೆ ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿದೆ. ಶತಮಾನಗಳ ಹಿಂದೆ ಕಾಲ, ಗ್ರಹಣ ಮತ್ತು ಅನೇಕ ಖಗೋಳ ಶಾಸ್ತ್ರದ ಬಗ್ಗೆ ಬಯಲಿನಲ್ಲಿ ಸ್ಥಾಪಿಸಿರುವ ಕಟ್ಟಡ, ಗೋಪುರ ಮತ್ತು ಗೋಲಾಕಾರದ ರಚನೆಯ ಸಹಾಯದಿಂದ ನಿಖರವಾಗಿ ಅರಿಯುತ್ತಿದ್ದರು. ಜಂತರ್ ಮಂತರ್ ಎನ್ನುವುದು ಈ ವಿಸ್ಮಯಕಾರಿ ಗಡಿಯಾರ ಮಾಪನ ಹೊಂದಿರುವ ಧಾಮ. ಜಂತರ್ ಅಂದರೆ ಯಂತ್ರ ಎಂತಲೂ ಮಂತರ್ ಅಂದರೆ ಸೂತ್ರ ಎಂದೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಅಂದರೆ ಕನ್ನಡದಲ್ಲಿ ಲೆಕ್ಕಾಚಾರ ಯಂತ್ರ ಎಂದು ಅರ್ಥ ಕಲ್ಪಿಸಬಹುದಾಗಿದೆ. ದೇಶದ ಐದು ಅತಿದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ ಜಂತರ್ ಮಂತರ್ ಕೂಡಾ ಒಂದು. ಇಲ್ಲಿನ ಸಾಮ್ರಾಟ್ ಯಂತ್ರವು ಎಷ್ಟು ನಿಖರವಾಗಿದೆ ಅಂದರೆ ಜೈಪುರದ ಸಮಯಕ್ಕೆ ಕೇವಲ ಎರಡು ಕ್ಷಣಗಳ ವ್ಯತ್ಯಾಸವಿದೆ. ಸಾಮ್ರಾಟ್ ಯಂತ್ರದ ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ)ನ ನೆರಳು ಪ್ರತಿ ಸೆಕೆಂಡಿಗೆ ಒಂದು ಮಿ.ಮೀ.ಗಳಷ್ಟು ದೂರ ಚಲಿಸುತ್ತದೆ ಎಂಬುದು ಎಂತವರಿಗೂ ವಿಸ್ಮಯಗೊಳಿಸುವ ವಿಷಯ.

Best Mobiles in India

English summary
The photograph showed a woman in a white top, jeans and heels, sitting on a bench and stroking the hair of a man in her lap. The man soon realised that the woman was none other than his wife. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X