Home
ಸುದ್ದಿಜಾಲ

ವೊಡಾಫೋನಿನ ಈ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್‌!

ಪ್ರಸ್ತುತ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಪ್ಲ್ಯಾನ್‌ಗಳ ಬೆಲೆ ಏರಿಳಿತದ ಸ್ಥಿತಿಯಲ್ಲಿದ್ದು, ಜನಪ್ರಿಯ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ವೊಡಾಫೋನ್, ಏರ್‌ಟೆಲ್, ಜಿಯೋ ಪ್ಲ್ಯಾನ್‌ ದರಗಳಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿವೆ. ಟೆಲಿಕಾಂ ಸಂಸ್ಥೆಗಳು ಬಿಡುಗಡೆ ಮಾಡುವ ಹೊಸ ಪ್ಲ್ಯಾನ್‌ಗಳ ದರ ಎಷ್ಟಿರುತ್ತವೆ ಎನ್ನುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ. ಈ ನಡುವೆ ಸದ್ಯ ವೊಡಾಫೋನ್‌ ಕೆಲವು ಆಕರ್ಷಕ ಪ್ಲ್ಯಾನ್‌ಗಳನ್ನು ಹೊಂದಿದೆ.

ವೊಡಾಫೋನ್

ಹೌದು, ವೊಡಾಫೋನ್ ಇತ್ತೀಚಿಗೆ ಸುಮಾರು 500ರೂ. ಪ್ರೈಸ್‌ ಒಳಗೆ ಹಲವು ಅತ್ಯುತ್ತಮ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ಗಳು ಅಧಿಕ ಡಾಟಾ, ಉಚಿತ ಕರೆ, ಉಚಿತ ಎಸ್ಎಮ್ಎಸ್ ಪ್ರಯೋಜನಗಳನ್ನು ಪಡೆದುಕೊಂಡಿದೆ. ಆದ್ರೆ ಡಿಸೆಂಬರ್‌ನಲ್ಲಿ ಜಾರಿಯಾಗುವ ಹೊಸ ದರ ಪಟ್ಟಿ ಹೇಗಿರಲಿದೆ ಎನ್ನುವುದನ್ನು ಕಂಪನಿಯ ಸ್ಪಷ್ಟ ಪಡಿಸಿಲ್ಲ. ಅಲ್ಲಿಯವರೆಗೂ ವೊಡಾಫೋನ್ ಗ್ರಾಹಕರಿಗೆ ಈ ಪ್ಲ್ಯಾನ್‌ಗಳು ಉತ್ತಮ ಅನಿಸಲಿವೆ. ಹಾಗಾದರೇ 500ರೂ. ಒಳಗೆ ಲಭ್ಯ ಇರುವ ವೊಡಾಫೋನ್ ಪ್ರೀಪೇಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

129ರೂ. ಪ್ರೀಪೆಡ್ ಪ್ಲ್ಯಾನ್

129ರೂ. ಪ್ರೀಪೆಡ್ ಪ್ಲ್ಯಾನ್

ವೊಡಾಫೋನ್‌ ಸಂಸ್ಥೆಯ ಅಗ್ಗದ ಪ್ರೀಪೇಡ್‌ ಪ್ಲ್ಯಾನ್ ಇದಾಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು, ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡಾಟಾ ಸೌಲಭ್ಯ ಸೌಲಭ್ಯಗಳನ್ನು ಹೊಂದಿದೆ. ಇದರೊಂದಿಗೆ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳನ್ನು ಪಡೆದಿದೆ.

169ರೂ. ಪ್ರೀಪೆಡ್ ಪ್ಲ್ಯಾನ್

169ರೂ. ಪ್ರೀಪೆಡ್ ಪ್ಲ್ಯಾನ್

ಜನಪ್ರಿಯ ವೊಡಾಫೋನ್‌ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಈ 169ರೂ. ಪ್ರೀಪೆಡ್ ಪ್ಲ್ಯಾನ್ ಸಹ ಒಂದಾಗಿದ್ದು, ಈ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಜೊತೆಗೆಗ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಪ್ರತಿದಿನ 1GB ಡಾಟಾ ಸೌಲಭ್ಯ ಸೌಲಭ್ಯಗಳನ್ನು ಹೊಂದಿದೆ. ಇದರೊಂದಿಗೆ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳನ್ನು ಪಡೆದಿದೆ.

199ರೂ. ಪ್ರೀಪೆಡ್ ಪ್ಲ್ಯಾನ್

199ರೂ. ಪ್ರೀಪೆಡ್ ಪ್ಲ್ಯಾನ್

ವೊಡಾಫೋನ್‌ನಿನ 199ರೂ. ಪ್ರೀಪೆಡ್ ಪ್ಲ್ಯಾನ್ ಆಕರ್ಷಿಸಿದ್ದು, ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳು ದೊರೆಯಲಿವೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳು ಸಹ ಲಭ್ಯವಾಗಲಿವೆ.

225ರೂ. ಪ್ರೀಪೆಡ್ ಪ್ಲ್ಯಾನ್

225ರೂ. ಪ್ರೀಪೆಡ್ ಪ್ಲ್ಯಾನ್

ವೊಡಾಫೋನ್‌ನಿನ 225ರೂ. ಪ್ರೀಪೆಡ್ ಪ್ಲ್ಯಾನ್ ಗ್ರಾಹಕರಿಗೆ ಬೆಸ್ಟ್‌ ಅನಿಸಿದ್ದು, ಈ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳು ದೊರೆಯಲಿವೆ. ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 4GB ಡಾಟಾ ಸಿಗಲಿದೆ.

399ರೂ. ಪ್ರೀಪೆಡ್ ಪ್ಲ್ಯಾನ್

399ರೂ. ಪ್ರೀಪೆಡ್ ಪ್ಲ್ಯಾನ್

ವೊಡಾಫೋನ್‌ನಿನ 399ರೂ. ಪ್ರೀಪೆಡ್ ಪ್ಲ್ಯಾನ್ ಸಹ ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಈ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳು ದೊರೆಯಲಿವೆ. ಹಾಗೂ ಪ್ರತಿದಿನ 1GB ಡಾಟಾ ಜೊತೆಗೆ 100 ಉಚಿತ ಎಸ್ಎಮ್ಎಸ್‌ಗಳು ಸಹ ಸಿಗಲಿವೆ.

458ರೂ. ಪ್ರೀಪೆಡ್ ಪ್ಲ್ಯಾನ್

458ರೂ. ಪ್ರೀಪೆಡ್ ಪ್ಲ್ಯಾನ್

ವೊಡಾಫೋನ್‌ನಿನ 458ರೂ. ಪ್ರೀಪೆಡ್ ಪ್ಲ್ಯಾನ್ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಲೋಕಲ್ ಮತ್ತು ನ್ಯಾಶನಲ್ ಅನಿಯಮಿತ ಉಚಿತ ಕರೆಗಳ ಪ್ರಯೋಜನಗಳು ದೊರೆಯಲಿವೆ. ಹಾಗೂ ಪ್ರತಿದಿನ 1.5GB ಡಾಟಾ ಜೊತೆಗೆ 100 ಉಚಿತ ಎಸ್ಎಮ್ಎಸ್‌ಗಳು ಸಹ ಸಿಗಲಿವೆ. ಮೈ ವೊಡಾಫೋನ್ ಆಪ್‌ನಲ್ಲಿ ಕ್ಯಾಶ್‌ಬ್ಯಾಕ್‌ ಸೌಲಭ್ಯವನ್ನು ಹೊಂದಿದೆ.

Best Mobiles in India

English summary
Vodafone ships a lot of prepaid plans under Rs 500 price range and some of them come with daily data, and other benefits. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+