ವೊಡಾಫೋನ್ ಐಡಿಯಾ ಈಗ Vi: ನೂತನ ಲೋಗೋ ಅನಾವರಣ!

|

ದೇಶದ ಟೆಲಿಕಾಂ ವಲಯದಲ್ಲಿ ಹಲವು ಬದಲಾವಣೆಗಳು ಸಾಗಿವೆ. ಅದರಲ್ಲಿ ಜನಪ್ರಿಯ ವೊಡಾಫೋನ್ ಸಂಸ್ಥೆಯ ಹಾಗೂ ಐಡಿಯಾ ಟೆಲಿಕಾಂ ಜೊತೆಯಾಗಿ ವೊಡಾಫೋನ್ ಐಡಿಯಾ ಹೆಸರಿನಲ್ಲಿ ಸೇವೆ ನೀಡುತ್ತಿವೆ. ಆದರೆ ವೊಡಾಫೋನ್ ಐಡಿಯಾ ಇದೀಗ ಹೊಸ ಬ್ರ್ಯಾಂಡ್‌ ಹಾಗೂ ನವೀನ ಲೋಗೋ ರೂಪದಲ್ಲಿ ಕಾಣಿಸಿಕೊಂಡಿದೆ.

ವೊಡಾಫೋನ್ - ಐಡಿಯಾ

ಹೌದು, ಪ್ರತಿಷ್ಠಿತ ವೊಡಾಫೋನ್ - ಐಡಿಯಾ ಟೆಲಿಕಾಂ ಸಂಸ್ಥೆಯು ಬ್ರ್ಯಾಂಡ್‌ ಹೆಸರು ಹಾಗೂ ಲೋಗೋ ಬದಲಾವಣೆ ಘೋಷಿಸಿದೆ. ಕಂಪನಿಯ ತನ್ನ ಲೋಗೋ ಮತ್ತು ಬ್ರಾಂಡ್ ಎರಡನ್ನೂ ಬದಲಾಯಿಸಿದ್ದು, ನೂತನ ಅವತಾರದಲ್ಲಿ ಅನಾವರಣ ಮಾಡಿದೆ. ವೊಡಾಫೋನ್ ಐಡಿಯಾದ ನೂತನ ಬ್ರ್ಯಾಂಡ್ ಹೆಸರು 'Vi' ಆಗಿದೆ. ಲೊಗೊ ಸಹ 'Vi' ಹೆಸರಿನಲ್ಲಿ ಕಾಣಿಸಿಕೊಂಡಿದೆ.

ಬ್ರ್ಯಾಂಡ್ Vi

ನಮ್ಮ ಹೊಸ ಏಕೀಕೃತ ವ್ಯವಹಾರವನ್ನು ಹೊಸ ಏಕೀಕೃತ ಬ್ರ್ಯಾಂಡ್ Vi ಅಡಿಯಲ್ಲಿ ಪ್ರಾರಂಭಿಸಲು ಇದು ಒಂದು ಪ್ರಮುಖ ಮುಂದಿನ ಹಂತವಾಗಿದೆ. ಎರಡು ವ್ಯವಹಾರಗಳ ಏಕೀಕರಣವು ಈಗ ಪೂರ್ಣಗೊಂಡಿರುವುದರಿಂದ, ಇದು ಹೊಸ ಪ್ರಾರಂಭದ ಸಮಯ. ಅದಕ್ಕಾಗಿಯೇ ವೊಡಾಫೋನ್ ಇಂಡಿಯಾ ಮತ್ತು ಐಡಿಯಾದ ಸಾಮರ್ಥ್ಯವನ್ನು ಸಂಯೋಜಿಸುವ ಒಂದು ಕಂಪನಿಯಾದ ವಿ ಅನ್ನು ಪ್ರಾರಂಭಿಸಲು ಇದೀಗ ಸೂಕ್ತ ಸಮಯ ಎಂದು ನಾವು ನಂಬುತ್ತೇವೆ. ಎಂದು ವೊಡಾಫೋನ್ ಗ್ರೂಪ್ ಪಿಎಲ್‌ಸಿಯ ಸಿಇಒ ನಿಕ್ ರೀಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಟ್‌ವರ್ಕ್

ನೆಟ್‌ವರ್ಕ್ ಏಕೀಕರಣ ಮತ್ತು ಏಕ ಬ್ರಾಂಡ್ ಗುರುತನ್ನು ಪೂರ್ಣಗೊಳಿಸುವುದರಿಂದ ಕಂಪನಿಯು ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಅನುಭವವನ್ನು ಮತ್ತು ಉತ್ತಮ ಗ್ರಾಹಕ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಬ್ರಾಂಡ್ ಶೀಘ್ರದಲ್ಲೇ ದೇಶಾದ್ಯಂತ ‘ವಿ-Vi ಮಿನಿ ಸ್ಟೋರ್‌ಗಳನ್ನು' ಪ್ರಾರಂಭಿಸಲಿದೆ ಎಂದು ಕಂಪನಿಯು ಹೇಳಿದೆ.

ವೊಡಾಫೋನ್

ವೊಡಾಫೋನ್ ಮತ್ತು ಐಡಿಯಾ ನೆಟ್‌ವರ್ಕ್‌ಗಳ ನಡುವೆ ನೆಟ್‌ವರ್ಕ್ ಏಕೀಕರಣ ಪ್ರಾರಂಭವಾದಾಗಿನಿಂದ, ಬಹಳಷ್ಟು ಗ್ರಾಹಕರು ಸಮಸ್ಯೆಗಳನ್ನು ಎದುರಿಸಿದರು, ಆದರೆ ಆಶಾದಾಯಕವಾಗಿ, ಇದೀಗ ವೊಡಾಫೋನ್ ಐಡಿಯಾ ಟೆಲಿಕಾಂಗಳು ಒಂದೇ ಬ್ರ್ಯಾಂಡ್‌ನಿಂದ ಹೊರಹೊಮ್ಮಿವೆ. ವೊಡಾಫೋನ್ ಐಡಿಯಾ ಹೊಸ ಬ್ರ್ಯಾಂಡ್‌ ಅನಾವರಣ ನಂತರ ಯಾವುದೇ ನೂತನ ಪ್ಲ್ಯಾನ್‌ಗಳ ಬಗ್ಗೆ ಮಾಹಿತಿ ನೀಡಿಲ್ಲ.

Most Read Articles
Best Mobiles in India

English summary
Vodafone and Idea brands today announced the completion of network integration which both the brands started back in 2018.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X