Home
ಸುದ್ದಿಜಾಲ

ವೊಡಾಫೋನ್-ಐಡಿಯಾ ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌ ಜಸ್ಟ್‌ 100ರೂ.!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಹಾಗೂ ಏರ್‌ಟೆಲ್‌ ಅತ್ಯುತ್ತಮ ಯೋಜನೆಗಳ ಜೊತೆಗೆ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತೆ ವೊಡಾಫೋನ್ ಐಡಿಯಾ ಟೆಲಿಕಾಂ ಸಹ ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ವೊಡಾಫೋನ್ ಐಡಿಯಾದ ಪೋಸ್ಟ್‌ಪೇಯ್ಡ್‌ ಡೇಟಾ ಯೋಜನೆಯ ಆರಂಭಿಕ ಬೆಲೆಯ ಜಸ್ಟ್‌ 100ರೂ. ಆಗಿದೆ.

ವೊಡಾಫೋನ್ ಐಡಿಯಾ

ಹೌದು, ವೊಡಾಫೋನ್ ಐಡಿಯಾ (ವಿ-Vi) ಟೆಲಿಕಾಂ ಅತ್ಯುತ್ತಮ ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅದರೊಂದಿಗೆ ಪೋಸ್ಟ್‌ಪೇಯ್ಡ್‌ನಲ್ಲಿಯೂ ಬೆಸ್ಟ್‌ ಡೇಟಾ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ವಿ ಸಂಸ್ಥೆಯು 100ರೂ ಹಾಗೂ 200ರೂ ಬೆಲೆಯ ಎರಡು ಪೋಸ್ಟ್‌ಪೇಯ್ಡ್‌ ಡೇಟಾ ಯೋಜನೆಗಳನ್ನು ಹೊಂದಿದ್ದು, ಅವುಗಳ ಅಧಿಕ ಡೇಟಾ ಸೌಲಭ್ಯದಿಂದ ಆಕರ್ಷಕ ಪ್ಲ್ಯಾನ್‌ಗಳಾಗಿ ಕಾಣಿಸಿಕೊಂಡಿವೆ. ಹಾಗಾದರೇ ಆ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

100ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

100ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

ವೊಡಾಫೋನ್ ಐಡಿಯಾ ಟೆಲಿಕಾಂ 100ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌ 20GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹೆಚ್ಚುವರಿ ಡೇಟಾ ಅಗತ್ಯ ಇರುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಅನಿಸಲಿದೆ.

200ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

200ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

ಅದೇ ರೀತಿ ವೊಡಾಫೋನ್ ಐಡಿಯಾ ಟೆಲಿಕಾಂ 200ರೂ. ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌ ಒಟ್ಟು 50GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇದು ಸಹ ಹೆಚ್ಚುವರಿ ಡೇಟಾ ಅಗತ್ಯ ಇರುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿ ಕಾಣಿಸಲಿದೆ.

ಇತರೆ ಟೆಲಿಕಾಂ ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

ಇತರೆ ಟೆಲಿಕಾಂ ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌

ಏರ್‌ಟೆಲ್‌ ಜಿಯೋ ಟೆಲಿಕಾಂ ಸಹ ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌ ಆಯ್ಕೆಗಳನ್ನು ತಮ್ಮ ಗ್ರಾಹಕರಿಗೆ ನೀಡಿವೆ. ಅವುಗಳಲ್ಲಿ ಏರ್‌ಟೆಲ್‌ ಎರಡು ಪೋಸ್ಟ್‌ಪೇಯ್ಡ್‌ ಡೇಟಾ ಪ್ಲ್ಯಾನ್‌ಗಳು ಕ್ರಮವಾಗಿ 15GB ಮತ್ತು 35GB ಡೇಟಾ ಪ್ರಯೋಜನವನ್ನು ನೀಡುತ್ತವೆ. ಹಾಗೆಯೇ ಜಿಯೋ ತನ್ನ ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಯೋಜನೆ ಬಳಕೆದಾರರಿಗೆ ನಿಗದಿತ ಡೇಟಾ ಮುಗಿದ ಬಳಿಕ 1GB ಡೇಟಾ ಗೆ 10ರೂ. ಶುಲ್ಕ ವಿಧಿಸುತ್ತದೆ ಎನ್ನಲಾಗಿದೆ.

Best Mobiles in India

English summary
The two data packs for Vi postpaid users are Rs 100 and Rs 200, and they offer up to 50GB data benefit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+