ವಿ ಟೆಲಿಕಾಂ 267ರೂ ಮತ್ತು ಜಿಯೋ 247ರೂ: ರೀಚಾರ್ಜ್‌ಗೆ ಯಾವುದು ಯೋಗ್ಯ?
ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ವಿ ಟೆಲಿಕಾಂ (ವೊಡಾಫೋನ್-ಐಡಿಯಾ) ಸಂಸ್ಥೆಗಳು ತಮ್ಮ ಚಂದಾದಾರರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳು ಗಮನ ಸೆಳೆದಿವೆ. ಆದರೆ ಬಜೆಟ್ ದರದಲ್ಲಿನ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಹೆಚ್ಚು ಆಕರ್ಷಿಸಿವೆ. ಆ ಪೈಕಿ ಬಹುತೇಕ ಬಳಕೆದಾರರು 300ರೂ. ಬೆಲೆಯ ಒಳಗಿನ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, ಜಿಯೋ ಮತ್ತು ವಿ ಟೆಲಿಕಾಂ ಸಂಸ್ಥೆಗಳು 300ರೂ. ಬೆಲೆಯೊಳಗೆ ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್ ಆಯ್ಕೆ ಹೊಂದಿವೆ. ಈ ದರದಲ್ಲಿ ಮುಖ್ಯವಾಗಿ ವಿ ಟೆಲಿಕಾಂನ 267ರೂ. ಮತ್ತು ಜಿಯೋ 247ರೂ. ಪ್ರೀಪೇಯ್ಡ್ ಯೋಜನೆಗಳು ಆಕರ್ಷಕ ಸೌಲಭ್ಯಗಳನ್ನು ಹೊಂದಿವೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ, ಅಧಿಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ವಿ ಟೆಲಿಕಾಂನ 267ರೂ. ಮತ್ತು ಜಿಯೋ 247ರೂ. ಪ್ರೀಪೇಯ್ಡ್ ಯೋಜನೆಗಳಲ್ಲಿ ಯಾವುದು ಯೋಗ್ಯ? ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 267ರೂ. ಪ್ರೀಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂ 267ರೂ. ಪ್ರೀಪೇಯ್ಡ್ ಯೋಜನೆಯಲ್ಲಿ 25GB ಡೇಟಾದ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳನ್ನು ನೀಡುತ್ತಿದೆ. ಈ ರೀಚಾರ್ಜ್ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಸಂದೇಶಗಳನ್ನು ಸಹ ಒಳಗೊಂಡಿದೆ. ಬಳಕೆದಾರರು ವಿ ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ಇದು ಎಲ್ಲಾ ವಲಯಗಳಲ್ಲಿ ಲಭ್ಯವಿದೆ. ಈ ಪ್ರಿಪೇಯ್ಡ್ ಯೋಜನೆಯನ್ನು ಗೂಗಲ್ ಪೇ ಅಥವಾ ಪೇಟಿಎಂ ಮೂಲಕವೂ ರೀಚಾರ್ಜ್ ಮಾಡಿಸಬಹುದು.

ಜಿಯೋ 247ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವು ಲಭ್ಯ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಟಿವಿ ಸೇವೆಗಳು ದೊರೆಯುತ್ತವೆ. ಹಾಗೆಯೇ ಈ ಎರಡು ಟೆಲಿಕಾಂಗಳ ಬಜೆಟ್ ದರದಲ್ಲಿ ಅಧಿಕ ವ್ಯಾಲಿಡಿಟಿಯ ಪ್ಲ್ಯಾನ್ ಮಾಹಿತಿ ತಿಳಿಯಲು ಮುಂದೆ ಓದಿರಿ.

ವಿ ಟೆಲಿಕಾಂ 555ರೂ. ಪ್ರೀಪೇಯ್ಡ್ ಪ್ಲ್ಯಾನ್
ವೊಡಾಫೋನ್ ಟೆಲಿಕಾಂನ ಈ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್ ಆಗಿದ್ದು, ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಹಾಗೂ 100 ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡಲಿದೆ. ಹಾಗೆಯೇ ಅನಿಯಮಿತ ಕರೆಗಳ ಸೌಲಭ್ಯವನ್ನು ಪಡೆದಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿನ ಮನರಂಜನೆಯ ಸೇವೆಗಳ ಸೌಲಭ್ಯ ಸಹ ಒದಗಿಸಲಿದೆ.

ಜಿಯೋ 555ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.


Click it and Unblock the Notifications








