ವೊಡಾಫೋನ್ ನಿಂದ ಮತ್ತೊಂದು ಬಂಪರ್ ಆಫರ್: ಶೀಘ್ರವೇ ನಿಮ್ಮದಾಗಿಸಿಕೊಳ್ಳಿ..!
ಕೇವಲ 4G ಫೋನ್ ಇರುವರಿಗೆ ಮಾತ್ರವೇ ಆಫರ್ ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ವೊಡಾಫೋನ್ ಈ ಬಾರಿ 3G/4G ಡೇಟಾವನ್ನು ನೀಡುವ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.
ಭಾರತದ ಎರಡನೇ ಅತೀ ದೊಡ್ಡ ನೆಟ್‌ವರ್ಕ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವೊಡಾಫೋನ್ ಈ ಬಾರಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ದೊಂದು ಆಫರ್ ಬಿಡುಗಡೆ ಮಾಡಲು ಮುಂದಾಗಿದೆ. ಇದರಿಂದ ಇನ್ನು ಹೆಚ್ಚಿನ ಜನರು ವೊಡಾಫೋನ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಓದಿರಿ: ಪಾಸ್‌ಪೋರ್ಟ್ ಮಾಡಿಸಿವುವವರಿಗೆ ಸಂತಸದ ವಿಚಾರ: ಪೋಲಿಸ್ ವೆರಿಫಿಕೇಷನ್ ಕಿರಿಕಿರಿ ತಪ್ಪಲಿದೆ..!
ಈ ಮೊದಲು ಕೇವಲ 4G ಫೋನ್ ಇರುವರಿಗೆ ಮಾತ್ರವೇ ಆಫರ್ ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ವೊಡಾಫೋನ್ ಈ ಬಾರಿ 3G/4G ಡೇಟಾವನ್ನು ನೀಡುವ ಆಫರ್ ವೊಂದನ್ನು ಬಿಡುಗಡೆ ಮಾಡಿದ್ದು, ಇದು ಟೆಲಿಕಾಂ ವಲಯದಲ್ಲಿ ಹೊಸ ಅಲೆ ಎಬ್ಬಿಸಲಿದೆ.

ರೂ.344ಕ್ಕೆ ಆಫರ್ ಲಭ್ಯ:
ಇಡೀ ಭಾರತದಲ್ಲಿ ಈ ಆಫರ್ ಲಭ್ಯವಿರಲಿದ್ದು, ರೂ.344ಕ್ಕೆ 28 ದಿನಗಳ ಕಾಲ ವಾಲಿಡಿಟಿ ಇರುವ ಆಫರ್ ಘೋಷಣೆಯಾಗಿದೆ. ಇಲ್ಲಿ ಗ್ರಾಹಕರು ಉಚಿತ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ.

ದಿನಕ್ಕೊಂದು GB ಡೇಟಾ, ಉಚಿತ ಕರೆ:
ಈ ಆಪರ್ ನಲ್ಲಿ ವೊಡಾಫೋನ್ ಗ್ರಾಹಕರು ಅನ್‌ಲಿಮಿಟೆಡ್ ಕಾಲಿಂಗ್ ಸೇವೆಯೊಂದಿಗೆ ಪ್ರತಿ ನಿತ್ಯ ಒಂದು GB 3G/4G ಡೇಟಾವನ್ನು ಪಡೆಯಬಹುದಾಗಿದೆ. ಅಲ್ಲದೇ ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್‌ನಿಂದಲೂ ಆಫರ್ ಸಾಧ್ಯತೆ:
ಎಲ್ಲಾ ಕಂಪನಿಗಳು 4G ಗ್ರಾಹಕರನ್ನು ಸೆಳೆಯುತ್ತಿರುವ ಸಂದರ್ಭದಲ್ಲಿ ವೊಡಾಫೋನ್ ಮಾದರಿಯಲ್ಲಿ 3G ಗ್ರಾಹಕರಿಗೂ ಡೇಟಾ ಲಾಭವನ್ನು ನೀಡಲು ಮುಂದಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ಹೊಸದೊಂದು ಆಫರ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications