Home
ಸುದ್ದಿಜಾಲ

ವೊಡಾಫೋನಿನ 5 ಪ್ಲ್ಯಾನ್‌ಗಳು; ಪ್ರತಿದಿನ 1.5GB ಡೇಟಾ, ಅನಿಯಮಿತ ಕರೆ ಸೌಲಭ್ಯ!

ಕೊರೊನಾ ವೈರಸ್‌ ನಿಯಂತ್ರಿಸುವುದಕ್ಕಾಗಿ ಸರ್ಕಾರ ದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರರಿಗೆ ಅನುಕೂಲಕರ ಯೋಜನೆಗಳನ್ನು ಘೋಷಿಸುತ್ತ ಸಾಗಿವೆ. ಆ ಪೈಕಿ ವೊಡಾಫೋನ್ ಗ್ರಾಹಕರಿಗೆ ಎಸ್‌ಎಮ್‌ಎಸ್‌ ಹಾಗೂ ಮಿಸ್‌ ಕಾಲ್ ನೀಡಿ ಮೊಬೈಲ್ ನಂಬರ್ ರೀಚಾರ್ಜ್ ಮಾಡಿಕೊಳ್ಳುವ ಸೇವೆಯನ್ನು ಪರಿಚಯಿಸಿದೆ ಹಾಗೆಯೇ ಕೆಲವು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಘೋಷಿಸಿದೆ.

ವೊಡಫೋನ್ ಟೆಲಿಕಾಂ

ಹೌದು, ವೊಡಫೋನ್ ಟೆಲಿಕಾಂ ಹೊಸದಾಗಿ ಐದು ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು (2020) ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ 249ರೂ, 399ರೂ, 499ರೂ, 555ರೂ ಮತ್ತು 599ರೂ. ಪ್ರೈಸ್‌ಟ್ಯಾಗ್‌ ಹೊಂದಿವೆ. ಈ ಪ್ಲ್ಯಾನ್‌ಗಳಲ್ಲಿ ಚಂದಾದಾರರಿಗೆ ಪ್ರತಿದಿನ ಡೇಟಾ ಸೌಲಭ್ಯ ಸೇರಿದಂತೆ ಅನಿಯಮಿತ ಕರೆ, ಉಚಿತ ಎಸ್‌ಎಮ್‌ಎಸ್‌ ಹಾಗೂ ವೊಡಾಫೋನ್ ಆಪ್‌ ಸೇವೆಗಳ ಪ್ರಯೋಜನಗಳು ದೊರೆಯುತ್ತವೆ. ವೊಡಾಫೋನ್ ಪ್ಲ್ಯಾನ್‌ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನಿನ 249ರೂ.ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ. ಕಡಿಮೆ ಬೆಲೆಗೆ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಬೆಸ್ಟ್ ಆಯ್ಕೆ ಆಗಿದೆ. ಸದ್ಯ ಈ ಯೋಜನೆ ಡಬಲ್ ಡೇಟಾ ಆಫರ್‌ ಲಭ್ಯ ಇದ್ದು, ಪ್ರತಿದಿನ ಹೆಚ್ಚುವರಿಯಾಗಿ 1.5GB ಡೇಟಾ ಸಿಗುತ್ತೆ ಹೀಗಾಗಿ ಒಟ್ಟು ಪ್ರತಿದಿನ 3GB ಡೇಟಾ ಸಿಗಲಿದೆ. ಆದರೆ ಈ ಕೊಡುಗೆ ಸೀಮಿತ ಅವಧಿಯದ್ದಾಗಿದೆ.

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನಿನ 399ರೂ.ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಸಹ ಲಭ್ಯ. ಸದ್ಯ ಈ ಯೋಜನೆ ಡಬಲ್ ಡೇಟಾ ಆಫರ್‌ ಲಭ್ಯ ಇದ್ದು, ಪ್ರತಿದಿನ ಹೆಚ್ಚುವರಿಯಾಗಿ 1.5GB ಡೇಟಾ ಸಿಗುತ್ತೆ ಹೀಗಾಗಿ ಒಟ್ಟು ಪ್ರತಿದಿನ 3GB ಡೇಟಾ ಸಿಗಲಿದೆ. ಆದರೆ ಈ ಕೊಡುಗೆ ಸೀಮಿತ ಅವಧಿಯದ್ದಾಗಿದೆ.

ವೊಡಾಫೋನ್ 499ರೂ.ಪ್ಲ್ಯಾನ್

ವೊಡಾಫೋನ್ 499ರೂ.ಪ್ಲ್ಯಾನ್

ವೊಡಾಫೋನಿನ 499ರೂ.ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಕೆಲವು ಆಯ್ದ ಟೆಲಿಕಾಂ ಸರ್ಕಲ್‌ಗಳಲ್ಲಿ ಮಾತ್ರ ಲಭ್ಯ ಇದೆ.

ವೊಡಾಫೋನ್ 555ರೂ.ಪ್ಲ್ಯಾನ್

ವೊಡಾಫೋನ್ 555ರೂ.ಪ್ಲ್ಯಾನ್

ವೊಡಾಫೋನಿನ 555ರೂ.ಪ್ಲ್ಯಾನ್ 77 ದಿನಗಳ ವ್ಯಾಲಿಡಿಟಿ ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಜೊತೆಗೆ ಪ್ರತಿದಿನ 1.5GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೂ ವೊಡಾಫೋನ್‌ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಸಹ ಕೆಲವು ಆಯ್ದ ಟೆಲಿಕಾಂ ಸರ್ಕಲ್‌ಗಳಲ್ಲಿ ಮಾತ್ರ ಲಭ್ಯ ಇದೆ.

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನಿನ 599ರೂ. ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ವೊಡಾಫೋನ್‌ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಸಹ ಲಭ್ಯ. ಸದ್ಯ ಈ ಯೋಜನೆ ಡಬಲ್ ಡೇಟಾ ಆಫರ್‌ ಲಭ್ಯ ಇದ್ದು, ಪ್ರತಿದಿನ ಹೆಚ್ಚುವರಿಯಾಗಿ 1.5GB ಡೇಟಾ ಸಿಗುತ್ತೆ ಹೀಗಾಗಿ ಒಟ್ಟು ಪ್ರತಿದಿನ 3GB ಡೇಟಾ ಸಿಗಲಿದೆ. ಆದರೆ ಈ ಕೊಡುಗೆ ಸೀಮಿತ ಅವಧಿಯದ್ದಾಗಿದೆ.

Best Mobiles in India

English summary
The latest Vodafone prepaid recharge plans come with 1.5GB daily data, unlimited voice calling and 100 SMS per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+