ವೊಡಾಫೋನ್ ಹೊಸ ಪ್ಲ್ಯಾನ್ : ಪ್ರತಿದಿನ 1.5GB ಮತ್ತು 70 ದಿನ ವ್ಯಾಲಿಡಿಟಿ!
ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿವೆ. ಇದರಿಂದ ತಮ್ಮ ಚಂದಾದಾರರನ್ನು ಕಳೆದುಕೊಳ್ಳಬಾರದೆಂದು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತೊಡಗಿವೆ. ಬಳಕೆದಾರರನ್ನು ಸೆಳೆಯುವಲ್ಲಿ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಈ ಮೂರು ಟೆಲಿಕಾಂಗಳು ಪೈಪೋಟಿಯಲ್ಲಿವೆ. ಇದೀಗ ಗ್ರಾಹಕರಿಗೆ ಮತ್ತೆರಡು ಹೊಸ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಹೌದು, ವೊಡಾಪೋನ್ ಸಂಸ್ಥೆಯು ಹೊಸದಾಗಿ 99ರೂ. ಮತ್ತು 555ರೂ. ಬೆಲೆಯ ಎರಡು ಪ್ರೀಪೇಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಪ್ಲ್ಯಾನ್‌ಗಳು ಭಿನ್ನ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು ಆದರೆ ಎರಡು ಪ್ಲ್ಯಾನ್‌ಗಳು ಸಹ ಡಾಟಾ ಮತ್ತು ವೊಡಾಫೋನ್ ಆಪ್ ಸೇವೆಗಳ ಪ್ರಯೋಜನಗಳನ್ನು ಪಡೆದಿವೆ. ಹಾಗಾದರೆ ವೊಡಾಫೋನ್ ಟೆಲಿಕಾಂನ ಈ ಎರಡು ಪ್ಲ್ಯಾನ್‌ಗಳ ಇತರೆ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಸ್ಕ್ರಾಲ್ ಮಾಡಿರಿ.

ವೊಡಾಫೋನ್ 99ರೂ
ವೊಡಾಪೋನ್ 99ರೂ. ಪ್ರೀಪೇಡ್ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಕೇವಲ 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಇನ್ನು ಈ ಪ್ಲ್ಯಾನ್ ಪೂರ್ಣ ವ್ಯಾಲಿಡಿಟಿ ಅವಧಿಗೆ 1GB ಡಾಟಾ ಪ್ರಯೋಜನವನ್ನು ಒದಗಿಸಲಿದ್ದು, ಅದರೊಂದಿಗೆ 100ಎಸ್‌ಎಮ್ಎಸ್ ಸಹ ನೀಡುತ್ತದೆ. ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಹ ಇರಲಿದ್ದು, ವೊಡಾಫೋನ್ ಆಪ್‌ನ ಮನರಂಜನೆಯ ಸೇವೆಗಳು ದೊರೆಯಲಿವೆ. ಇನ್ನು ಈ ಪ್ಲ್ಯಾನ್ ಕಲ್ಕತ್ತಾ, ಓಡಿಸಾ, ತಮಿಳನಾಡು, ರಾಜಸ್ಥಾನ, ಸೇರಿದಂತೆ ಆಯ್ದ ನಗರಗಳಲ್ಲಿ ಮಾತ್ರ ಚಾಲ್ತಿ ಇದೆ.

ವೊಡಾಫೋನ್ 555ರೂ
ವೊಡಾಫೋನಿನ ಈ 555ರೂ. ಪ್ರೀಪೇಡ್ ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್ ಆಗಿದ್ದು, ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಹಾಗೂ 100 ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡಲಿದೆ. ಹಾಗೆಯೇ ಅನಿಯಮಿತ ಕರೆಗಳ ಸೌಲಭ್ಯವನ್ನು ಪಡೆದಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿನ ಮನರಂಜನೆಯ ಸೇವೆಗಳ ಸೌಲಭ್ಯ ಸಹ ಒದಗಿಸಲಿದೆ. ಸದ್ಯ ಈ ಪ್ಲ್ಯಾನ್ ಮುಂಬೈ ನಗರದಲ್ಲಿ ಮಾತ್ರ ಲಭ್ಯ ಇದೆ.

ಇತರೆ ಪ್ಲ್ಯಾನ್‌ಗಳೊಂದಿಗೆ ಹೋಲಿಕೆ
ಏರ್‌ಟೆಲ್‌ನ 149ರೂ ಪ್ಲ್ಯಾನ್ ಮತ್ತು ವೊಡಾಫೋನ್ 99ರೂ ಪ್ಲ್ಯಾನ್‌ಗಳ ನಡುವೆ ಹೋಲಿಕೆ ನೋಡುವುದಾದರೇ, ಏರ್‌ಟೆಲ್ 149ರೂ ಪ್ಲ್ಯಾನಿನಲ್ಲಿ 2GB ಡಾಟಾ, 28 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಅದೇ ವೊಡಾಫೋನ್ 99ರೂ ಪ್ಲ್ಯಾನ್ 1GB ಡಾಟಾ ಮತ್ತು 18 ದಿನಗಳ ವಾಯಿದೆ ಹೊಂದಿದೆ. ವೊಡಾಫೋನಿನ 555ರೂ ಪ್ಲ್ಯಾನ್ 70 ದಿನಗಳ ವ್ಯಾಲಿಡಿಟಿ ಹೊಂದಿದ್ದರೇ, ವೊಡಾಫೋನಿನ 598ರೂ. ಪ್ಲ್ಯಾನ್ 84ದಿನಗಳ ವಾಯಿದೆ ಪಡೆದಿದೆ. ಉಳಿದಂತೆ ಎರಡು ಪ್ಲ್ಯಾನ್‌ಗಳ ಪ್ರಯೋಜನಗಳು ಒಂದೇ ಆಗಿವೆ.


Click it and Unblock the Notifications








