ರಿಲಯನ್ಸ್ ಸೇರಿ ಎಲ್ಲಾ ಗ್ರಾಹಕರಿಗೆ ವೊಡಾಫೋನ್ ಆಹ್ವಾನ!..ಪೋರ್ಟ್ ಆದವರಿಗೆ ಭರ್ಜರಿ ಆಫರ್!!

|

ಭಾರಿ ನಷ್ಟದಿಂದ ಮುಚ್ಚುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಗ್ರಾಹಕರನ್ನು ತನ್ನತ್ತ ಸೆಳೆಯಲು ವೊಡಾಫೋನ್ ಮುಂದಾಗಿದೆ. ರಿಲಯನ್ಸ್ ಗ್ರಾಹಕರು ತಮ್ಮ ಹಾಲಿ ನಂಬರ್ ಉಳಿಸಿಕೊಂಡು ವೊಡಾಫೋನ್ ಚಂದಾದಾರರಾಗಲು ಅವಕಾಶ ಕಲ್ಪಿಸಿದ್ದು, ಜೊತೆಗೆ ಎಲ್ಲಾ ಪೋರ್ಟ್ ಗ್ರಾಹಕರಿಗೂ ಉತ್ತಮ ಆಫರ್ ನೀಡಿದೆ.!!

ಹಾಗಾಗಿ, ನಂಬರ್ ಪೋರ್ಟ್ ಮಾಡುವ ಮೂಲಕ ರಿಲಯನ್ಸ್ ಗ್ರಾಹಕರು ನೆಟ್‍ವರ್ಕ್ ಕಡಿತವಿಲ್ಲದೇ ಸರಾಗವಾಗಿ ವೊಡಾಫೋನ್ ಚಂದಾದಾರರಾಗಬಹುದಾಗಿದ್ದು, ರಿಲಯನ್ಸ್ ಕಮ್ಯುನಿಕೇಷನ್ಸ್ ಗ್ರಾಹಕರು ವೊಡಾಫೋನ್‌ಗೆ ಪೋರ್ಟ್ ಆಗುವುದು ಹೇಗೆ? ಮತ್ತು ಎಲ್ಲಾ ಪೋರ್ಟ್ ಗ್ರಾಹಕರಿಗೂ ವೊಡಾಫೋನ್ ನೀಡಿರುವ ಆಫರ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪೋರ್ಟ್ ಆಗುವುದು ಹೇಗೆ?

ಪೋರ್ಟ್ ಆಗುವುದು ಹೇಗೆ?

ಯಾವುದೇ ಗ್ರಾಹಕರು ಮೊಬೈಲ್‌ನಲ್ಲಿ ನೆಟ್‍ವರ್ಕ್ ಸೆಟ್ಟಿಂಗ್‌ಗೆ ಹೋಗಿ ಮ್ಯಾನುಯೆಲ್ ಆಗಿ ವೊಡಾಫೋನ್ ನೆಟ್‍ವರ್ಕ್ ಆಯ್ಕೆಮಾಡಿಕೊಂಡು, ದಪ್ಪಕ್ಷರದಲ್ಲಿ ಪೋರ್ಟ್ ಎಂದು ಟೈಪಿಸಿ ರಿಲಯನ್ಸ್ ಗ್ರಾಹಕರ ಸಂಖ್ಯೆ' (ಉದಾ: PORT 84960525**)ಎಸ್‌ಎಂಎಸ್‌ ಅನ್ನು 1900 ಸಂಖ್ಯೆಗೆ ಕಳುಹಿಸಿ ಎಂಎನ್‍ಪಿ ಕೋಡ್ ಪಡೆದು ದಾಖಲೆಗಳನ್ನು ಸಲ್ಲಿಸಬೇಕು ಎಂದು ವೊಡಾಫೋನ್ ತಿಳಿಸಿದೆ.!

ಪೋರ್ಟ್ ಆದರೆ ಇರುವ ಆಫರ್?

ಪೋರ್ಟ್ ಆದರೆ ಇರುವ ಆಫರ್?

ರಿಲಯನ್ಸ್ ಗ್ರಾಹಕರು ಸೇರಿದಂತೆ ಯಾವುದೇ ಟೆಲಿಕಾಂನ ಗ್ರಾಹಕರು ತನ್ನ ಟೆಲಿಕಾಂಗೆ ಪೊರ್ಟ್ ಮಾಡಿಸಿಕೊಂಡರೆ "ವೊಡಾ 299" ಮತ್ತು 'ವೊಡಾ 449' ಎಂಬ ಎರಡು ಆಫರ್‌ಗಳನ್ನು ನಿಡಿದೆ.! ಈ ಆಫರ್ ಮೂಲಕ ವೊಡಾಫೋನ್ ಗ್ರಾಹಕರು ಅನ್‌ಲಿಮಿಟೆಡ್ ಪ್ಲಾನ್ ಅನ್ನು ಪಡೆಯಬಹುದು ಎಂದು ತಿಳಿಸಿದೆ.!!

ಏನಿದು

ಏನಿದು "ವೊಡಾ 299" ಆಫರ್!!

ವೊಡಾಫೋನ್ ಎಮ್‌ಎನ್‌ಪಿ ಗ್ರಾಹಕರಿಗಾಗಿ 84 ದಿವಸಗಳ ವ್ಯಾಲಿಡಿಟಿ ಹೊಂದಿರುವ "ವೊಡಾ 299" ಆಫರ್ ಅನ್ನು ಪ್ರಕಟಿಸಿದ್ದು, ಈ ಆಫರ್ ಮೂಲಕ ವೊಡಾಫೋನ್ ಗ್ರಾಹಕರು 84 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ದೇಶದಾಶ್ಯಂತ ವೊಡಾಫೋನ್ ಟು ವೊಡಾಫೋನ್ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆಯಬಹುದು.!!

ಏನಿದು 'ವೊಡಾ 449' ಆಫರ್!!

ಏನಿದು 'ವೊಡಾ 449' ಆಫರ್!!

ವೊಡಾಫೋನ್ ಎಮ್‌ಎನ್‌ಪಿ ಗ್ರಾಹಕರಿಗಾಗಿ 84 ದಿವಸಗಳ ವ್ಯಾಲಿಡಿಟಿ ಹೊಂದಿರುವ 'ವೊಡಾ 449' ಆಫರ್ ಅನ್ನು ಪರಿಚಯಿಸಿದೆ. ಈ ಆಫರ್ ಮೂಲಕ ವೊಡಾಫೋನ್ ಗ್ರಾಹಕರು 84 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ದೇಶದಾಶ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆಯಬಹುದು.!!

3G ಮತ್ತು 2G ಗ್ರಾಹಕರಿಗೆ ಈ ಆಫರ್ ಇಲ್ಲ.!!

3G ಮತ್ತು 2G ಗ್ರಾಹಕರಿಗೆ ಈ ಆಫರ್ ಇಲ್ಲ.!!

ವೊಡಾಫೋನ್‌ಗೆ ಪೋರ್ಟ್ ಆದ 4G ಗ್ರಾಹಕರಿಗಷ್ಟೆ ಈ 'ವೊಡಾ 449' ಆಫರ್ ಲಭ್ಯವಿದ್ದು, 3G ಮತ್ತು 2G ಗ್ರಾಹಕರು ವೊಡಾಫೋನ್‌ಗೆ ಪೋರ್ಟ್ ಆದರೆ ಸಾಮಾನ್ಯ ಆಫರ್‌ಗಳನಷ್ಟೆ ಪಡೆಯುತ್ತಾರೆ. ಅಂದರೆ ಪ್ರಸ್ತುತ ವೊಡಾಫೋನ್ 3G ಮತ್ತು 2G ಗ್ರಾಹಕರಿಗೆ ಇರುವ ಬೆಲೆಯೇ ನೂತನ ಗ್ರಾಹಕರಿಗೆ ಇರಲಿದೆ.!!

ಓದಿರಿ:ಒನ್‌ಪ್ಲಸ್‌ 5ಟಿ ಖರೀದಿಸಲು ಬೆಂಗಳೂರಿನಲ್ಲಿ ಕ್ಯೂ!!..ಅಂತಹದ್ದೇನಿದೆ ಈ ಸ್ಮಾರ್ಟ್‌ಫೋನಿನಲ್ಲಿ?

Most Read Articles
Best Mobiles in India

English summary
eading telecom operator Vodafone has launched voice and data plans for prepaid customers. who port their existing number to Vodafone through Mobile Number Portability (MNP) facility.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X