ಒನ್‌ಪ್ಲಸ್‌ 5ಟಿ ಖರೀದಿಸಲು ಬೆಂಗಳೂರಿನಲ್ಲಿ ಕ್ಯೂ!!..ಅಂತಹದ್ದೇನಿದೆ ಈ ಸ್ಮಾರ್ಟ್‌ಫೋನಿನಲ್ಲಿ?

ಮೊಬೈಲ್ ಖರೀದಿಗಾಗಿಯೇ ಮಧ್ಯಾಹ್ನ 1.30ರಿಂದ ಸಂಜೆ 4.30ರವರೆಗೂ ಎಲ್ಲರೂ ಕ್ಯೂ ನಿಂತಿದ್ದು ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಬಗೆಗಿನ ಕ್ರೇಜ್ ಎಲ್ಲೆಡೆ ಕಾಣಿಸುವಂತಿತ್ತು.!!

|

ದುಬಾರಿ ಬೆಲೆಯ ಐಫೋನ್ ಎಕ್ಸ್‌ಗೆ ಪೈಪೋಟಿ ನೀಡುವಂತಿರುವ ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಮಾರಾಟ ಶುರುವಾಗಿದ್ದು, ಬೆಂಗಳೂರು ನಗರದ ಶಾಪಿಂಗ್ ಪ್ಯಾರಡೈಸ್ ಬ್ರಿಗೇಡ್ ರಸ್ತೆಯ ಮಳಿಗೆಯೊಂದರ ಮುಂದೆ ನೆನ್ನೆ ಗ್ರಾಹಕರು ಸಾಲುಗಟ್ಟಿ ನಿಂತು ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಖರೀದಿಸಿದ್ದಾರೆ.!!

ಹೌದು, ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಅನ್ನು ಮೊದಲು ಖರೀದಿಸುವ ಹಂಬಲದಿಂದ ಬ್ರಿಗೇಡ್ ರಸ್ತೆಯ ಅಂಗಡಿ ಮಳಿಗೆ ಮುಂದೆ ಗ್ರಾಹಕರು ಜಮಾಯಿಸಿದ್ದರು. ಮೊಬೈಲ್ ಖರೀದಿಗಾಗಿಯೇ ಮಧ್ಯಾಹ್ನ 1.30ರಿಂದ ಸಂಜೆ 4.30ರವರೆಗೂ ಎಲ್ಲರೂ ಕ್ಯೂ ನಿಂತಿದ್ದು ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಬಗೆಗಿನ ಕ್ರೇಜ್ ಎಲ್ಲೆಡೆ ಕಾಣಿಸುವಂತಿತ್ತು.!!

 ಒನ್‌ಪ್ಲಸ್‌ 5ಟಿ ಖರೀದಿಸಲು ಬೆಂಗಳೂರಿನಲ್ಲಿ ಕ್ಯೂ!!

ಬ್ರಿಗೇಡ್ ರಸ್ತೆಯ ಮಳಿಗೆಯಲ್ಲಿ ಮೊದಲನೇ ಗ್ರಾಹಕರಾಗಿ ಪ್ರದೀಪ್ ಭಂಡಾರಿ ಎನ್ನುವವರು ಮೊಬೈಲ್‌ ಅನ್ನು ಖರೀದಿಸಿ ಮಗಳಿಗೆ ಉಡುಗೊರೆಯಾಗಿ ನೀಡುವುದಾಗಿ ಹೇಳಿಕೊಂಡರೆ, ಹೆಚ್ಚು ಆಸೆಯಿಂದ ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಖರೀದಿಸಲು ಬಂದಿದ್ದ ಹಲವು ಜನರು ಮೊಬೈಲ್ ಸಿಗದೆ ಬರಿಗೈನಲ್ಲಿ ನಡೆದರು.!!

64 ಜಿ.ಬಿ ಸಾಮರ್ಥ್ಯದ ಒನ್‌ಪ್ಲಸ್‌ 5ಟಿ ಮೊಬೈಲ್‌ಗೆ ₹ 32,999 ಹಾಗೂ 128 ಜಿ.ಬಿ ಸಾಮರ್ಥ್ಯದ ಫೋನ್‌ಗೆ ₹37,999 ಬೆಲೆ ಇದ್ದು, ಹಾಗಾದರೆ, ಒನ್‌ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ ಖರೀದಿಸಲು ಜನರು ಏಕಿಷ್ಟು ಆತುರ ಮಾಡುತ್ತಿದ್ದಾರೆ? ಮೊಬೈಲ್ ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

ಐಫೋನ್ 10 ಮತ್ತು ಸ್ಯಾಮ್‌ಸಂಗ್ 8 ನೋಟ್‌ಗೆ ಸೆಡ್ಡುಹೊಡೆಯುತ್ತಿರುವ ಒನ್‌ಪ್ಲಸ್ 5T ಫೋನ್ 6 ಇಂಚಿನ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಹೊಂದಿದೆ.!! 2160 x 1080 ಪಿಕ್ಸೆಲ್‌ ರೆಸಲ್ಯೂಶನ್ ಹೋಂದಿರುವ ಈ ಡಿಸ್‌ಪ್ಲೇಯನ್ನು ಸಂಪೂರ್ಣ ಬೆಜೆಲ್‌ ಲೆಸ್ ಎಂದು ಕರೆಯಬಹುದಾದರೂ ಕೂಡ ಅಂಚಿನಲ್ಲಿ ಸ್ವಲ್ಪ ಬೆಜೆಲ್ ಇರುವುದನ್ನು ನಾವು ನೋಡಬಹುದು.!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಕ್ವಾಲ್ಕಂ ಕಂಪೆನಿಯ ಅತ್ಯುತ್ತಮ ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಅನ್ನು ಒನ್‌ಪ್ಲಸ್ 5ಟಿ ಫೋನ್‌ ಫೋನ್ ಹೊಂದಿದದ್ದು, 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ.!!

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ತನ್ನ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿದ್ದ ಒನ್‌ಪ್ಲಸ್ ಕಂಪೆನಿ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗಕ್ಕೆ ವರ್ಗಾವಣೆ ಮಾಡಿದೆ. ಹಿಂಬಾಗದಲ್ಲಿಯೂ ಅತ್ಯುತ್ತಮ ವಿನ್ಯಾಸ ಹೊಂದಿರುವ ಈ ಫೋನ್‌ನಲ್ಲಿ ಫಿಂಗರ್ ಪ್ರಿಂಟ್‌ನಿಂದ ಅಂದ ಮತ್ತಷ್ಟು ಹೆಚ್ಚಿದೆ.!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಹಿಂಭಾಗದಲ್ಲಿ 16MP + 20MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಒನ್‌ಪ್ಲಸ್ 5ಟಿ ಫೋನ್‌ನಲ್ಲಿ ಕಾಣಬಹುದಾಗಿದ್ದು, ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಉನ್ನತ ಮಟ್ಟದ ಫೋಟೊ ಚಿತ್ರಿಸಲು ಸಹಾಯಕ ಕ್ಯಾಮೆರಾಗಳಾಗಿವೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿದೆ.!!

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ನಲ್ಲಿ 3300mAh ತೆರೆಯಲಾರದ ಬ್ಯಾಟರಿ ಅಳವಡಿಸಲಾಗಿದ್ದು, 20 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್‌ ಆಗಲಿರುವ ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಒನ್‌ಪ್ಲಸ್ 5ಟಿ ಎಲ್ಲರನ್ನು ಸೆಳೆದಿದೆ.!! ಬೆಂಗಳೂರಿನ ಹಲವರು ಬ್ಯಾಟರಿ ತಂತ್ರಜ್ಞಾನ ನೋಡಿಯೇ ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.!!

ಓದಿರಿ:ಒಟ್ಟಿಗೆ 3 ಫೋನ್‌ ಪರಿಚಯಿಸಿದ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ 'ಕೊಮಿಯೋ'!!

Best Mobiles in India

English summary
OnePlus 5T review: Takes the best of OnePlus 5 and makes it even better. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X