ಜಿಯೋ-ಏರ್‌ಟೆಲ್ ನಿಂದಲೂ ಈ ಆಫರ್ ನೀಡಲಾಗಿಲ್ಲ: ವೊಡಾಫೋನ್ ದೊಡ್ಡ ಆಫರ್..!
ಜಿಯೋ ಏರ್‌ಟೆಲ್‌ಗಳು ಬೆಲೆ ಕಡಿಮೆ ಮಾಡುವ ನೆಪದಲ್ಲಿ ಆಫರ್ ಕುಗ್ಗಸಿದರೆ ವೊಡಫೋನ್ ತನ್ನ ಆಫರ್ ಅನ್ನು ಹಿಗ್ಗಿಸಿ ಹೊಸ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದೆ. ಈ ಆಫರ್ ಮೂಲಕವಾಗಿ ವೊಡಫೋನ್ ಮಾರುಕಟ್ಟೆಯಲ್ಲಿ ಹೊಸ ನೆಲೆಯನ್ನು ಕಂಡಕೊಳ್ಳಲ
ಎಲ್ಲಾ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮುಂದಾಗಿರುವ ಸಂದರ್ಭದಲ್ಲಿ ವೊಡಾಫೋನ್ ಮಾತ್ರ ಇದಕ್ಕೆ ಅಪವಾದ ಎನ್ನುವಂತೆ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ. ಜಿಯೋ -ಏರ್‌ಟೆಲ್ ನಲ್ಲಿಯೂ ಈ ಮಾದರಿಯ ಆಫರ್ ಕಾಣಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಇದು ವೊಡಾಫೋನ್ ಗ್ರಾಹಕರಿಗೆ ಭರ್ಜರಿ ಅವಕಾಶವಾಗಿದೆ.

ಓದಿರಿ: ದುಬಾರಿ ಬೆಲೆಯ ಐಫೋನ್ X ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್
ಜಿಯೋ ಏರ್‌ಟೆಲ್‌ಗಳು ಬೆಲೆ ಕಡಿಮೆ ಮಾಡುವ ನೆಪದಲ್ಲಿ ಆಫರ್ ಕುಗ್ಗಿಸಿದರೆ ವೊಡಾಪೋನ್ ತನ್ನ ಆಫರ್ ಅನ್ನು ಹಿಗ್ಗಿಸಿ ಹೊಸ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದೆ. ಈ ಆಫರ್ ಮೂಲಕವಾಗಿ ವೊಡಫೋನ್ ಮಾರುಕಟ್ಟೆಯಲ್ಲಿ ಹೊಸ ನೆಲೆಯನ್ನು ಕಂಡಕೊಳ್ಳಲಿದೆ ಎನ್ನಲಾಗಿದೆ.

ರೂ. 496 ಆಫರ್:
ವೊಡಾಫೋನ್ ರೂ.496 ಆಫರ್ ಘೋಷಣೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರು ಬಳಕೆಗೆ ಪ್ರತಿ ಒಂದು GB ಅತೀ ವೇಗದ ಡೇಟಾವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಎಲ್ಲಾ ಕರೆಗಳು ಉಚಿತ:
ವೊಡಾಫೋನ್ ರೂ.496 ಆಫರ್ ನಲ್ಲಿ ಬಳಕೆದಾರರು ಎಲ್ಲಾ ಕರೆಗಳು ಅಂದರೆ ಲೋಕಲ್, STD ಕರೆಗಳನ್ನು ಉಚಿತವಾಗಿ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

84 ದಿನಗಳ ವ್ಯಾಲಿಡಿಟಿ:
ಇದಲ್ಲದೇ ವೊಡಾಫೋನ್ ರೂ.496 ಆಫರ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಇಲ್ಲಿ ಪ್ರತಿ ನಿತ್ಯ ಒಂದು GB ಡೇಟಾ ಬಳಕೆಗೆ ದೊರೆಯಲಿದೆ.

ರೋಮಿಂಗ್ ಆಫರ್:
ಇದಲ್ಲದೇ ಈ ಆಫರ್ ಪಡೆದುಕೊಂಡ ಗ್ರಾಹಕರು ರೋಮಿಂಗ್ ನಲ್ಲಿಯೂ ಉಚಿತ ಇನ್‌ಕಮಿಂಗ್ ಮತ್ತು ಔಟ್ ಗೋಯಿಂಗ್ ಅವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.


Click it and Unblock the Notifications








