ವಿಶ್ವದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ವೊಡಾಫೋನ್ 18 ದೇಶಗಳಲ್ಲಿ ಸುಮಾರು 10 ದಶಲಕ್ಷ ಯುವಜನರಿಗೆ ವೃತ್ತಿ ಮಾರ್ಗದರ್ಶನ ಮತ್ತು ಡಿಜಿಟಲ್ ಅರ್ಥವ್ಯವಸ್ಥೆ ಬಗ್ಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವೊಡಾಫೋನ್ ಆಯೋಜಿಸುತ್ತಿರುವ ಈ ಯೋಜನೆಯಿಂದ 50 ಲಕ್ಷ ಭಾರತೀಯ ಯುವಜನರಿಗೆ ಲಾಭವಾಗಲಿದೆ.!!
2022ರ ವೇಳೆಗೆ ದೇಶದಲ್ಲಿ 50 ಲಕ್ಷ ಹಾಗೂ ವಿಶ್ವದಾದ್ಯಂತ 1 ಕೋಟಿ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಶಿಷ್ಟ ಯೋಜನೆ ಇದಾಗಿದೆ. ಇದಕ್ಕಾಗಿ ಪ್ರತ್ಯೇಕ ಆನ್‌ಲೈನ್ ವೇದಿಕೆ ಅಭಿವೃದ್ಧಿಪಡಿಸಿದೆ. ವೊಡಾಫೋನ್ ಅಭಿವೃದ್ಧಿಪಡಿಸಿರುವ ಆನ್‌ಲೈನ್ ವೇದಿಕೆಯಲ್ಲಿ ಕೌಶಲ್ಯ, ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯ ಮಾಹಿತಿ ದೊರೆಯಲಿದೆ.!!
ಯುವ ಜನರು https://futurejobsfinder.vodafone.com ಅಂತರ್ಜಾಲ ತಾಣದಲ್ಲಿ ತಮ್ಮ ಕೌಶಲ್ಯಕ್ಕೆ ಸೂಕ್ತ ಉದ್ಯೋಗ ಅರಸಬಹುದು ಮತ್ತು ಆನ್‌ಲೈನ್ ಡಿಜಿಟಲ್ ಕೌಶಲ ತರಬೇತಿಯನ್ನು ಈ ವೇದಿಕೆಯಲ್ಲಿ ಉಚಿತವಾಗಿ ಪಡೆಯಬಹುದು ಎಂದು ಭಾರತದ ವೊಡಾಫೋನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಸೂದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ವೊಡಾಫೋನ್ ಡಿಜಿಟಲ್ ಉದ್ಯೋಗದ ನೇರ ಅನುಭವವನ್ನು ಪಡೆಯಲು ಕಂಪನಿಗೆ ಕರೆತರಲಾದ ಯುವ ಜನರ ಸಂಖ್ಯೆಯಲ್ಲಿ ಮಹತ್ತರವಾದ ಹೆಚ್ಚಳದ ಯೋಜನೆಗಳನ್ನು ಘೋಷಿಸಿದ್ದು, ವಿಶ್ವದಾದ್ಯಂತ ಪದವೀಧರ, ಶಿಷ್ಯವೃತ್ತಿ, ತರಬೇತಿ ಮತ್ತು ಉದ್ಯೋಗ ಅನುಭವದ ಯೋಜನೆಗಳನ್ನು ವೊಡಾಫೋನ್ ವಿಸ್ತರಿಸಲಿದೆ.!
How to Sharing a Mobile Data Connection with Your PC (KANNADA)
ಓದಿರಿ: ಲೀಕ್ ಆಯ್ತು 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ಮೊದಲ ಫೋಟೊ!..ಟ್ರೆಂಡ್ ಸೃಷ್ಟಿಸುತ್ತಿದೆ ಫೀಚರ್ಸ್!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.
English summary
he Vodafone digital skills and jobs initiative is the largest of its kind in the world.to know more visit to kannada.gizbot.com
Story first published: Wednesday, March 28, 2018, 17:47 [IST]