Subscribe to Gizbot

ಮಾರುಕಟ್ಟೆಯಲ್ಲಿ ಜಿಯೋ ಮಾದರಿ ಸೇವೆ: ವೊಡಾಫೋನ್‌ನಿಂದ ನಿಂಜಾ ಝೂ ಝೂ..!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಅತೀ ದೊಡ್ಡ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ವೊಡಾಫೋನ್, ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಆಫರ್‌ಗಳನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಇತರೆ ಟೆಲಿಕಾಂ ಕಂಪನಿಗಳಿಗಿಂತ ಭಿನ್ನವಾಗಿ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ವೊಡಾಫೋನ್ ಮತ್ತೊಂದು ಹೊಸ ಸೇವೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

ಮಾರುಕಟ್ಟೆಯಲ್ಲಿ ಜಿಯೋ ಮಾದರಿ ಸೇವೆ: ವೊಡಾಫೋನ್‌ನಿಂದ ನಿಂಜಾ ಝೂ ಝೂ..!

ವೊಡಾಫೋನ್ ಮಾರುಕಟ್ಟೆಯಲ್ಲಿ ಜಾಹೀರಾತುಗಳ ಮೂಲಕವೇ ಹೆಚ್ಚು ಸದ್ದು ಮಾಡುವುದನ್ನು ನೀವು ಕಾಣಬಹುದು. ಈ ಹಿಂದೆ ಪುಟ್ಟ ನಾಯಿಮರಿಯೊಂದಿಗೆ ಜಾಹೀರಾತಿನಲ್ಲಿ ಹೊಸ ಭಾಷ್ಯ ಬರೆದಿದ್ದ ವೊಡಾಫೋನ್, ಇದಾದ ನಂತರದಲ್ಲಿ ಝೂ ಝೂಗಳ ಮೂಲಕ ಹೆಚ್ಚಿನ ಸದ್ದು ಮಾಡಿತ್ತು. ಈಗ ಇದೇ ಝೂ ಝೂಗಳ ಮೂಲಕ ಹೊಸದೊಂದು ಜಾಹೀರಾತು ಮತ್ತು ಸೇವೆಯನ್ನು ಪರಿಚಯಿಸಿದ್ದು, ಝೂ ಝೂಗಳ ಹೊಸ ಆಟದ ವಿಡಿಯೋ ಆಡ್ ವೈರಲ್ ಆಗಿದೆ.

ಓದಿರಿ: ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟ ಒಪ್ಪೋ F7 ಸ್ಮಾರ್ಟ್‌ಫೋನ್‌: ಹೇಗಿದೆ..? ಇಲ್ಲಿದೇ ಫುಲ್ ಮಾಹಿತಿ..!

ಗ್ರಾಹಕರ ಸೇವೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ವೊಡಾಫೋನ್ 'ಹ್ಯಾಪಿಟು ಹೆಲ್ಪ್ ಇನ್ ಎ ಕ್ಲಿಕ್' ಎನ್ನುವ ಹೊಸದೊಂದು ಕ್ಯಾಂಪೆನಿಂಗ್ ಶುರು ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಉಚಿತವಾಗಿ ಜಿಯೋ ಮಾದರಿಯಲ್ಲಿ ಸಿಮ್ ಕಾರ್ಡ್ ಹೋಮ್ ಡೆಲಿವರಿ ಸೇರಿದಂತೆ ವೊಡಾಫೋನ್ ಸೇವೆಗಳನ್ನು ವರ್ಷದ 365 ದಿನಗಳು ಹಾಗೂ ವಾರದ ಏಳು ದಿನವೂ ಬಳಕೆದಾರರಿಗೆ ನೀಡುವ ಯೋಜನೆಯನ್ನು ರೂಪಿಸಿಕೊಂಡಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಇದಕ್ಕೆ ಪೂರಕವಾಗಿ ಝೂ ಝೂ ಗಳ ಆಡ್ ವೊಂದನ್ನು ಬಿಡುಗಡೆ ಮಾಡಿದ್ದು, ಸದ್ಯ ಈ ಆಡ್ ವಿಡಿಯೋ ಯೂಟ್ಯೂಬ್‌ನಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗುವುದಿಲ್ಲ. ವೇಗವಾಗಿ ಮತ್ತು ಸರಳವಾಗಿ ಸೇವೆಯನ್ನು ನೀಡುವ ಅರ್ಥದಲ್ಲಿ ಕಾಣಿಸಿಕೊಂಡಿರುವ ಆಡ್ ಹೆಚ್ಚಿನ ಮಂದಿಗೆ ಮೆಚ್ಚುಗೆಯಾಗಿದೆ.

ಝೂ ಝೂಗಳು ನಿಂಜಾ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿಮ್‌ ಕಾರ್ಡ್ ಇಲ್ಲದೇ ಹೊಸ ಸ್ಮಾರ್ಟ್‌ಪೋನ್ ಕೊಡಿಸಿದ ಪ್ರೇಮಿಯ ಮೇಲೆಗುವ ಹುಡುಗಿಯಿಂದ, ಹುಡುಗನ್ನು ಕಾಪಾಡುವ ಸಲುವಾಗಿ ಅವನಿರುವ ಸ್ಥಳಕ್ಕೆ ಸಿಮ್ ಕೊಂಡೊಯ್ಯುವ ನಿಂಜಾಗಳ ಸ್ಟೈಲ್ ನಿಜಕ್ಕೂ ಅದ್ಬುತವಾಗಿದೆ. ನೀವು ಒಮ್ಮೆ ಆಡ್ ನೋಡಿ, ಖುಷಿಪಡಿ.

English summary
Vodafone launches ZooZoos in a new Ninja avatar. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot