ವೊಡಾಫೋನ್ ಗ್ರಾಹಕರೇ ಗಮನಿಸಿ; ಈ ಪ್ಲ್ಯಾನ್‌ಗೆ ಡಬಲ್ ಡೇಟಾ ಆಫರ್ ಕ್ಲೋಸ್!
ದೇಶದ ಟೆಲಿಕಾಂ ವಲಯದಲ್ಲಿ ವೊಡಾಫೋನ್ ಸಂಸ್ಥೆಯು ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿ ಬಂದಿದೆ. ಈ ನಿಟ್ಟಿನಲ್ಲಿ ವೊಡಾಫೋನ್ ಇತ್ತೀಚಿಗೆ ತನ್ನ ಜನಪ್ರಿಯ 249ರೂ, 399ರೂ ಮತ್ತು 599ರೂ.ಪ್ಲ್ಯಾನ್‌ಗಳಿಗೆ ಡಬಲ್ ಡೇಟಾ ಪ್ರಯೋಜನ ನೀಡಿತ್ತು. ಆದರೆ ಈಗ ವೊಡಾಫೋನ್ ಡಬಲ್ ಡೇಟಾ ಯೋಜನೆಯೊಂದಕ್ಕೆ ಕತ್ತರಿ ಹಾಕಿದ್ದು, ಈ ಪ್ಲ್ಯಾನಿನಲ್ಲಿ ಇನ್ನು ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುವುದಿಲ್ಲ.

ಹೌದು, ವೊಡಾಫೋನ್ ಸಂಸ್ಥೆಯು ತನ್ನ 249ರೂ. ಪ್ರೀಪೇಯ್ಡ್ ಪ್ಲ್ಯಾನಿಗೆ ಘೋಷಿಸಿದ್ದ ಡಬಲ್ ಡೇಟಾ ಸೌಲಭ್ಯವನ್ನು ಇದೀಗ ಹಿಂಪಡೆದಿದೆ. 28 ದಿನಗಳ ವ್ಯಾಲಿಡಿಟಿ ಪಡೆದಿದ್ದ ಈ ಯೋಜನೆಯಲ್ಲಿ ಇನ್ನು ಪ್ರತಿದಿನ 1.5GB ಡೇಟಾ ಸಿಗಲಿದ್ದು, ಹೆಚ್ಚುವರಿಯಾಗಿ ಲಭ್ಯವಾಗುತ್ತಿದ್ದ 1.5GB ಸೌಲಭ್ಯ ಅಲಭ್ಯವಾಗಿದೆ. ಆದರೆ ವೊಡಾಫೋನ್ 399ರೂ ಮತ್ತು ವೊಡಾಫೋನ್ 599ರೂ.ಪ್ಲ್ಯಾನ್‌ಗಳಲ್ಲಿ ಡಬಲ್ ಡೇಟಾ ಮುಂದುವರಿಯಲಿದೆ.

ಡಬಲ್ ಡೇಟಾ ಕೊಡುಗೆ ಕ್ಲೋಸ್!
ವೊಡಾಫೋನಿನ 249ರೂ.ಪ್ಲ್ಯಾನ್‌ಗೆ ಲಭ್ಯವಿದ್ದ ಪ್ರತಿದಿನ 3GB ಡೇಟಾ ಕೊಡುಗೆಯನ್ನು ಸಂಸ್ಥೆಯು ನಿಲ್ಲಿಸಿದೆ. ಹೀಗಾಗಿ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ. ಕಡಿಮೆ ಬೆಲೆಗೆ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಬೆಸ್ಟ್ ಆಯ್ಕೆ ಆಗಿದೆ.

ಈ ಟೆಲಿಕಾಂ ಸರ್ಕಲ್‌ನಲ್ಲಿ ಕೊಡುಗೆ ಸ್ಟಾಪ್
ಮಾರ್ಚ್‌ನ ಆರಂಭದಲ್ಲಿ ವೊಡಾಫೋನ್ ಡಬಲ್ ಡಾಟಾ ಆಫರ್ ಅನ್ನು ಪ್ರಾರಂಭಿಸಿತ್ತು. ಆದರೆ ಇತ್ತೀಚಿಗೆ ಬಿಹಾರ, ಆಂಧ್ರಪ್ರದೇಶ, ಕೇರಳ, ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ, ಪಂಜಾಬ್, ಈಶಾನ್ಯ ಮತ್ತು ಯುಪಿ ಪಶ್ಚಿಮ ವಲಯಗಳಿಂದ ಡಬಲ್ ಡೇಟಾ ಆಫರ್ ತೆಗೆದುಹಾಕಲಾಗಿದೆ. ಇದೀಗ ಮತ್ತೆ ಐದು ಟೆಲಿಕಾಂ ವ್ಯಾಪ್ತಿಯಲ್ಲಿಯು ಡಬಲ್ ಡೇಟಾ ಕೊಡುಗೆಗೆ ಕೊಕ್ಕ್ ನೀಡಿದ್ದು, ಅವುಗಳು ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಕರ್ನಾಟಕ ಮತ್ತು ಯುಪಿ ಪೂರ್ವ ಆಗಿವೆ.

ವೊಡಾಫೋನ್ 399ರೂ.ಪ್ಲ್ಯಾನ್
ವೊಡಾಫೋನಿನ 399ರೂ.ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಸಹ ಲಭ್ಯ.

ವೊಡಾಫೋನ್ 599ರೂ.ಪ್ಲ್ಯಾನ್
ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ 999ರೂ. ಶುಲ್ಕದ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.


Click it and Unblock the Notifications








