Home
ಸುದ್ದಿಜಾಲ

Vodafone 269 Plan: ಕಡಿಮೆ ಬೆಲೆಯಲ್ಲಿ ದೀರ್ಘ ವ್ಯಾಲಿಡಿಟಿಗೆ ಈ ಪ್ಲ್ಯಾನ್ ಸಾಕು!

ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿವೆ. ಅದಾಗ ಬಳಿಕೆ ಚಂದಾದಾರರನ್ನು ಸೆಳೆಯಲು ಮತ್ತೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿವೆ. ಆ ಪೈಕಿ ‌ವೊಡಾಫೋನ್ ಟೆಲಿಕಾಂ ಸಹ ಒಂದಾಗಿದ್ದು, ವೊಡಾಫೋನ್ ಟೆಲಿಕಾಂನ ಬಹುತೇಕ ಪ್ಲ್ಯಾನ್‌ಗಳು ಡೇಟಾ ಸೌಲಭ್ಯ, ಉಚಿತ ಎಸ್‌ಎಮ್ಎಸ್‌ ಮತ್ತು ವಾಯಿಸ್‌ ಕರೆ ಪ್ರಯೋಜನಗಳನ್ನು ಪಡೆದಿವೆ. ಹಾಗೆಯೇ ಕೇವಲ ವಾಯಿಸ್‌ ಕರೆ ಮತ್ತು ವ್ಯಾಲಿಡಿಟಿಗೆ ಹೆಚ್ಚು ಒತ್ತು ನೀಡಿರುವ ಪ್ಲ್ಯಾನ್‌ಗಳು ಸಹ ಇವೆ.

ವೊಡಾಫೋನ್ ಟೆಲಿಕಾಂ

ಹೌದು, ವೊಡಾಫೋನ್ ಟೆಲಿಕಾಂ ಹಲವು ಭಿನ್ನ ವ್ಯಾಲಿಡಿಟಿ ಅವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಅಲ್ಪಾವಧಿಯ ಪ್ಲ್ಯಾನ್‌ಗಳು ಇವೆ ಹಾಗೂ ದೀರ್ಘಾವಧಿಯ ಪ್ಲ್ಯಾನ್‌ಗಳು ಸೇರಿವೆ. ಆದರೆ ಬಜೆಟ್ ಬೆಲೆಯಲ್ಲಿನ 269ರೂ. ಮತ್ತು 379ರೂ. ಪ್ಲ್ಯಾನ್‌ಗಳು ಬಿಗ್ ವ್ಯಾಲಿಡಿಟಿಯಿಂದ ಗಮನ ಸೆಳೆದಿದ್ದು, ಈ ಪ್ಲ್ಯಾನ್‌ಗಳು ವಾಯಿಸ್‌ ಕರೆಗಳು ಮತ್ತು ಎಸ್ಎಮ್ಎಸ್ ಸೌಲಭ್ಯಗಳನ್ನು ಪಡೆದುಕೊಂಡಿವೆ. ಹಾಗಾದರೆ ವೊಡಾಫೋನ್ ಟೆಲಿಕಾಂನ 269ರೂ. ಮತ್ತು 379ರೂ. ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ.

ವೊಡಾಫೋನ್ 269ರೂ. ಪ್ಲ್ಯಾನ್

ವೊಡಾಫೋನ್ 269ರೂ. ಪ್ಲ್ಯಾನ್

ವೊಡಾಫೋನಿನ 269ರೂ. ಪ್ಲ್ಯಾನ್ ಅಗ್ಗದ ದರದಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಉತ್ತಮ ಅನಿಸಲಿದೆ. ಏಕೆಂದರೇ ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆಗಳು, 600ಎಸ್‌ಎಮ್‌ಎಸ್‌ ಸೌಲಭ್ಯ ಸಿಗಲಿದೆ. ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ 4GB ಡಾಟಾ ಪ್ರಯೋಜನ ಲಭ್ಯವಾಗಲಿದೆ. ವೊಡಾಫೋನ್ ಪ್ಲೇ ಆಪ್‌ನಲ್ಲಿ ಯಾವುದೇ ಶುಲ್ಕವಿಲ್ಲದೇ ಜೀ5 ಪ್ರೀಮಿಯಮ್ ಸೇವೆ ಪಡೆಯಬಹುದು.

ವೊಡಾಫೋನ್ 379ರೂ. ಪ್ಲ್ಯಾನ್‌

ವೊಡಾಫೋನ್ 379ರೂ. ಪ್ಲ್ಯಾನ್‌

ವೊಡಾಫೋನ್ ಟೆಲಿಕಾಂನ 379ರೂ. ಪ್ರೀಪೇಡ್ ಪ್ಲ್ಯಾನ್‌ ಸಹ ದೀರ್ಘಾವಧಿಯ ಪ್ಲ್ಯಾನ್ ಆಗಿದೆ. ಈ ಪ್ರೀಪೇಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಹಾಗೆಯೇ ಈ ಅವಧಿಯಲ್ಲಿ ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 1000 ಎಸ್‌ಎಮ್‌ಎಸ್‌ ಸೌಲಭ್ಯಗಳು ಸಿಗಲಿವೆ. ಅದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡಾಟಾ ಸೌಲಭ್ಯ ದೊರೆಯುತ್ತದೆ. ಜೊತೆಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಜೀ5 ಪ್ರೀಮಿಯಮ್ ಸೇವೆ ಪಡೆಯಬಹುದು

ಈ ಪ್ಲ್ಯಾನ್ ಉತ್ತಮವೇ

ಈ ಪ್ಲ್ಯಾನ್ ಉತ್ತಮವೇ

ಬಹುತೇಕ ಚಂದಾದಾರರು ಅಧಿಕ ಡಾಟಾ ಜೊತೆಗೆ ಹೆಚ್ಚು ವ್ಯಾಲಿಡಿಟಿ ಇರುವ ಪ್ಲ್ಯಾನ್‌ ಬಯಸುತ್ತಾರೆ. ಇನ್ನು ಕೆಲವರು ಬಳಕೆದಾರರು ಕನಿಷ್ಠ ಡಾಟಾ ಇದ್ದರು ಪರವಾಗಿಲ್ಲ ಆದರೆ ದೀರ್ಘಕಾಲದ ವ್ಯಾಲಿಡಿಟಿ ಅವಧಿ ಇರುವುದನ್ನು ಇಷ್ಟಪಡುತ್ತಾರೆ. ಇಂತಹ ಚಂದಾದಾರರಿಗೆ ವೊಡಾಫೋನ್ 269ರೂ. ಪ್ಲ್ಯಾನ್ ಮತ್ತು 379ರೂ. ಪ್ಲ್ಯಾನ್‌ ಆಕರ್ಷಕ ಅನಿಸಲಿವೆ. ಇನ್ನು ಬಜೆಟ್ ಬೆಲೆಯಲ್ಲಿ ಪ್ರತಿದಿನ ಡೇಟಾ ಇರಲಿ ಮತ್ತು ವ್ಯಾಲಿಡಿಟಿಯು ಹೆಚ್ಚಿರಲಿ ಎಂದು ಬಯಸುವ ಚಂದಾದಾರರಿಗೆ ವೊಡಾಫೋನ್ 399ರೂ. ಪ್ಲ್ಯಾನ್ ಖಂಡಿತ ಉತ್ತಮ ಆಯ್ಕೆ ಆಗಿದೆ.

ವೊಡಾಫೋನ್ 399ರೂ. ಪ್ಲ್ಯಾನ್ ಪ್ರಯೋಜನಗಳೆನು

ವೊಡಾಫೋನ್ 399ರೂ. ಪ್ಲ್ಯಾನ್ ಪ್ರಯೋಜನಗಳೆನು

ವೊಡಾಫೋನ್ 399ರೂ. ಪ್ಲ್ಯಾನ್ ಡೇಟಾ ಮತ್ತು ವ್ಯಾಲಿಡಿಟಿ ಎರಡನ್ನು ಬೇಡುವ ಚಂದಾದಾರರಿಗೆ ಉತ್ತಮ ಅನಿಸುತ್ತದೆ. ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳು ಲಭ್ಯವಾಗಲಿದೆ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 1.5GB ಡಾಟಾ ಪ್ರಯೋಜನ ಸಹ ಸಿಗಲಿದೆ. ಜೊತೆಗೆ ವೊಡಾಫೋನ್ ಪೇ ಚಂದಾದರಿಕೆ ಹಾಗೂ ಜೀ5 ಚಂದಾದಾರಿಕೆಯು ಸಿಗಲಿದೆ.

Best Mobiles in India

English summary
Vodafone Rs 269 prepaid recharge offers 56 days of service validity. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+