Home
ಸುದ್ದಿಜಾಲ

ದಿನಕ್ಕೊಂದು GB ಡೇಟಾ ಸಲುತ್ತಿಲ್ಲವೇ..? ವೊಡಾಫೋನ್‌ನಿಂದ ದಿನಕ್ಕೆ 4.5GB ಡೇಟಾ..!

By Srinidhi

ಟೆಲಿಕಾಂ ಲೋಕದಲ್ಲಿ ಶುರುವಾಗಿರುವ ದರ ಸಮರವೂ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಎಲ್ಲಾ ಟೆಲಿಕಾಂ ಕಂಪನಿಗಳು ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಸ್ಪರ್ಧೇಗೆ ನಿಂತಿವೆ. ಈ ಬಾರಿ ವೊಡಾಫೋನ್ ಜಿಯೋ ಎದುರಿಗೆ ಸ್ಪರ್ಧೆ ನೀಡುವ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ಏರ್‌ಟೆಲ್ ನಿಂದಲೂ ಸಾಧ್ಯವಾಗದ ಆಫರ್ ವೊಂದನ್ನು ನೀಡಲು ಮುಂದಾಗಿದೆ.

ದಿನಕ್ಕೊಂದು GB ಡೇಟಾ ಸಲುತ್ತಿಲ್ಲವೇ..? ವೊಡಾಫೋನ್‌ನಿಂದ ದಿನಕ್ಕೆ 4.5GB ಡೇಟಾ..!

ಈಗಾಗಲೇ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುತ್ತಿರುವ ಜಿಯೋಗೆ ಎದುರಾಗಿ ವೊಡಾಫೋನ್ ದಿನಕ್ಕೆ 4.5 GB ಡೇಟಾವನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಡೇಟಾ ಹಸಿವನ್ನು ತಣಿಸಲು ಮುಂದಾಗಿದೆ. ದಿನಕ್ಕೊಂದು GB ಡೇಟಾ ಬಳಕೆಗೆ ಸಾಲುವುದಿಲ್ಲ ಎನ್ನುವವರು ಈ ಪ್ಲಾನ್‌ ಅನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ.

ಎರಡು ಆಫರ್ ಕೊಟ್ಟ ವೊಡಾಫೋನ್:

ಎರಡು ಆಫರ್ ಕೊಟ್ಟ ವೊಡಾಫೋನ್:

ವೊಡಾಫೋನ್ ಹೊಸದಾಗಿ ಬಳಕೆದಾರರಿಗೆ ಎರಡು ಆಫರ್ ಗಳನ್ನು ಬಿಡುಗಡೆ ಮಾಡಿದೆ. ರೂ.799 ಮತ್ತು ರೂ.549 ಪ್ಲಾನ್‌ಗಳನ್ನು ಲಾಂಚ್ ಮಾಡಿರುವ ವೊಡಾಫೋನ್ ಬಳಕೆದಾರರಿಗೆ ದಿನಕ್ಕೇ 4.5GB ಡೇಟಾವನ್ನು ನೀಡಲಿದೆ. ಅದುವೇ ಅತ್ಯಂತ ವೇಗದ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರು ಪ್ರತಿ ನಿತ್ಯ 100 SMS ಕಳುಹಿಸಬಹುದಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಬಳಕೆದಾರರು ಪಡೆದುಕೊಳ್ಳಬಹುದು.

ವೊಡಾಫೋನ್ ರೂ.799 ಪ್ಲಾನ್:

ವೊಡಾಫೋನ್ ರೂ.799 ಪ್ಲಾನ್:

ವೊಡಾಫೋನ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ರೂ.799 ಪ್ಲಾನ್‌ ವೊಂದನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರು 126 GB ಡೇಟಾ (ದಿನಕ್ಕೆ 4.5GB ಡೇಟಾ)ವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು 28 ದಿನಗಳ ವ್ಯಾಲಿಟಿಯನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರು ಪ್ರತಿ ನಿತ್ಯ 100 SMS ಕಳುಹಿಸಬಹುದಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಬಳಕೆದಾರರು ಪಡೆದುಕೊಳ್ಳಬಹುದು.

ವೊಡಾಫೋನ್ ರೂ.549 ಪ್ಲಾನ್:

ವೊಡಾಫೋನ್ ರೂ.549 ಪ್ಲಾನ್:

ವೊಡಾಫೋನ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ರೂ.549 ಪ್ಲಾನ್‌ ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರು 98 GB ಡೇಟಾ (ದಿನಕ್ಕೆ 3.5GB ಡೇಟಾ)ವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು 28 ದಿನಗಳ ವ್ಯಾಲಿಟಿಯನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರು ಪ್ರತಿ ನಿತ್ಯ 100 SMS ಕಳುಹಿಸಬಹುದಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಬಳಕೆದಾರರು ಪಡೆದುಕೊಳ್ಳಬಹುದು.

ಜಿಯೋ ಆಫರ್:

ಜಿಯೋ ಆಫರ್:

ಜಿಯೋ ರೂ.799ರ ಪ್ಲಾನ್‌ನಲ್ಲಿ ಪ್ರತಿ ನಿತ್ಯ 5GB ಡೇಟಾವನ್ನು ನೀಡಲಿದೆ ಹಾಗೇ ರೂ.509 ಪ್ಲಾನ್‌ನಲ್ಲಿ ಪ್ರತಿ ನಿತ್ಯ 4GB ಡೇಟಾವನ್ನು ನೋಡಬಹುದಾಗಿದೆ. ಈ ಹಿನ್ನಲೆಯಲ್ಲಿ ಜಿಯೋಗೆ ಸೆಡ್ಡು ಹೊಡೆಯುವ ಸಾಲುವಾಗಿ ಮೇಲಿನ ಎರಡು ಆಫರ್ ಗಳನ್ನು ವೊಡಾಫೋನ್ ನೀಡಲು ಮುಂದಾಗಿದೆ.

ವೊಡಾಫೋನ್ ಪ್ಲೇ:

ವೊಡಾಫೋನ್ ಪ್ಲೇ:

ಇದಲ್ಲದೇ ಈ ಪ್ಲಾನ್‌ಗಳನ್ನು ರಿಚಾರ್ಜ್ ಮಾಡಿಸಿಕೊಂಡವರಿಗೆ ವೊಡಾಫೋನ್ ಪ್ಲೇ ಸೇವೆಯನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಜಿಯೋ ಸಹ ತನ್ನ ಆಪ್ ಗಳನ್ನು ಬಳಕೆಗೆ ನೀಡಿದ್ದ ಮಾದರಿಯನ್ನೇ ವೊಡಾಫೋನ್ ಸಹ ಅಳವಡಿಸಿಕೊಳ್ಳಲು ಮುಂದಾಗಿದೆ.

ಓದಿರಿ: ಜಿಯೋ ಹೆಣೆಯಲು ಮೊಟೊರೊಲಾದೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌: ರೂ.2000 ಕ್ಯಾಷ್ ಬ್ಯಾಕ್ ಆಫರ್...!

Best Mobiles in India

English summary
Vodafone to Offer 4.5GB Data Per Day With the Rs 799 Prepaid Plan. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+