Subscribe to Gizbot

ಜಿಯೋ ಹೆಣೆಯಲು ಮೊಟೊರೊಲಾದೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌: ರೂ.2000 ಕ್ಯಾಷ್ ಬ್ಯಾಕ್ ಆಫರ್...!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿ ಏರ್‌ಟೆಲ್, ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿ ಮೊಟೊರೊಲಾದೊಂದಿಗೆ ಕೈ ಜೋಡಿಸಿದೆ. ಈ ಮೂಲಕ ಅತೀ ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್ ದೊರೆಯುವಂತೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ರೂ.3999ಕ್ಕೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಯೋಜನೆಯನ್ನು ರೂಪಿಸಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಿದೆ.

ಜಿಯೋ ಹೆಣೆಯಲು ಮೊಟೊರೊಲಾದೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌

ಇದರಿಂದಾಗಿ ಮೊಟೊರೊಲಾ ಮತ್ತು ಲಿನೊವೊ ಸ್ಮಾರ್ಟ್‌ಫೋನ್‌ಗಳ ಮೇಲೆ ಏರ್‌ಟೆಲ್ ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಎರಡು ಕಂಪನಿಗಳಿಗೂ ಲಾಭವಾಗಲಿದ್ದು, ಇದಲ್ಲದೇ ಗ್ರಾಹಕರು ಜೇಬಿಗೂ ಹೆಚ್ಚಿನ ಹೊರೆಯಾಗುವುದಿಲ್ಲ. ಜಿಯೋ ವಿರುದ್ಧ ಸ್ಪರ್ಧೆಯನ್ನು ಏರ್‌ಟೆಲ್ ಮೆಲುಗೈ ಸಾಧಿಸಲು ಹಾಗೆ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಸಾಧನೆ ಮಾಡಲು ಮೊಟೊರೊಲಾಗೆ ಈ ಒಪ್ಪಂದದಿಂದ ಲಾಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವ ಸ್ಮಾರ್ಟ್‌ಫೋನ್‌ಗಳು:

ಯಾವ ಸ್ಮಾರ್ಟ್‌ಫೋನ್‌ಗಳು:

ಮೊಟೊರೊಲಾ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಮೊಟೊ C ಮತ್ತು ಮೊಟೊ E4 ಸ್ಮಾರ್ಟ್‌ಫೋನ್ ಹಾಗೂ ಲಿನೊವೊ K8 ನೋಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಏರ್‌ಟೆಲ್ ರೂ.2000 ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಬಳಕೆದಾರರು ಟಾಪ್ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಏರ್‌ಟೆಲ್ ಪ್ಲಾನ್:

ಏರ್‌ಟೆಲ್ ಪ್ಲಾನ್:

ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರು ಏರ್‌ಟೆಲ್ ಪ್ಲಾನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳು ರೂ.169 ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದ್ದು, ದಿನಕ್ಕೊಂದು GB ಡೇಟಾ ಬಳಕೆ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಅನ್‌ ಲಿಮಿಟೆಡ್ ಕರೆ ಮಾಡುವ ಅವಕಾಶವು ಬಳಕೆದಾರರಿಗೆ ಲಭ್ಯವಿರಲಿದೆ.

ಮೊಟೊ C ರೂ.3999ಕ್ಕೆ:

ಮೊಟೊ C ರೂ.3999ಕ್ಕೆ:

ಮೊಟೊ ಬಿಡುಗಡೆ ಮಾಡಿರುವ ಮೊಟೊ C ಸ್ಮಾರ್ಟ್‌ಫೋನ್ ಎಫೆಕ್ಟಿವ್ ಆಗಿ ರೂ.3999ಕ್ಕೆ ದೊರೆಯಲಿದೆ. ಇದು ಮಾರುಕಟ್ಟೆಯ ಅತ್ಯಂತ ಕಡಿಮೆ ಬೆಲೆ ಎನ್ನಲಾಗಿದೆ. ಇದಲ್ಲದೇ ಮೊಟೊ E4 ಮತ್ತು ಲಿನೊವೊ K8 ನೋಟ್ ಸ್ಮಾರ್ಟ್‌ಫೋನ್ ಬೆಲೆಯೂ ರೂ.2000 ಕಡಿಮೆಯಾಗಲಿದೆ.

How to save WhatsApp Status other than taking screenshots!! Kannada
ಕ್ಯಾಷ್ ಬ್ಯಾಕ್ ಹೇಗೆ:

ಕ್ಯಾಷ್ ಬ್ಯಾಕ್ ಹೇಗೆ:

ಈ ಕ್ಯಾಷ್ ಬ್ಯಾಕ್ ಒಂದೇ ಬಾರಿಗೆ ದೊರೆಯುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಮೊದಲು 18 ತಿಂಗಳು ರಿಚಾರ್ಜ್ ಮಾಡಿಸಿಕೊಂಡರೆ ರೂ.500 ಕ್ಯಾಷ್ ಬ್ಯಾಕ್ ಹಾಗೂ 36 ತಿಂಗಳು ರಿಚಾರ್ಜ್ ಮಾಡಿಸಿದಲ್ಲಿ ರೂ.1500 ಬರಲಿದೆ. ಎರಡು ಒಟ್ಟಾಗಿ ರೂ.2000 ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel and Motorola partner to offer 4G smartphones starting at Rs 3999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot