ಹೊಸ ಸಿಮ್ ಖರೀದಿಸುವವರಿಗೆ ವೊಡಾಫೋನ್ ನೀಡುತ್ತಿದೆ ಕೊಡುಗೆ!

|

ಭಾರತದ ನಂ 1 ಟೆಲಿಕಾಂ ಆಪರೇಟರ್ ಕಂಪೆನಿ ವೊಡಾಫೋನ್ ಹೊಸ ಪ್ರಿಪೇಯ್ಡ್ ಸಿಮ್ ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ. ವೊಡಾಫೋನ್ ನೂತನವಾಗಿ ಪ್ರಕಟಿಸಿರುವ ರೀಚಾರ್ಜ್ ಪ್ಯಾಕ್‌ಗಳೊಂದಿಗೆ ಪ್ರಿಪೇಯ್ಡ್ ಸಿಮ್ ಖರೀದಿಸಿದರೆ, ಸಿಮ್ ಅನ್ನು ಉಚಿತವಾಗಿ ಮನೆ ಬಾಗಿಲಿಗೆ ವಿತರಣೆ ಮಾಡುವುದಾಗಿ ಗ್ರಾಹಕರಿಗೆ ತಿಳಿಸಿದೆ.

ವೊಡಾಫೊನ್ ವೆಬ್‌ಸೈಟ್ ತೆರೆದು ರೀಚಾರ್ಜ್ ಪ್ಯಾಕ್‌ನೊಂದಿಗೆ ಸಿಮ್ ಅನ್ನು ಖರೀದಿಸಬೇಕು. ನಂತರ ನೀವು ಖರೀದಿಸಿದ ಸಿಮ್ ಅನ್ನು ಮನೆಗೆ ತಲುಪಿಸಲು ನಿಮ್ಮ ಹೆಸರು, ಇಮೇಲ್ ವಿಳಾಸ ಸೇರಿದಂತೆ ಡೆಲಿವರಿ ಪಿನ್ ಕೋಡ್‌ನಂತಹ ವಿವರಗಳನ್ನು ನಮೂದಿಸಬೇಕು. ಹೀಗೆ ನೀವು ಸಮೂದಿಸಿದ ವಿಳಾಸಕ್ಕೆ ಡೆಲಿವರಿ ಆಯ್ಕೆ ಲಭ್ಯವಿದೆಯೇ ಎಂದು ಪರೀಕ್ಷಿಸಲಾಗುತ್ತದೆ.

  ಹೊಸ ಸಿಮ್ ಖರೀದಿಸುವವರಿಗೆ ವೊಡಾಫೋನ್ ನೀಡುತ್ತಿದೆ ಕೊಡುಗೆ!

ಒಂದು ವೇಳೆ ನೀವು ನಮೂದಿಸಿದ ವಿಳಾಸಕ್ಕೆ ಸಿಮ್ ಡೆಲಿವರಿ ಸಾಧ್ಯವಿದ್ದರೆ ಸಿಮ್ ನಿಮ್ಮ ಮನೆಬಾಗಿಲಿಗೇ ಅಂದೇ ಡೆಲಿವರಿಯಾಗಲಿದೆ. ನಿಮ್ಮ ನಿವಾಸದ ಪ್ರದೇಶವು ಈ ಸೇವೆಯಲ್ಲಿದ್ದರೆ, ನೀವು ವೊಡಾಫೋನ್ ನಿಂದ 249 ರೂ. ಶಿಫಾರಸು ಮಾಡಿದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಒಂದು ತಿಂಗಳು ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಯಾಕ್ ಆಗಿದೆ.

ವೊಡಾಫೋನ್ ಬಿಡುಗಡೆ ಮಾಡಿರುವ ಈ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ಒದಗಿಸುತ್ತಿದೆ. ಹೆಚ್ಚುವರಿಯಾಗಿ, ಈ ಯೋಜನೆಯು ಅಪರಿಮಿತ ಉಚಿತ ಲೋಕಲ್ ಮತ್ತು ಎಸ್‌ಟಿಡಿ ಕರೆ ಹಾಗೂ ಎಸ್ಎಂಎಸ್ ಸೇವೆಗಳು ಸಹ ಲಭ್ಯವಿದೆ. ಈ ಯೋಜನೆಯ ಮಾನ್ಯತೆಯು ಅವಧಿ ಮುಗಿದ ನಂತರ ಗ್ರಾಹಕರಿಗೆ ಹೆಚ್ಚಿನ ಆಫರ್ ಸಿಗಲಿವೆ.

  ಹೊಸ ಸಿಮ್ ಖರೀದಿಸುವವರಿಗೆ ವೊಡಾಫೋನ್ ನೀಡುತ್ತಿದೆ ಕೊಡುಗೆ!

ಇತ್ತೀಚಿಗಷ್ಟೇ ತಿಂಗಳಿಗೆ ಕೇವಲ 399 ರೂ. ಪೋಸ್ಟ್‌ಪೇಡ್ ಯೋಜನೆಯನ್ನು ಆರಂಭಸಿದ್ದ ವೊಡಾಫೋನ್, ಈ ಪ್ಲಾನ್‌ನಲ್ಲಿ ಮಾಸಿಕ 40 ಜಿಬಿ ಡಾಟಾ, ಅಪರಿಮಿತ ಕರೆಗಳು ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ನೀಡಿತ್ತು. ಜೊತೆಗೆ ವೊಡಾಫೋನ್ ಪ್ಲೇಬ್ಯಾಕ್, 12 ತಿಂಗಳು ಅಮೆಜಾನ್ ಪ್ರೈಮ್ ಮತ್ತು ವರ್ಷಕ್ಕೆ ಝೀ 5 ಚಂದಾದಾರಿಕೆಗಳು ಗ್ರಾಹಕರಿಗೆ ಲಭ್ಯವಿದ್ದವು.

ಓದಿರಿ: 12,999 ರೂ.ಗೆ ಲಭ್ಯವಿದ್ದ 'ಮಿ ಎಲ್‌ಇಡಿ ಟಿವಿ 4ಎ ಪ್ರೊ (32)' ಬೆಲೆ ಮತ್ತೆ ಇಳಿಕೆ!

Best Mobiles in India

English summary
Vodafone Offering Free Doorstep Delivery of Prepaid SIM on First Time Recharge of Rs 249. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X