Just In
- 1 hr ago ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- 13 hrs ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 16 hrs ago Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 18 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
Don't Miss
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
1GB ಡಾಟಾ ಬೆಲೆಗೆ 10GB 4G ಡಾಟಾ ಆಕ್ಸೆಸ್: ವೊಡಾಫೋನ್ ಆಫರ್
ವೊಡಾಫೋನ್ ಇಂಡಿಯಾ, ಭಾರತದ ವಿಶಾಲ ಪ್ರದೇಶದಲ್ಲಿ ಟೆಲಿಕಂಮ್ಯೂನಿಕೇಷನ್ ಸೇವೆ ನೀಡುತ್ತಿದ್ದು, ಇಂದು (ಸೆಪ್ಟೆಂಬರ್ 27) ಟೆಲಿಕಾಂ ಗ್ರಾಹಕರು ನಂಬಲು ಸಾಧ್ಯವಾಗದ ಡಾಟಾ ಆಫರ್ ಅನ್ನು ಲಾಂಚ್ ಮಾಡಿದೆ. ವೊಡಾಫೋನ್ ಸೂಪರ್‌ನೆಟ್‌ನೊಂದಿಗೆ ಗ್ರಾಹಕರು ಈ ಹಬ್ಬದ ದಿನಗಳಲ್ಲಿ ಹೊಸ 4G ಹ್ಯಾಂಡ್‌ಸೆಟ್‌ನೊಂದಿಗೆ ಕನೆಕ್ಟ್ ಆಗಬಹುದು.
ಅಂದಹಾಗೆ ವೊಡಾಫೋನ್ ಸೂಪರ್‌ನೆಟ್ ಗ್ರಾಹಕರು ಈಗ ಕೇವಲ 1GB ಡಾಟಾಗೆ ಪಾವತಿಸಿ 9GB ಅಧಿಕ ಡಾಟಾವನ್ನು ಉಚಿತವಾಗಿ ಪಡೆಯಬಹುದು. ಒಟ್ಟಾರೆ ವೊಡಾಫೋನ್(Vodafone) ಗ್ರಾಹಕ ಹೊಸ 4G ಹ್ಯಾಂಡ್‌ಸೆಟ್‌ನೊಂದಿಗೆ 10GB ಡಾಟಾವನ್ನು 1GB ಬೆಲೆಗೆ 3 ತಿಂಗಳ ಅವಧಿಗೆ ಪಡೆಯಬಹುದಾಗಿದೆ. ಅಂದಹಾಗೆ ಈ ಆಫರ್ ವೊಡಾಫೋನ್ ತನ್ನ ಸ್ವಂತ 3G/4G ನೆಟ್‌ವರ್ಕ್ ಹೊಂದಿರುವಲ್ಲಿ ಲಭ್ಯವಿದ್ದು, ಪ್ರಿಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ ಡಿಸೆಂಬರ್ 30, 2016 ರವರೆಗೆ ಲಭ್ಯವಿದೆ.
1+9GB ಡಾಟಾ ಆಫರ್ ಅನ್ನು ಯಾರು ಪಡೆಯಬಹುದು, ಎಲ್ಲಿ, ಹೇಗೆ, ನಿಯಮಗಳು ಏನು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಪೂರ್ಣ ಲೇಖನ ಓದಿರಿ.
ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿ ಪರಿಚಯಿಸಿದ ಏರ್ ಟೆಲ್, ವೊಡಾಫೋನ್
1+9GB ಡಾಟಾ
ಅಂದಹಾಗೆ ಹೊಸ ಬಗೆಯ 1+9GB ಡಾಟಾ ಆಫರ್ ಅನ್ನು ವೊಡಾಫೋನ್ ಇಂಡಿಯಾ ವಾಣಿಜ್ಯ ನಿರ್ದೇಶಕರಾದ 'ಸಂದೀಪ್ ಕಟಾರಿಯಾ'ರವರು ಲಾಂಚ್ ಮಾಡಿ, "ವೊಡಾಫೋನ್‌ನಲ್ಲಿ, ಗ್ರಾಹಕರಿಗೆ ಉತ್ತಮ ಮೌಲ್ಯದ ಆಫರ್ ನೀಡುತ್ತಿದ್ದು, ಪ್ರಸ್ತುತದ ಆಫರ್ ಎಲ್ಲರಿಗೂ ಆಶ್ಚರ್ಯವು ಹಾಗೂ ಸಂತೋಸದಾಯಕವಾದ ಆಫರ್ ಆಗಿದೆ' ಎಂದಿದ್ದಾರೆ.
4G ಹ್ಯಾಂಡ್‌ಸೆಟ್ ಅಪ್‌ಗ್ರೇಡ್
ಹಬ್ಬದ ಸೀಸನ್‌ನಲ್ಲಿ ಗ್ರಾಹಕರು 4G ಹ್ಯಾಂಡ್‌ಸೆಟ್ ಅಪ್‌ಗ್ರೇಡ್ ಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದ್ದು, 4G ಹ್ಯಾಂಡ್‌ಸೆಟ್ ಬಳಕೆದಾರರಿಗೆ ವೊಡಾಫೋನ್ ಸೂಪರ್‌ನೆಟ್ ಅನುಭವ ಸಂಪೂರ್ಣವಾಗಿ 1+9GB ಆಫರ್‌ನಿಂದ ಉಚಿತವಾಗಿ ಸಿಗಲಿದೆ.
ವೊಡಾಫೋನ್ ಉಚಿತ ಸಬ್‌ಸ್ಕ್ರೈಬರ್ ಆಫರ್
ವೊಡಾಫೋನ್ ಕೇವಲ 1+9GB ಆಫರ್ ಮಾತ್ರವಲ್ಲದೇ ಉಚಿತ ಸಬ್‌ಸ್ಕ್ರಿಬ್‌ಶನ್ ಆಫರ್ ಅನ್ನು ವೊಡಾಫೋನ್ ಪ್ಲೇನಿಂದ ಟಿವಿ, ಸಿನಿಮಾ ಮತ್ತು ಮ್ಯೂಸಿಕ್‌ಗೆ ನೀಡಿದೆ. ಈ ಆಫರ್ ಸಹ ಈ ವರ್ಷದ ಡಿಸೆಂಬರ್ 31 ರವರೆಗೆ ಇರಲಿದೆ. ಗ್ರಾಹಕರು ಈ ಆಫರ್‌ಗಳನ್ನು ಡೌನ್‌ಲೋಡ್ ಮತ್ತು ಮನರಂಜನೆಗಾಗಿ ವೊಡಾಫೋನ್ ಪ್ಲೇನಿಂದ ಪಡೆಯಬಹುದಾಗಿದೆ.
100 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 18000 ಸಿನಿಮಾಗಳು ಮತ್ತು ಟಿವಿ ಶೋ'ಗಳನ್ನು ಮತ್ತು ವಿಶಾಲವಾದ ವಿವಿಧ ವಿಧಗಳ ಮ್ಯೂಸಿಕ್ ಅನ್ನು HUMGAMA PLAY ಮತ್ತು HOOQ ಸಹಯೋಗದಲ್ಲಿ ವೊಡಾಫೋನ್ ಪ್ಲೇ ಹೊಂದಿದೆ.
ವಿಶೇಷ ಡಾಟಾ ಆಫರ್
1GB ಡಾಟಾ ಬೆಲೆಗೆ 9GB ವಿಶೇಷ ಡಾಟಾ ಪ್ಯಾಕ್, ಕಡಿಮೆ ಇಂಟರ್ನೆಟ್ ಬಳಸುವವರಿಗೆ, ಇದು ಬಜೆಟ್ ಬೆಲೆಯ ಡಾಟಾ ಆಫರ್ ಆಗಿದ್ದು, ಆನ್‌ಲೈನ್‌ಗೆ ಬರಲು ಹೊಸ ಗ್ರಾಹಕರಿಗೂ ಉತ್ತೇಜನ ನೀಡಲಿದೆ. ಅಲ್ಲದೇ ಈಗಾಗಲೇ ಇಂಟರ್ನೆಟ್ ಬಳಸುತ್ತಿರುವವರಿಗೆ ಹೆಚ್ಚಿನ ಸಮಯ ಆನ್‌ಲೈನ್‌ನಲ್ಲಿ ಇರಲು ಉತ್ತಮ ಅನುಭವ ನೀಡಲಿದೆ. ನೆಚ್ಚಿನ ವಿಷಯಗಳನ್ನು ಆಕ್ಸೆಸ್ ಮಾಡಬಹುದಾಗಿದೆ.
1GB ಡಾಟಾ ಬೆಲೆಗೆ 9GB 4G ಡಾಟಾ ಪಡೆಯುವುದು ಹೇಗೆ?
1+9GB ಡಾಟಾ ಆಫರ್ ಬೆನಿಫಿಟ್ ಪಡೆಯಲು ಗ್ರಾಹಕರು www.vodafone.in/smartoffers ನಿಂದ ಆಕ್ಸೆಸ್‌ಗೆ ಆಹ್ವಾನ ಪಡೆಯಬೇಕು. ಈ ಆಫರ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿರಬೇಕು.
ನಿಮಗೆ ಈ ಆಫರ್ ಲಭ್ಯವಿದೆಯೇ ಎಂದು ತಿಳಿಯಲು www.vodafone.in/smartoffers ವೆಬ್ ವಿಳಾಸಕ್ಕೆ ಭೇಟಿ ನೀಡಿ ನಿಮ್ಮ ವೊಡಾಫೋನ್ ನಂಬರ್ ಅನ್ನು ಎಂಟರ್ ಮಾಡಿ. ನಂತರ 4 ಡಿಜಿಟ್‌ನ ಒನ್ ಟೈಮ್ ಪಾಸ್‌ವರ್ಡ್ ಅನ್ನು ಎಂಟರ್ ಮಾಡಿ ಎಸ್‌ಎಂಎಸ್ ಪಡೆಯಿರಿ.
ನಿಯಮಗಳು ಮತ್ತು ಷರತ್ತುಗಳು
ದೆಹಲಿ, ಮುಂಬೈ, ಕೊಲ್ಕತ್ತಾಗಳಲ್ಲಿ- 9GB 4G ಡಾಟಾವು, 1GB ಸಬ್‌ಸ್ಕ್ರಿಬ್‌ಶನ್ ರೀಚಾರ್ಜ್ ಆಗಿದ್ದಲ್ಲಿ ಅಥವಾ ಅದಕ್ಕಿಂತ ಹೆಚ್ಚಿಗೆ ಆಗಿದ್ದಲ್ಲಿ, 4G ನೆಟ್‌ವರ್ಕ್‌ನಲ್ಲಿ ಆಫರ್ ಆಕ್ಸೆಸ್ ಸಿಗುತ್ತದೆ.
ಉತ್ತರ ಪ್ರದೇಶ (ಪಶ್ಚಿಮ), ಉತ್ತರ ಪ್ರದೇಶ (ಪೂರ್ವ), ಹರಿಯಾಣ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಗೋವಾ, ಅಸ್ಸಾಂ, ಈಶಾನ್ಯ ರಾಜ್ಯಗಳು, ರಾಜಸ್ಥಾನಗಳಲ್ಲಿ - 9GB 3G ಡಾಟಾವು, 1GB ಸಬ್‌ಸ್ಕ್ರಿಬ್‌ಶನ್ ರೀಚಾರ್ಜ್ ಅಥವಾ ಅದಕ್ಕಿಂತ ಹೆಚ್ಚಿನ ಡಾಟಾ ಪ್ಯಾಕ್ ರೀಚಾರ್ಜ್ ಆಗಿದ್ದಲ್ಲಿ, 9GB ಡಾಟಾ ಆಕ್ಸೆಸ್ 4G ಹ್ಯಾಂಡ್‌ಸೆಟ್‌ಗಳಲ್ಲಿ ರಾತ್ರಿ 12AM ನಿಂದ 6AM ವರೆಗೆ ಸಿಗಲಿದೆ.
ಹೊಸ 4G ಸ್ಮಾರ್ಟ್‌ಫೋನ್ ಎಂದರೆ?
ಹೊಸ 4G ಸ್ಮಾರ್ಟ್‌ಫೋನ್ ಎಂದರೆ, 4G ಸ್ಮಾರ್ಟ್‌ಫೋನ್ ಒಂದು ಹಿಂದಿನ 6 ತಿಂಗಳು ವೊಡಾಫೋನ್ ನೆಟ್‌ವರ್ಕ್‌ನಲ್ಲಿ ಬಳಕೆ ಆಗಿರಬಾರದು.
9GB ವಿಶೇಷ ಉಚಿತ ಡಾಟಾ ಆಕ್ಸೆಸ್ 1GB ಪ್ಯಾಕ್‌ಗೆ ಅಥವಾ ಅದಕ್ಕೂ ಹೆಚ್ಚಿನ 28 ದಿನಗಳ ವ್ಯಾಲಿಡಿಟಿಯ ಪ್ಯಾಕ್‌ಗಳ ರೀಚಾರ್ಜ್‌ನಿಂದ ಸಿಗಲಿದೆ. ಇತರೆ ಹಲವು ಆಫರ್‌ಗಳ ಸಹಯೋಗಕ್ಕೆ ಲಭ್ಯವಿಲ್ಲ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999