Subscribe to Gizbot

ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿ ಪರಿಚಯಿಸಿದ ಏರ್ ಟೆಲ್, ವೊಡಾಫೋನ್.

Written By:

ದೇಶದ ಎರಡು ದೊಡ್ಡ ಮೊಬೈಲ್ ನೆಟ್ ವರ್ಕ್ ಗಳಾದ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಯು ತಮ್ಮ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಧಾರ್ ನಂಬರ್ ವೆರಿಫಿಕೇಷನ್ ಉಪಯೋಗಿಸಿಕೊಂಡು ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿಯನ್ನು ಪರಿಚಯಿಸುತ್ತಿದೆ.

ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿ ಪರಿಚಯಿಸಿದ ಏರ್ ಟೆಲ್, ವೊಡಾಫೋನ್.

ಏರ್ ಟೆಲ್ ತನ್ನ ಸೇವೆಯನ್ನು ದೆಹಲಿ ವಲಯದಲ್ಲಿ ಜಾರಿಗೆ ತಂದಿದ್ದರೆ, ವೊಡಾಫೋನ್ ಈ ಸೌಲಭ್ಯವನ್ನು ಆಗಷ್ಟ್ 24ರಿಂದ ದೇಶಾದ್ಯಂತ ಜಾರಿಗೆ ತರುತ್ತಿದೆ. ಟ್ರಾಯ್ ನ ಮಾಹಿತಿಯ ಪ್ರಕಾರ ಮೇ 2016ರವರೆಗೆ ಏರ್ ಟೆಲ್ ನ ಗ್ರಾಹಕರ ಸಂಖೈ 25.4 ಕೋಟಿಯಷ್ಟಿದ್ದರೆ ವೊಡಾಫೋನ್ ಬಳಸುವವರ ಸಂಖೈ 19.8 ಕೋಟಿಯಷ್ಟಿದೆ.

 ಓದಿರಿ: ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

"ನಮ್ಮ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರು ಹೊಸ ಸಿಮ್ ಬಳಸಿ ಮಾತನಾಡುತ್ತಾ ಮಳಿಗೆಯಿಂದ ಹೊರನಡೆಯುವವರು. ಟೆಲಿಕಾಮ್ ವಿಭಾಗದೊಂದಿಗೆ ನಾವು ಕೈಜೋಡಿಸಿ ಆಧಾರ್ ಆಧಾರಿತ ಇ-ಕೆವೈಸಿ ಸೇವೆಯನ್ನು ಯಶಸ್ವಿಯಾಗಿ ಎರಡು ವೃತ್ತಗಳಲ್ಲಿ ಪರೀಕ್ಷಿಸಿದ್ದೇವೆ" ಎಂದು ಹೇಳಿದ್ದು ವೊಡಾಫೋನ್ ಇಂಡಿಯಾದ ನಿರ್ದೇಶಕ (ಕಮರ್ಷಿಯಲ್) ಸಂದೀಪ್ ಕಟಾರಿಯಾ.

ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿ ಪರಿಚಯಿಸಿದ ಏರ್ ಟೆಲ್, ವೊಡಾಫೋನ್.

"ಆಗಷ್ಟ್ 24ರಿಂದ ಜಾರಿಯಾಗುವ ಈ ಸೇವೆಯನ್ನು ನಾವು ದೇಶದೆಲ್ಲೆಡೆ ಪರಿಚಯಿಸುತ್ತಿದ್ದೇವೆ" ಎಂದು ಹೇಳಿದರು ಕಟಾರಿಯಾ. ಸದ್ಯ ದೆಹಲಿಯಲ್ಲಷ್ಟೇ ಲಭ್ಯವಿರುವ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಇರುವ ಕಂಪನಿ ನಿರ್ವಹಿತ ಏರ್ ಟೆಲ್ ಮಳಿಗೆಗಳಲ್ಲಿ ಪರಿಚಯಿಸುವುದಾಗಿ ಏರ್ ಟೆಲ್ ತಿಳಿಸಿದೆ.

ಓದಿರಿ: ಹೊಸ ಮೊಬೈಲ್ ಸಂಪರ್ಕಕ್ಕೆ ಆಧಾರ್ ಆಧಾರಿತ ಆಕ್ಟಿವೇಶನ್

ಕಂಪನಿ ನಿರ್ವಹಿತ ಏರ್ ಟೆಲ್ ಮಳಿಗೆಗಳನ್ನು ಹೊರತುಪಡಿಸಿ ಇತರೆ ಮಳಿಗೆಗಳಲ್ಲೂ ಇ-ಕೆವೈಸಿ ಸೌಕರ್ಯ ಲಭ್ಯವಾಗುವಂತೆ ಮಾಡುವುದಾಗಿ ಭಾರ್ತಿ ಏರ್ ಟೆಲ್ ನ ವಕ್ತಾರ ತಿಳಿಸಿದರು.

ಓದಿರಿ: ಸಂಪೂರ್ಣ ಗಾಜಿನಿಂದ ಮಾಡಿದ ಐಫೋನ್ 8

ಇ-ಕೆವೈಸಿ (Electronic Know your customer e - KYC) ಆಯ್ಕೆಯನ್ನು ಉಪಯೋಗಿಸುವ ಗ್ರಾಹಕರಿಗೆ ತಮ್ಮ ಆಧಾರ್ ಕಾರ್ಡಿನ ನಂಬರ್ ಗೊತ್ತಿದ್ದರೆ ಸಾಕು, ಅದರ ಜೊತೆಗೆ ಗ್ರಾಹಕರ ಬೆರಳಚ್ಚನ್ನು ದಾಖಲಿಸಿಕೊಳ್ಳಲಾಗುತ್ತದೆ. ಇದು ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಸಂಪರ್ಕಗಳೆರಡನ್ನೂ ಪಡೆದುಕೊಳ್ಳಲು ಸಾಕು.

ಶೀಘ್ರವಾಗಿ ಸಿಮ್ ಸಕ್ರಿಯಗೊಳಿಸಲು ಇ-ಕೆವೈಸಿ ಪರಿಚಯಿಸಿದ ಏರ್ ಟೆಲ್, ವೊಡಾಫೋನ್.

ಈಗಿರುವ ದಾಖಲೆ ಆಧಾರಿತ ಪ್ರಕ್ರಿಯೆಗೆ ಹೋಲಿಸಿದರೆ ಸಿಮ್ ಸಕ್ರಿಯವಾಗಲು ಈ ಹೊಸ ವಿಧಾನದಲ್ಲಿ ಬೇಕಾಗುವ ಸಮಯ ತುಂಬಾ ಕಡಿಮೆ.

ಮೂಲ: ಪಿಟಿಐ

English summary
Country's two leading mobile operators Bharti Airtel and Vodafone are rolling out e-KYC service at their stores to help customers activate new SIMs instantly with Aadhaar number verification.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot