2G,3G ಗ್ರಾಹಕರಿಗೆ 199 ರೂ.ಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ!.ಈಗ ವೊಡಾಫೋನ್ ಆಟ!!
ಹೊಸ ಪ್ಲಾನ್‌ನಲ್ಲಿ ಕೇವಲ 199 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಯೋಜನೆಗಳನ್ನು ವೊಡಾಫೋನ್ ಪ್ರಕಟಿಸಿದೆ.!!
ಜಿಯೋ, ಏರ್‌ಟೆಲ್ ಸೇರಿ ಟೆಲಿಕಾಂಗೆ ಎದುರೇಟು ನೀಡಲು ಎರಡು ದಿನಗಳ ಹಿಂದಷ್ಟೆ ಪೋರ್ಟ್ ಆಗುವ ನೂತನ 4G ಗ್ರಾಹಕರಿಗೆ ಎರಡು ಆಫರ್ ನೀಡಿದ್ದ ವೊಡಾಫೋನ್ ಟೆಲಿಕಾಂ ಇದೀಗ ಮತ್ತೊಂದು ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.! ಹೊಸ ಪ್ಲಾನ್‌ನಲ್ಲಿ ಕೇವಲ 199 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಯೋಜನೆಗಳನ್ನು ವೊಡಾಫೋನ್ ಪ್ರಕಟಿಸಿದೆ.!!
ಹೌದು, ವಿಶ್ವದ ದೈತ್ಯ ಟೆಲಿಕಾಂ ಇದೀಗ ದರಸಮರವನ್ನು ಹೆಚ್ಚಿಸಲು ಮುಂದಾಗಿದ್ದು, ಕೇವಲ 199 ರೂಪಾಯಿಗಳಿಗೆ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡಿದೆ. ಜೊತೆಗೆ 'ವೊಡಾ 449' ಮತ್ತು 'ವೊಡಾ 449' ಆಫರ್‌ಗಳು ಸಹ ಜನರನ್ನು ಸೆಳೆಯುತ್ತಿವೆ.! ಹಾಗಾದರೆ, ವೊಡಾಫೋನ್ ನೀಡಿರುವ ಹೊಸ ಮೂರು ಆಫರ್‌ಗಳು ಹೇಗಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

"ವೊಡಾ 299" ಆಫರ್!!
ವೊಡಾಫೋನ್ ಎಮ್‌ಎನ್‌ಪಿ ಗ್ರಾಹಕರಿಗಾಗಿ 84 ದಿವಸಗಳ ವ್ಯಾಲಿಡಿಟಿ ಹೊಂದಿರುವ "ವೊಡಾ 299" ಆಫರ್ ಅನ್ನು ಪ್ರಕಟಿಸಿದ್ದು, ಈ ಆಫರ್ ಮೂಲಕ ವೊಡಾಫೋನ್ 4G ಗ್ರಾಹಕರು 84 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ದೇಶದಾಶ್ಯಂತ ವೊಡಾಫೋನ್ ಟು ವೊಡಾಫೋನ್ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆಯಬಹುದು.!!

'ವೊಡಾ 449' ಆಫರ್!!
ವೊಡಾಫೋನ್ ಎಮ್‌ಎನ್‌ಪಿ ಗ್ರಾಹಕರಿಗಾಗಿ 84 ದಿವಸಗಳ ವ್ಯಾಲಿಡಿಟಿ ಹೊಂದಿರುವ 'ವೊಡಾ 449' ಆಫರ್ ಅನ್ನು ಪರಿಚಯಿಸಿದೆ. ಈ ಆಫರ್ ಮೂಲಕ ವೊಡಾಫೋನ್ 4G ಗ್ರಾಹಕರು 84 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ದೇಶದಾಶ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆಯಬಹುದು.!!

199 ರೂ. ವೊಡಾ ಆಫರ್!!
ಇದೇ ಮೊದಲ ಸಾರಿ ಟೆಲಿಕಾಂ ಒಂದು ತನ್ನ ಎಲ್ಲಾ ಗ್ರಾಹಕರಿಗೂ (2G,3G ಮತ್ತು 4G) ಅನ್‌ಲಿಮಿಟೆಡ್ ಆಫರ್ ಅನ್ನು ಪ್ರಕಟಿಸಿದ್ದು, 199 ರೂಪಾಯಿಗಳಿಗೆ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾದ ಅವಕಾಶವನ್ನು ನೀಡಿದೆ.! ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು 28 ದಿನಗಳ ವ್ಯಾಲಿಡಿಟಿಯಲ್ಲಿ ನೀಡಲಾಗಿದೆ.!!

199 ರೂ. ಆಫರ್‌ನಲ್ಲಿ ಷರತ್ತುಗಳಿವೆ.!!
ವೊಡಾಪೋನ್ ಪ್ರಕಟಿಸಿರುವ 199 ರೂ. ನೂತನ ಆಫರ್ 2G,3G ಗ್ರಾಹಕರಿಗೆ ಉತ್ತಮವಾಗಿದ್ದು, ಆದರೆ ಕೆಲವು ಷರತ್ತುಗಳನ್ನು ಹಾಕಲಾಗಿದೆ. ಪ್ರತಿವಾರ 1000 ಕರೆಗಳು ಮಾತ್ರ ಉಚಿತವಾಗಿದ್ದು, ವಾರದಲ್ಲಿ 300ಕ್ಕೂ ಹೆಚ್ಚಿನ ಬೇರೆ ಬೇರೆ ನಂಬರ್‌ಗಳಿಗೆ ಕರೆ ಮಾಡಿದರೆ ಉಚಿತ ಕರೆ ಕಟ್ ಆಗಲಿದೆ.!!
ಓದಿರಿ:5,500ಕೋಟಿ ಹಣ ದಾನ ಮಾಡುತ್ತಿದ್ದಾರೆ ನಿಲೇಕಣಿ ದಂಪತಿ!!..ದಾನ ಮಾಡುತ್ತಿರುವುದು ಹೇಗೆ ಗೊತ್ತಾ?


Click it and Unblock the Notifications