ತಾವು ಗಳಿಸಿದ 5,500ಕೋಟಿ ಹಣವನ್ನು ನಿಲೇಕಣಿ ದಂಪತಿ ದಾನ ಮಾಡುತ್ತಿರುವುದು ಹೇಗೆ?
ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಸಂಪತ್ತನ್ನು ಹೇಗೆ ದಾನ ಮಾಡುತ್ತಿದ್ದಾರೆ?
ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಧರ್ಮ ಉದ್ದೇಶಕ್ಕೆ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಪ್ರಸ್ತುತ ಕಾರ್ಯನಿರ್ವಹಣಾ ಮುಖ್ಯಸ್ಥ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ಮೊದಲಾಗಿದ್ದು, ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಧರ್ಮ ಉದ್ದೇಶಕ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
ಹೌದು, ದೇಶೀಯ ಐಟಿ ವಲಯದಲ್ಲಿಯೇ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಭಾಗವೇ ಆಗಿರುವ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ಸರಿಸುಮಾರು 11,000ಕೋಟಿಗೂ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದು, ಈ ಆಸ್ತಿಯಲ್ಲಿ ಅರ್ಧಭಾಗ ಅಂದರೆ 5,500ಕೋಟಿಗೂ ಹಣವನ್ನು ದಾನಧರ್ಮ ಉದ್ದೇಶಕ್ಕಾಗಿ ಮೀಸಲಿಡುತ್ತಿದ್ದಾರೆ.

ಹಾಗಾದರೆ, ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಸಂಪತ್ತನ್ನು ಹೇಗೆ ದಾನ ಮಾಡುತ್ತಿದ್ದಾರೆ? ಸಂಪತ್ತನ್ನು ದಾನ ಮಾಡಲು ನಿಲೇಕಣಿ ದಂಪತಿಗೆ ಪ್ರೇರಣೆ ಏನು? ಮತ್ತು ಭಾರತದಲ್ಲಿ ಯಾರಾರು ದಾನ ಮಾಡಲು ಮುಂದಾಗಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಯಿರಿ.

ದಾನ ಮಾಡಲು ಪ್ರೇರಣೆ ಭಗವದ್ಗೀತೆ!
ಸಾವಿರಾರು ಕೋಟಿ ಒಡೆಯ ದಂಪತಿಗಳಾದ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಅರ್ಧ ಆಸ್ತಿಯನ್ನು ದಾನ ಮಾಡುವುದಾಗಿ ಹೇಳೀದ ನಂತರ "ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ ಎಂಬ ಭಗವದ್ಗೀತೆಯ ಸಂದೇಶವನ್ನು ಸ್ಮರಿಸಿದ್ದು, ದಾನ ನೀಡಲು ಇದುವೇ ಪ್ರೇರಣೆ ಎಂದು ತಿಳಿಸಿದ್ದಾರೆ.

ಗಿವಿಂಗ್ ಪ್ಲೆಡ್ಜ್‌ಗೆ ದಾನ!
ವಿಶ್ವದ ನಾನಾ ಶ್ರೀಮಂತರು ತಮ್ಮ ಸಂಪತ್ತಿನ ಬಹುಪಾಲನ್ನು ಕೊಡುಗೆಯಾಗಿ ನೀಡುವ ವಾಗ್ದಾನ ಕೊಟ್ಟಿರುವ 'ದಿ ಗಿವಿಂಗ್ ಪ್ಲೆಡ್ಜ್' ಅಭಿಯಾನಕ್ಕೆ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಅರ್ಧ ಆಸ್ತಿಯನ್ನು ದಾನ ಮಾಡುತ್ತಿದ್ದಾರೆ. ಈ 'ದಿ ಗಿವಿಂಗ್ ಪ್ಲೆಡ್ಜ್'ಗೆ ಇದುವರೆಗೆ 21 ದೇಶಗಳಿಗೆ ಸೇರಿದ 171 ಮಂದಿ ಶ್ರೀಮಂತರು ತಮ್ಮ ಅರ್ಧದಷ್ಟು ಸಂಪತ್ತು ನೀಡುವ ವಾಗ್ದಾನ ಮಾಡಿದ್ದಾರೆ.

ಏನಿದು ಗಿವಿಂಗ್ ಪ್ಲೆಡ್ಜ್?
ವಿಶ್ವದ ನಂಬರ್ ಒನ್ ಶ್ರೀಮಂತ ಮೈಕ್ರೊಸಾಫ್ಟ್ ಕಂಪನಿಯ ಸ್ಥಾಪಕ ಬಿಲ್‌ಗೇಟ್ಸ್ ಮತ್ತು ಹೂಡಿಕೆದಾರ ವಾರೆನ್ ಬಫೆಟ್ ಆರಂಭಿಸಿರುವ ದೇಣಿಗೆ ಸಂಸ್ಥೆಯೇ 'ದಿ ಗಿವಿಂಗ್ ಪ್ಲೆಡ್ಜ್'. 2010ರಲ್ಲಿ ಆರಂಭಿಸಿದ ಗಿವಿಂಗ್ ಪ್ಲೆಡ್ಜ್ ಅಭಿಯಾನವು ವಿಶ್ವಾದ್ಯಂತ ಶ್ರೀಮಂತರನ್ನು ಸಂಪರ್ಕಿಸಿ, ತಮ್ಮ ಅರ್ಧದಷ್ಟು ಸಂಪತ್ತನ್ನು ಸಮಾಜ ಕಲ್ಯಾಣ ಯೋಜನೆಗಳಿಗೆ ದಾನವಾಗಿ ನೀಡುವಂತೆ ಮನವೊಲಿಸುತ್ತದೆ.

ಗಿವಿಂಗ್ ಪ್ಲೆಡ್ಜ್ ಗುರಿಯೇನು?
ವಿಶ್ವಕಲ್ಯಾಣಕ್ಕಾಗಿ ಜಗತ್ತಿನ ಶ್ರೀಮಂತರುಗಳು ಸೇರಿ ಉಳಿಸಿ ಬೆಳಸುತ್ತಿರುವ ಸಂಸ್ಥೆ ಈ 'ದಿ ಗಿವಿಂಗ್ ಪ್ಲೆಡ್ಜ್'. ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಅಭಿವೃದ್ದಿಯನ್ನೇ ಕಾಣದ ವಿಶ್ವದ ಜನರಿಗೆ ನಾನಾ ರೂಪದಲ್ಲಿ ಸಹಾಯಹಸ್ತ ನೀಡಿ ಮಾನವ ಕುಲವನ್ನು ಉದ್ದಾರ ಮಾಡುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಭಾರತದಲ್ಲಿ ಇವರು ನಾಲ್ಕನೆಯವರು
ನೀಲೆಕಣಿ ದಾನ ನೀಡುವಾಗ ಹೆಚ್ಚು ಹೆಸರಾಗಿರುವ ಗಿವಿಂಗ್ ಪ್ಲೆಡ್ಜ್ ಅಭಿಯಾನಕ್ಕೆ ಈಗಾಗಲೇ ಮೂವರು ಭಾರತೀಯರು ಸಹಿಹಾಕಿದ್ದಾರೆ. ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜೀ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮತ್ತು ಶೋಭಾ ಡೆವಲಪರ್ಸ್‌ನ ಗೌರವಾಧ್ಯಕ್ಷ ಪಿ.ಎನ್.ಸಿ ಮೆನನ್ ಈ ಕಾರ್ಯಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ.

ಅಂಬಾನಿಗೆ ಜಿಯೋ ಗಳಿಸಿ ಕೊಟ್ಟಿದ್ದು ಎಷ್ಟು..? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ..!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಡು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಜಿಯೋ ಸಾಧನೆಯ ರಿಸಲ್ಟ್ ಆಚೆ ಬಂದಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ. 03ರಷ್ಟು ಏರಿಕೆ ಮಾಡಿಕೊಂಡಿದೆ. ಇದರಲ್ಲಿ ದೊಡ್ಡ ಪ್ರಮಾಣದ ಆದಾಯ ಜಿಯೋ ದಿಂದಲೇ ಬಂದಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಲ್ಲವಾದರೂ ಸಹ ಅಲ್ಪ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇದಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿಕೊಂಡರೆ ಭಾರೀ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇತರೆ ಕಂಪನಿಗಳು ಇಷ್ಟು ಪ್ರಮಾಣದ ಲಾಭವನ್ನು ಮಾಡಿಕೊಳ್ಳಲು ಪರದಾಡುತ್ತಿವೆ.

9,485 ಕೋಟಿ ರೂ ನಿವ್ವಳ ಲಾಭ:
ಕಳೆದ ಬಾರಿಯ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕದಲ್ಲಿ 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು. ಈ ಬಾರಿ ಅದರಲ್ಲಿ ಏರಿಕೆಯಾಗಿದ್ದು, ಈ ಬಾರಿಯ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ಮಾಡಿಕೊಂಡಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಬೇಡಿಕೆಯನ್ನು ತೋರಿಸಲಿದೆ.

ಜಿಯೋ ಲಾಭ ಕೂಡ ಅಧಿಕ:
ರಿಲಯನ್ಸ್ ಇಂಡಸ್ಟ್ರೀಸ್ ನ ಒಂದು ಭಾಗವಾಗಿರುವ ಜಿಯೋ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಏಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಜಿಯೋ 612 ಕೋಟಿ ರೂ ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಪಡೆದುಕೊಂಡಿತ್ತು.

ಶೇ. 20ರಷ್ಟು ಹೆಚ್ಚಳ:
ಕಳೆದ ಮೂರು ತಿಂಗಳ ಅವಧಿಯಲ್ಲಿ 510 ಕೋಟಿ ಲಾಭ ಮಾಡಿಕೊಂಡಿದ್ದ ಜಿಯೋ ಈ ಬಾರಿ ಶೇ. 20ರಷ್ಟು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಜಿಯೋ ಬೇಡಿಕೆಯನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಜಿಯೋ ಆದಾಯವೂ ಅಧಿಕವಾಗಿದೆ. ಬೇರೆ ಟೆಲಿಕಾಂ ಕಂಪನಿಗಳು ಈ ಪ್ರಮಾಣಷ್ಟು ಆದಾಯವನ್ನು ಪಡೆದುಕೊಂಡಿಲ್ಲ ಎನ್ನಲಾಗಿದೆ.

ಬಳಕೆದಾರರ ಸಂಖ್ಯೆಯೂ ಅಧಿಕ:
ಇದಲ್ಲದೇ ಜಿಯೋ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಿದೆ. ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿ ಯಾವ ಕಂಪನಿಗಳು ಲಾಭವನ್ನು ಮಾಡಿಕೊಂಡಿಲ್ಲ.


Click it and Unblock the Notifications








