Home
ಸುದ್ದಿಜಾಲ

ವೊಡಾಫೋನ್ ಗ್ರಾಹಕರೇ ನೀವಿನ್ನು ಫೋನಿನಲ್ಲೇ 'ಲೈವ್ ಟಿವಿ' ನೋಡಬಹುದು!

ಪ್ರಸ್ತುತ ಸ್ಮಾರ್ಟ್‌ಫೋನಿನಲ್ಲಿಯೇ ಲೈವ್ ಟಿವಿ ವೀಕ್ಷಿಸುವ ಮತ್ತು ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ವೀಕ್ಷಣೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಲೈವ್ ಟಿವಿ ಮತ್ತು ವಿಡಿಯೊ ಕಂಟೆಂಟ್ ವೀಕ್ಷಿಸುವ ಸೌಲಭ್ಯವನ್ನು ನೀಡುತ್ತಿವೆ. ಅದೇ ರೀತಿ ವೊಡಾಫೋನ್ ಕಂಪನಿಯು ಸಹ ಇದೀಗ ತನ್ನ ಗ್ರಾಹಕರಿಗೆ 'ವೊಡಾಫೋನ್ ಪ್ಲೇ' ಮೊಬೈಲ್ ವೆಬ್‌ಸೈಟ್‌ ಪರಿಚಯಿಸಿದ್ದು, ಗ್ರಾಹಕರಿಗೆ ಮನರಂಜನೆಯ ಮಹಾಪೂರವನ್ನು ನೀಡಲು ಮುಂದಾಗಿದೆ.

ವೊಡಾಫೋನ್ ಪ್ಲೇ

ಹೌದು, ಜನಪ್ರಿಯ ವೊಡಾಫೋನ್ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ವೊಡಾಫೋನ್ ಪ್ಲೇ ಆಪ್‌ ಮೂಲಕ ವಿಡಿಯೊ ಕಂಟೆಂಟ್‌ ವೀಕ್ಷಿಸುವ ಅವಕಾಶವನ್ನು ನೀಡಿದೆ. ಆದ್ರೆ ಇದೀಗ ತನ್ನ ಸೇವಾವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿರುವ ವೊಡಾಫೋನ್, ಹೊಸದಾಗಿ ವೊಡಾಫೋನ್ ಪ್ಲೇ ಮೊಬೈಲ್ ವೆಬ್‌ಸೈಟ್‌ ಸೇವೆ ಶುರುಮಾಡಿದೆ. ಈ ತಾಣದಲ್ಲಿ ಗ್ರಾಹಕರು ವಿಡಿಯೊ ಕಂಟೆಂಟ್‌ ಮತ್ತು ಲೈವ್ ಟಿವಿ ವೀಕ್ಷಿಸಬಹುದಾಗಿದೆ. ಹಾಗಾದರೇ ವೊಡಾಫೋನ್ ಪ್ಲೇ ಆಪ್‌ನಲ್ಲಿ ಮತ್ತು ಮೊಬೈಲ್ ಸೈಟ್‌ನಲ್ಲಿ ಯಾವೆಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ ಎನ್ನುವುದನ್ನು ಮುಂದೆ ತಿಳಿಯೋಣ.

ಮನರಂಜನೆಯ ಸೌಲಭ್ಯಗಳು

ವೊಡಾಫೋನ್ ಪ್ಲೇ ಸೇವೆಯನ್ನು ಆಪ್‌ ಮತ್ತು ಮೊಬೈಲ್‌ ವೆಬ್‌ಸೈಟ್‌ನಲ್ಲಿ ಗ್ರಾಹಕರು ಬಳಸಬಹುದಾಗಿದ್ದು, ಇದರಲ್ಲಿ ಗ್ರಾಹಕರಿಗೆ ವಿಡಿಯೊ ಆನ್ ಡಿಮ್ಯಾಂಡ್ ಆಯ್ಕೆಯು ಸಿಗಲಿದೆ. ಹಾಗೆಯೇ ಬಾಲಿವುಡ್‌, ಹಾಲಿವುಡ್, ಪ್ರಾದೇಶಿಕ ಸೇರಿದಂತೆ ಅಂತರಾಷ್ಟ್ರೀಯ ಓರಿಜಿನಲ್ಸ್‌, ಸಿನಿಮಾ, ಲೈವ್‌ ಟಿವಿ, ವೆಬ್‌ಶೋ, ವೆಬ್‌ಸಿರೀಸ್‌ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಬಹುದಾಗಿದೆ.

ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌

ವೊಡಾಫೋನ್ ಪ್ಲೇ ಆಪ್‌ ಮತ್ತು ಮೊಬೈಲ್ ವರ್ಷನ್‌ನಲ್ಲಿ ಜೀ5, ಎಎಲ್‌ಟಿ ಬಾಲಾಜಿ, ಶೆಮರೂ ಮಿ, ಸನ್‌ನೆಕ್ಸ್ಟ್‌, ಎರೊಸ್ ನವ್, Hoichoi, ಹಂಗಾಮಾ ಸೇರಿದಂತೆ ಇನ್ನು ಹಲವು ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ ಕಂಟೆಂಟ್ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಸುಮಾರು 300 ಲೈವ್ ಚಾನೆಲ್ಸ್‌ಗಳನ್ನು ಸಹ ಗ್ರಾಹಕರ ವೀಕ್ಷಣೆಗೆ ದೊರೆಯಲಿವೆ. ವಿಡಿಯೊ ಡೌನ್‌ಲೋಡ್ ಮಾಡಿ ಆಫ್‌ಲೈನ್‌ ವೀಕ್ಷಣೆ ಮಾಡಬಹುದು.

ಲೈವ್ ಚಾನಲ್ಸ್‌ ಲಭ್ಯ

ವೊಡಾಫೋನ್‌ ಪ್ಲೇ ಸೇವೆಯಲ್ಲಿ ಗ್ರಾಹಕರು ಕೇವಲ 'ವಿಡಿಯೊ ಆನ್ ಡಿಮ್ಯಾಂಡ್‌'(VOD) ಮಾತ್ರವಲ್ಲದೇ, OTT ವಿಡಿಯೊಗಳ ನೋಡಲಬಹುದಾಗಿದೆ. ಹಾಗೆಯೇ ಲೈವ್ ಚಾನೆಲ್ಸ್‌ಗಳನ್ನು ಸಹ ವೀಕ್ಷಿಸಬಹುದಾಗಿದ್ದು, ಸುಮಾರು 300 ಲೈವ್ ಚಾನೆಲ್ಸ್‌ಗಳು ಲಭ್ಯ. ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಸ್ಟೋರೇಜ್ ಸ್ಥಳಾವಕಾಶ ಹೊಂದಿದ ಗ್ರಾಹಕರಿಗೆ ಲೈವ್ ಟಿವಿ ವೀಕ್ಷಣೆ ಉತ್ತಮ ಎನಿಸಲಿದೆ.

ಟೆಲಿಕಾಂ ಸಂಸ್ಥೆಗಳ ಪೈಪೋಟಿ

ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಕಂಟೆಂಟ್‌ ಸೇವೆ ನೀಡುವ ಪರಂಪರೆ ಆರಂಭಿಸಿದ್ದು ಜಿಯೋ ಟೆಲಿಕಾಂ. ಆದ್ರೆ ಆ ಪರಂಪರೆ ಈಗ ಪೈಪೋಟಿ ರೂಪ ಪಡೆದಿದೆ. ವಿಡಿಯೊ ಸ್ಟ್ರಿಮಿಂಗ್ ಸೇವೆ ನೀಡುವ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳಲ್ಲಿ ಇದು ಒಂದಾಗಿದೆ. ಸದ್ಯ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳ ಈ ಸೇವೆಗಳನ್ನು ನೀಡುತ್ತಿದ್ದು, ಆದ್ರೆ ವೊಡಾಫೋನ್ ಮೊಬೈಲ್ ವೆಬ್‌ಸೈಟ್‌ನಲ್ಲಿ ಈ ಸೇವೆ ನೀಡುವುದಾಗಿ ತಿಳಿಸಿದೆ.

Best Mobiles in India

English summary
vodafone has launched a mobile website to allow the subscribers to access this on-demand video content on web. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+