Home
ಸುದ್ದಿಜಾಲ

Vodafone 997 Plan: ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೇ 6 ತಿಂಗಳು ತಲೆಬಿಸಿ ಇಲ್ಲ!

ದೇಶದ ಖಾಸಗಿ ಟೆಲಿಕಾಂ ವಲಯದ ಜನಪ್ರಿಯ ವೊಡಾಫೋನ್ ಇತ್ತೀಚಿಗೆ ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಅನಿಸಿತ್ತು. ಅದಾದ ಬಳಿಕ ಕೇಲವು ಆಕರ್ಷಕ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರ ಸೆಳೆಯುವ ಪ್ರಯತ್ನ ಮಾಡಿದೆ. ಆದ್ರೆ ಇದೀಗ ವೊಡಾಫೋನ್ ದೀರ್ಘಾವಧಿ ವ್ಯಾಲಿಡಿಟಿಯ ಮತ್ತು ಡಾಟಾ ಸೌಲಭ್ಯವನ್ನು ಹೊಂದಿರುವ ಪ್ರೀಪೇಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ.

ವೊಡಾಫೋನ್ ಟೆಲಿಕಾಂ

ಹೌದು, ವೊಡಾಫೋನ್ ಟೆಲಿಕಾಂ ಈಗ 997ರೂ. ಬೆಲೆಯ ಹೊಸ ಪ್ರೀಪೇಡ್ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದೆ. ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಹಾಗೂ ಪ್ರತಿದಿನ ಅಧಿಕ ಡಾಟಾ ಸೌಲಭ್ಯವನ್ನು ಆಪೇಕ್ಷಿಸುವ ಬಳಕೆದಾರರಿಗೆ ಈ ಪ್ಲ್ಯಾನ್ ಅತ್ಯುತ್ತಮ ಅನಿಸುವುದು. ಏಕೆಂದರೇ ಈ ಪ್ಲ್ಯಾನ್ 180 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಜೊತೆಗೆ ಪ್ರತಿದಿನ ಡಾಟಾ ಪ್ರಯೋಜನ ಸಹ ನೀಡುತ್ತದೆ. ಹಾಗಾದರೆ ವೊಡಾಫೋನ್‌ 997ರೂ. ಪ್ಲ್ಯಾನ್‌ ಪ್ರಯೋಜನಗಳೆನು ಹಾಗೂ ಇತರೆ ಹೊಸ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 997ರೂ.ಪ್ಲ್ಯಾನ್

ವೊಡಾಫೋನ್ 997ರೂ.ಪ್ಲ್ಯಾನ್

ವೊಡಾಫೋನ್ ಹೊಸದಾಗಿ ಲಾಂಚ್ ಮಾಡಿರುವ 997ರೂ.ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಪ್ರಯೋಜನ ಲಭ್ಯವಾಗಲಿದ್ದು, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸಹ ಇರಲಿವೆ. ಇದರೊಂದಿಗೆ ಅನಿಯಮಿತ ಲೋಖಲ್ ಮತ್ತು ನ್ಯಾಶನಲ್ ವಾಯಿಸ್‌ ಕರೆಗಳ ಸೌಲಭ್ಯವು ಸಹ ಒಳಗೊಂಡಿದೆ. ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 270GB ಡಾಟಾ ಪ್ರಯೋಜನ ಸಿಗಲಿದೆ.

ವೊಡಾಫೋನ್‌ 1499ರೂ.ಪ್ಲ್ಯಾನ್

ವೊಡಾಫೋನ್‌ 1499ರೂ.ಪ್ಲ್ಯಾನ್

ವೊಡಾಫೋನಿನ 1499ರೂ.ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಹಾಗೂ 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗುತ್ತವೆ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್ (FUP) ಇರುತ್ತದೆ.

ವೊಡಾಫೋನ್‌ 2399ರೂ.ಪ್ಲ್ಯಾನ್

ವೊಡಾಫೋನ್‌ 2399ರೂ.ಪ್ಲ್ಯಾನ್

ವೊಡಾಫೋನಿನ 2399ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

ವೊಡಾಫೋನ್‌ 555ರೂ.ಪ್ಲ್ಯಾನ್

ವೊಡಾಫೋನ್‌ 555ರೂ.ಪ್ಲ್ಯಾನ್

ವೊಡಾಫೋನಿನ ಈ 555ರೂ. ಪ್ರೀಪೇಡ್‌ ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಹಾಗೂ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡಲಿದೆ. ಹಾಗೆಯೇ ಅನಿಯಮಿತ ಕರೆಗಳ ಸೌಲಭ್ಯವನ್ನು ಪಡೆದಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿನ ಮನರಂಜನೆಯ ಸೇವೆಗಳ ಸೌಲಭ್ಯ ಸಹ ಒದಗಿಸಲಿದೆ. ಸದ್ಯ ಈ ಪ್ಲ್ಯಾನ್ ಮುಂಬೈ ನಗರದಲ್ಲಿ ಮಾತ್ರ ಲಭ್ಯ ಇದೆ.

ವೊಡಾಫೋನ್ 99ರೂ.ಪ್ಲ್ಯಾನ್

ವೊಡಾಫೋನ್ 99ರೂ.ಪ್ಲ್ಯಾನ್

ವೊಡಾಪೋನ್‌ 99ರೂ. ಪ್ರೀಪೇಡ್‌ ಪ್ಲ್ಯಾನ್‌ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಕೇವಲ 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಇನ್ನು ಈ ಪ್ಲ್ಯಾನ್ ಪೂರ್ಣ ವ್ಯಾಲಿಡಿಟಿ ಅವಧಿಗೆ 1GB ಡಾಟಾ ಪ್ರಯೋಜನವನ್ನು ಒದಗಿಸಲಿದ್ದು, ಅದರೊಂದಿಗೆ 100ಎಸ್‌ಎಮ್ಎಸ್ ಸಹ ನೀಡುತ್ತದೆ. ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಹ ಇರಲಿದ್ದು, ವೊಡಾಫೋನ್ ಆಪ್‌ನ ಮನರಂಜನೆಯ ಸೇವೆಗಳು ದೊರೆಯಲಿವೆ. ಇನ್ನು ಈ ಪ್ಲ್ಯಾನ್ ಕಲ್ಕತ್ತಾ, ಓಡಿಸಾ, ತಮಿಳನಾಡು, ರಾಜಸ್ಥಾನ, ಸೇರಿದಂತೆ ಆಯ್ದ ನಗರಗಳಲ್ಲಿ ಮಾತ್ರ ಚಾಲ್ತಿ ಇದೆ.

Best Mobiles in India

English summary
Vodafone is offering two long-term prepaid plans to the users priced at Rs 1,499 and Rs 2,399, and now, the Rs 997 pack joins the list. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+