Subscribe to Gizbot

ಈ ಸುದ್ದಿಯಿಂದ ವೊಡಾಫೋನ್ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು!!

Written By:

ಜಿಯೋ ಬಂದ ನಂತರ ಬಹುತೇಕರಿಗೆ ವೊಡಾಫೋನ್ ಕಂಡರೆ ಅಷ್ಟಕಷ್ಟೆ ಎನ್ನುವ ಅಭಿಪ್ರಾಯವಿತ್ತು. ಆದರೆ, ಹೊಸದಾಗಿ ಹೊರಬಿದ್ದಿರುವ ಸುದ್ದಿಯೊಂದರಿಂದ ವೊಡಾಫೋನ್ ಬಗೆಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು. ಹೌದು, ವೊಡಾಫೊನ್ ಒಳ್ಳೆಯ ಕಾರ್ಯ ಮಾಡಿತ್ತಿದೆ.!!

ಇಂಗ್ಲೆಂಡ್ ಮೂಲದ ಟೆಲಿಕಾಂ ಕಂಪೆನಿ ವೊಡಾಫೋನ್, ನಕಲಿ ಸುದ್ದಿ ಪ್ರಕಟಿಸುವ ಮತ್ತು ದ್ವೇಷಪೂರಿತ ಮಾತುಗಳನ್ನು ಹರಡುವ ಸುದ್ದಿ ತಾಣಗಳಲ್ಲಿ ತಮ್ಮ ಸಂಸ್ಥೆಯ ಜಾಹಿರಾತು ನೀಡುವುದನ್ನು ತಡೆಯಲು ಮುಂದಾಗಿದೆ.!! ಸಮಾಜದ ತತ್ವಗಳಿಗೆ ವಿರುದ್ಧವಾದ ಕೆಲಸಗಳಿಗೆ ನಮ್ಮ ವಿರೋಧವಿದೆ ಎಂದು ಹೇಳಿದೆ.!!

ಈ ಸುದ್ದಿಯಿಂದ ವೊಡಾಫೋನ್ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು!!

ವರ್ಷಕ್ಕೆ ಸುಮಾರು 750 ಮಿಲಿಯನ್ ಪೌಂಡ್ ಜಾಹಿರಾತಿಗೆಂದೇ ವ್ಯಯಿಸುವ ವೊಡಾಫೋನ್, ದ್ವೇಷಪೂರಿತ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಪ್ರಕಟಿಸುವ ಜಾಲತಾಣಗಳು ಹೆಚ್ಚಾಗಿದ್ದು, ವೊಡಾಫೋನ್ ಜಾಹಿರಾತು ಅಂತಹ ಸೈಟ್‌ಗಳಿಗೆ ತಲುಪದಂತೆ ತಡೆಯಲು ವೊಡಾಫೋನ್ ಹೊಸ ನಿಯಮಗಳನ್ನು ಹಾಕಿಕೊಂಡಿದೆ.

ಈ ಸುದ್ದಿಯಿಂದ ವೊಡಾಫೋನ್ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು!!

ನಮ್ಮ ಸಂಸ್ಥೆಯ ಜಾಹಿರಾತು ಅಂತಹ ನಿಂದನಾತ್ಮಕ ನಕಲಿ ಸುದ್ದಿಗಳನ್ನು ಹೊತ್ತ ಜಾಲತಾಣಗಳೊಂದಿಗೆ ಸಹಯೋಗ ಹೊಂದುವುದನ್ನು ನಾವು ಸಹಿಸುವುದಿಲ್ಲ. ನಕಲಿ ಸುದ್ದಿಗಳು, ಸಮುದಾಯಗಳನ್ನು ಬೆಸೆಯುವ ಗೌರವ ಮತ್ತು ನಂಬಿಕೆಯ ತತ್ವಗಳಿಗೆ ವಿರುದ್ಧ" ಎಂದು ವೊಡಾಫೋನ್ ಸಿಇಒ ವಿಟ್ಟೋರಿಯೋ ಕೊಲವೊ ಹೇಳಿದ್ದಾರೆ.

ಓದಿರಿ:  ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

English summary
Vodafone has decided to stop giving ads to those online platforms.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot