Home
ಸುದ್ದಿಜಾಲ

ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿಯು ಹಲವು ಮಹತ್ತರ ಬದಲಾವಣೆಗಳಿಗೆ ಸಾಕ್ಷಿ ಆಗಿದೆ. ಕರೆಗಳಿಗೆ ಸಿಕ್ಕಾಪಟ್ಟೆ ಶುಲ್ಕ ವಿಧಿಸುತ್ತಿದ್ದ ಟೆಲಿಕಾಂ ಕಂಪನಿಗಳು ಈಗ ಉಚಿತ ಕರೆಗಳನ್ನು ನೀಡುತ್ತಿವೆ. ಹಾಗೆಯೇ ತಿಂಗಳಿಗೆ ಕೇವಲ 1GB ಡೇಟಾಗೆ ಗ್ರಾಹಕರಿಂದ ನೂರಾರು ರೂಪಾಯಿ ಪಾವತಿಸಿಕೊಳ್ಳುತ್ತಿದ್ದ ಅದೇ ಪ್ರತಿಸ್ಠಿತ ಟೆಲಿಕಾಂ ಸಂಸ್ಥೆಗಳಿಂದು ಪ್ರತಿದಿನ ಸುಮಾರು 2GB ವರೆಗೂ ಉಚಿತ ಡೇಟಾವನ್ನು ನೀಡುತ್ತಿವೆ.

ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

ಹೌದು, ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ಭದ್ರವಾಗಿ ಉಳಿದುಕೊಳ್ಳಲು ಟೆಲಿಕಾಂ ಕಂಪನಿಗಳಿಗೆ ಇಂತಹ ನಿರ್ಧಾರ ಅವಶ್ಯಕ ಎನ್ನುವ ಪರಿಸ್ಥಿತಿ ಇಂದಿನದು. ಸದ್ಯ ಪ್ರೋಪೇಡ್‌ ಬಳಕೆದಾರರಿಗೆ ಹೆಚ್ಚಾದ ಆಫರ್‌ಗಳು ಲಭ್ಯ ಆಗುತ್ತಿವೆ. ಆದರೆ ಇದೀಗ ವೊಡಾಫೋನ್ ಕಂಪನಿಯು ಪೋಸ್ಟ್‌ಪೇಡ್‌ ಗ್ರಾಹಕರಿಗೆ RED ಟುಗೇದರ್ ಫ್ಯಾಮಿಲಿ ಪ್ಯಾಕ್‌ ಪ್ಲ್ಯಾನ್ಸ್‌ಗಳನ್ನು ಪರಿಚಯಿಸಿದ್ದು, ಒಂದೇ ಪ್ಲ್ಯಾನ್‌ ಕುಟುಂಬ ಸದಸ್ಯರೆಲ್ಲರಿಗೂ ಅನುಕೂಲವಾಗಲಿದೆ.

ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

ವೊಡಾಫೋನ್ ಪೋಸ್ಟ್‌ಪೇಡ್‌ ಗ್ರಾಹಕರಿಗೆ ನಾಲ್ಕು ವಿಶೇಷ ಯೋಜನೆಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ಅಗತ್ಯ ಪ್ಲ್ಯಾನ್ ಸೆಲೆಕ್ಟ್‌ ಮಾಡಿ, ಮನೆಯ ಸದಸ್ಯರನ್ನು (2-5) ಸೇರಿಸಿಕೊಳ್ಳ ಬಹುದಾಗಿದೆ. ಒಂದು ಕುಟುಂಬದಲ್ಲಿ ಗರಿಷ್ಠ 5 ಸದಸ್ಯರ ಸೇರ್ಪಡೆಗೆ ಮಾತ್ರ ಅವಕಾಶವಿದೆ. ಈ ಯೋಜನೆಗಳಿಂದ ಗ್ರಾಹಕರ ತಿಂಗಳ ಮೊಬೈಲ್‌ ಬಿಲ್‌ನಲ್ಲಿ ಶೇ.80% ಉಳಿಕೆ ಮಾಡಲು ನೆರವಾಗಲಿವೆ ಎನ್ನಲಾಗಿದೆ. ಹಾಗಾದರೇ ವೊಡಫೋನ್ RED ಟುಗೇದರ್ ಫ್ಯಾಮಿಲಿ ಪ್ಯಾಕ್‌ ವಿಶೇಷತೆಗಳೆನಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

RED ಟುಗೇದರ್ 598ರೂ ಪ್ಲ್ಯಾನ್‌

RED ಟುಗೇದರ್ 598ರೂ ಪ್ಲ್ಯಾನ್‌

ಈ ಪ್ಲ್ಯಾನ್‌ನ ತಿಂಗಳ ಬೆಲೆಯು 598ರೂ (+ಟ್ಯಾಕ್ಸ್) ಆಗಿದ್ದು, ಇಬ್ಬರೂ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 50GB ಮತ್ತು ಸೆಕೆಂಡರಿ ಸದಸ್ಯರಿಗೆ 30GB ಉಚಿತ ಡೇಟಾ ಲಭ್ಯವಾಗಲಿದೆ.

RED ಟುಗೇದರ್ 749ರೂ ಪ್ಲ್ಯಾನ್‌

RED ಟುಗೇದರ್ 749ರೂ ಪ್ಲ್ಯಾನ್‌

ಈ ಪ್ಲ್ಯಾನ್‌ನ ತಿಂಗಳ ಬೆಲೆಯು 749ರೂ (+ಟ್ಯಾಕ್ಸ್) ಆಗಿದ್ದು, ಮೂವರು ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಇರಲಿದೆ. ಹಾಗೆಯೇ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 60GB ಮತ್ತು ಸೆಕೆಂಡರಿ ಸದಸ್ಯರಿಬ್ಬರಿಗೂ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

RED ಟುಗೇದರ್ 899ರೂ ಪ್ಲ್ಯಾನ್‌

RED ಟುಗೇದರ್ 899ರೂ ಪ್ಲ್ಯಾನ್‌

ನಾಲ್ಕು ಸದಸ್ಯರನ್ನು ಹೊಂದಲು ಅವಕಾಶವಿರುವ ಈ ಪ್ಲ್ಯಾನ್‌ನ ತಿಂಗಳ ಬೆಲೆಯು 899ರೂ (+ಟ್ಯಾಕ್ಸ್) ಆಗಿದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಇರಲಿದೆ. ಹಾಗೆಯೇ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 70GB ಮತ್ತು ಉಳಿದ ಮೂರು ಸದಸ್ಯರಿಗೂ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

RED ಟುಗೇದರ್ 999ರೂ ಪ್ಲ್ಯಾನ್‌

RED ಟುಗೇದರ್ 999ರೂ ಪ್ಲ್ಯಾನ್‌

ಈ ಪ್ಲ್ಯಾನ್‌ನಲ್ಲಿ ಐದು ಸದಸ್ಯರನ್ನು ಹೊಂದಲು ಅವಕಾಶವಿದ್ದು, ತಿಂಗಳ ಬೆಲೆಯು 999ರೂ (+ಟ್ಯಾಕ್ಸ್) ಆಗಿದೆ. ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಸಹ ಇರಲಿದೆ. ಹಾಗೆಯೇ ಈ ಪ್ಲ್ಯಾನಿನ ಪ್ರಾಥಮಿಕ ಸದಸ್ಯನಿಗೆ 80GB ಮತ್ತು ಉಳಿದ ನಾಲ್ಕು ಸದಸ್ಯಗೆ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ. (ಪ್ರತಿ ಸದಸ್ಯರಿಗೆ ತಿಂಗಳಿಗೆ ತಗಲುವ ವೆಚ್ಚ ತಲಾ 200ರೂ)

ಇತರೆ ಪ್ರಯೋಜನಗಳು

ಇತರೆ ಪ್ರಯೋಜನಗಳು

ವೊಡಾಫೋನ್‌ ಈ ರೆಡ್‌ ಟುಗೇದರ್‌ ಪ್ಲ್ಯಾನ್‌ನೊಂದಿಗೆ ಗ್ರಾಹಕರಿಗೆ ಇತರೆ ಯಾವುದೇ ಶುಲ್ಕವಿಲ್ಲದೇ ಒಂದು ವರ್ಷದ ಅಮೆಜಾನ್ ಪ್ರೈಮ್‌ ಸದಸ್ಯತ್ವ ಲಭ್ಯವಾಗಲಿದೆ. ಇದರಲ್ಲಿ ಗ್ರಾಹಕರು ಇತ್ತೀಚಿನ ಸಿನಿಮಾ, ಟಿವಿ ಶೋ ವೀಕ್ಷಿಸಬಹುದಾಗಿದೆ. ವೋಡಾಫೋನ್‌ ಪ್ಲೇ ಮತ್ತು ಜೀ5 ಕಂಟೆಂಟ್‌ ಆಕ್ಸಸ್‌ ಮಾಡಲು ಅವಕಾಶ ಸೀಗಲಿದೆ. ಮೊಬೈಲ್‌ ಫೋನ್‌ ಪ್ರೊಟೆಕ್ಷನ್‌ ಪ್ಲ್ಯಾನ್‌ ಆಯ್ಕೆಯು ಗ್ರಾಹಕರಿಗೆ ದೊರೆಯಲಿವೆ.

Best Mobiles in India

English summary
The Vodafone RED Together postpaid plans lets you add up to 5 connections in a single billing plan. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+