ವೊಡಾಫೋನ್ 98ರೂ. ಪ್ಲ್ಯಾನಿನಲ್ಲಿ ಭರ್ಜರಿ ಡೇಟಾ ಸೌಲಭ್ಯ!
ಕೊರೊನಾ ಎಫೆಕ್ಟ್‌ನಿಂದಾಗಿ ದೇಶದ ಟೆಲಿಕಾಂಗಳು ತಮ್ಮ ಚಂದಾದಾರರಿಗೆ ಹಲವು ಅನುಕೂಲಕರ ಯೋಜನೆಗಳನ್ನು ನೀಡಿವೆ. ವರ್ಕ್ ಫ್ರಮ್ ಹೋಮ್ ಮಾಡುವ ಗ್ರಾಹಕರಿಗಾಗಿ ಅಧಿಕೆ ಡೇಟಾ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ವೊಡಾಫೋನ್ ತನ್ನ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಡಬಲ್ ಡೇಟಾ ಪ್ರಯೋಜನವನ್ನು ಘೋಷಿಸಿವೆ. ಹಾಗೆಯೇ ವೊಡಾಫೋನ್ ತನ್ನ ಪ್ಲ್ಯಾನಿನಲ್ಲಿ ಇದೀಗ ಮತ್ತೊಂದು ಬದಲಾವಣೆ ಮಾಡಿದೆ.

ಹೌದು, ವೊಡಾಫೋನ್ ಟೆಲಿಕಾಂ ತನ್ನ 98ರೂ. ಆಡ್-ಆನ್ ಡೇಟಾ ಪ್ಯಾಕ್ ಅನ್ನು ಇತ್ತೀಚೆಗೆ ಪರಿಷ್ಕರಿಸಿದೆ. ವೊಡಾಫೋನಿನ ಈ ಆಡ್ ಆನ್ ಡೇಟಾ ಯೋಜನೆಯಲ್ಲಿ ಮೊದಲು ಒಟ್ಟು 6GB ಡೇಟಾ ಸೌಲಭ್ಯ ಲಭ್ಯವಾಗುತ್ತಿತ್ತು. ಆದ್ರೆ ಈಗ ಒಟ್ಟು 12GB ಡೇಟಾ ಪ್ರಯೋಜನೆ ಗ್ರಾಹಕರಿಗೆ ಸಿಗಲಿದೆ. ಅಂದಹಾಗೆ ಈ ಆಡ್ ಆನ್ ಪ್ಯಾಕ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಮುಂದೆ ಓದಿರಿ

ವೊಡಾಫೋನ್ 98ರೂ.
ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್ ಆನ್ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್ ಈಗ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್, ಉಚಿತ ವಾಯಿಸ್ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.

ಹೊಸ ಡೇಟಾ ಪ್ಯಾಕ್ ಪ್ರಯೋಜನ ಲಭ್ಯತೆ
ವೊಡಾಫೋನ್ ತನ್ನ ಪರಿಷ್ಕೃತ ಡೇಟಾ ಆಡ್ ಆನ್ ಪ್ಯಾಕ್ ಅನ್ನು ಕೆಲವು ಆಯ್ದ ಟೆಲಿಕಾಂ ಸರ್ಕಲ್ ಪ್ರದೇಶಗಳಲ್ಲಿ ಲಭ್ಯ ಮಾಡಿದೆ. ಆಂಧ್ರಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಮುಂಬೈ ಮತ್ತು ಯುಪಿ ಪೂರ್ವ ಪ್ರದೇಶಗಳಲ್ಲಿ ಈ ಕೊಡುಗೆ ಲಭ್ಯ. ಆದರೆ ಅಸ್ಸಾಂ, ಬಿಹಾರ, ಚೆನ್ನೈ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕೋಲ್ಕತಾ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ, ಈಶಾನ್ಯ, ಒರಿಸ್ಸಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಯುಪಿ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದಲ್ಲಿ ಅನ್ವಯಿಸುವುದಿಲ್ಲ. .

ಇತರೆ ಡೇಟಾ ಆಡ್ ಆನ್ ಪ್ಲ್ಯಾನ್
ವೊಡಾಫೋನ್ ಒಟ್ಟು ಮೂರು ಡೇಟಾ ಆಡ್ ಆನ್ ಯೋಜನೆಗಳನ್ನು ಹೊಂದಿದ್ದು, ಅವುಗಳು 16ರೂ, 48ರೂ ಮತ್ತು 98ರೂ ಬೆಲೆಯಲ್ಲಿವೆ. ಆರಂಭಿಕ 16ರೂ, ಡೇಟಾ ಆಡ್ ಆನ್ ಪ್ಯಾಕ್ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ.

ವೊಡಾಫೋನ್ ಎಸ್‌ಎಮ್‌ಎಸ್ ಪ್ಯಾಕ್
ಹೆಚ್ಚುವರಿ ಡೇಟಾ ಅನುಕೂಲಕ್ಕಾಗಿ ಡೇಟಾ ಪ್ಯಾಕ್‌ನಂತೆ ಮೆಸೆಜ್ ಸೌಲಭ್ಯಕ್ಕಾಗಿ 36ರೂ, 12ರೂ ಮತ್ತು 26ರೂ ಬೆಲೆಯ ಮೂರು ಎಸ್‌ಎಮ್‌ಎಸ್ ಆಡ್ ಆನ್ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. 36ರೂ. ಪ್ಯಾಕ್‌ನಲ್ಲಿ ಒಟ್ಟು 350 ಎಸ್‌ಎಮ್‌ಎಸ್ ಲಭ್ಯವಾಗುತ್ತವೆ(28 ದಿನಗಳ ವ್ಯಾಲಿಡಿಟಿ). 12ರೂ. ಪ್ಯಾಕ್‌ನಲ್ಲಿ 120 ಎಸ್‌ಎಮ್‌ಎಸ್ ದೊರೆಯುತ್ತವೆ(10 ದಿನಗಳ ವ್ಯಾಲಿಡಿಟಿ). ಹಾಗೂ 26ರೂ. ಪ್ಯಾಕ್‌ನಲ್ಲಿ 250ಎಸ್‌ಎಮ್‌ಎಸ್‌ಗಳು ಲಭ್ಯವಿದ್ದು, 28 ದಿನಗಳ ವ್ಯಾಲಿಡಿಟಿ ಇರುತ್ತದೆ.


Click it and Unblock the Notifications








