Home
ಸುದ್ದಿಜಾಲ

ವೊಡಾಫೋನ್‌ನಿಂದ ಎರಡು ಹೊಸ ಪ್ಲ್ಯಾನ್ ಲಾಂಚ್; ಅನಿಯಮಿತ ಉಚಿತ ಕರೆ!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ವೊಡಾಪೋನ್ ಹಲವು ಆಕರ್ಷಕ ಡೇಟಾ ಯೋಜನೆಗಳ ಮೂಲಕ ತನ್ನದೇ ಗ್ರಾಹಕರ ಬಳಗ ಕಾಯ್ದುಕೊಂಡಿದೆ. ಈಗಾಗಲೇ ಕೆಲವು ಪ್ಲ್ಯಾನ್‌ಗಳಿಗೆ ಡಬಲ್‌ ಡೇಟಾ ಆಫರ್ ನೀಡಿರುವ ಜೊತೆಗೆ ಅಧಿಕ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿಯ ಪ್ಲ್ಯಾನ್‌ಗಳ ಪರಿಚಯಿಸಿರುವ ವೊಡಾಫೋನ್ ಈಗ ಮತ್ತೆ ಎರಡು ಅಗ್ಗದ ಪ್ರೀಪೇಯ್ಡ್‌ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ವೊಡಾಫೋನ್‌

ಹೌದು, ಜನಪ್ರಿಯ ವೊಡಾಫೋನ್‌ ಟೆಲಿಕಾಂ ಕಂಪನಿಯು 109ರೂ. ಮತ್ತು 169ರೂ. ಬೆಲೆಯ ಹೊಸ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೋಷಿಸಿದೆ. ಈ ಯೋಜನೆಗಳು ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಜೊತೆಗೆ ಎಸ್‌ಎಮ್‌ಎಸ್‌ ಹಾಗೂ ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ. ವೊಡಾಫೋನಿನ 109ರೂ. ಮತ್ತು 169ರೂ. ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 109ರೂ. ಪ್ಲ್ಯಾನ್

ವೊಡಾಫೋನ್ 109ರೂ. ಪ್ಲ್ಯಾನ್

ವೊಡಾಫೋನ್ 109ರೂ. ರೀಚಾರ್ಜ್‌ ಯೋಜನೆಯು ಒಟ್ಟು 20 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ 1GB ಡೇಟಾ ಪ್ರಯೋಜನ ಹಾಗೂ 300 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ರಾಷ್ಟ್ರೀಯ ಹಾಗೂ ಸ್ಥಳೀಯ ವಾಯಿಸ್‌ ಕರೆಗಳ ಪ್ರಯೋಜನ ದೊರೆಯಲಿದೆ.

ವೊಡಾಫೋನ್ 169ರೂ . ಪ್ಲ್ಯಾನ್

ವೊಡಾಫೋನ್ 169ರೂ . ಪ್ಲ್ಯಾನ್

ವೊಡಾಫೋನ್ 169ರೂ. ರೀಚಾರ್ಜ್‌ ಪ್ಲ್ಯಾನ್ ಸಹ ಒಟ್ಟು 20 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 300 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ರಾಷ್ಟ್ರೀಯ ಹಾಗೂ ಸ್ಥಳೀಯ ವಾಯಿಸ್‌ ಕರೆಗಳ ಪ್ರಯೋಜನ ದೊರೆಯಲಿದೆ.

ವೊಡಾಫೋನಿನ 499ರೂ. ಪ್ಲ್ಯಾನ್‌

ವೊಡಾಫೋನಿನ 499ರೂ. ಪ್ಲ್ಯಾನ್‌

ವೊಡಾಫೋನಿನ 499ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯು ಡಬಲ್‌ ಡೇಟಾ ಪ್ರಯೋಜನ ಪಡೆದಿದ್ದು, ಪ್ರತಿದಿನ 4GB ಡೇಟಾ ಲಭ್ಯವಾಗಲಿದೆ.

ವೊಡಾಫೋನ್ 699ರೂ. ಪ್ಲ್ಯಾನ್

ವೊಡಾಫೋನ್ 699ರೂ. ಪ್ಲ್ಯಾನ್

ವೊಡಾಫೋನಿನ 699ರೂ. ಪ್ಲ್ಯಾನ್ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯು ಸಹ ಡಬಲ್‌ ಡೇಟಾ ಪ್ರಯೋಜನ ಪಡೆದಿದ್ದು, ಪ್ರತಿದಿನ 4GB ಡೇಟಾ ಲಭ್ಯವಾಗಲಿದೆ.

Best Mobiles in India

English summary
Vodafone Rs 169 and Rs 109 Prepaid Plans Both the newly launched prepaid plans come with 20 days validity and unlimited voice calling benefit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+