ವೊಡಾಫೋನ್ ಆಫರ್‌ : 255ರೂ ಪ್ಲ್ಯಾನ್‌ನಲ್ಲಿ 70GB 4G ಡೇಟಾ ಉಚಿತ!

|

ದೇಶದ ಟೆಲಿಕಾಂ ವಲಯದಲ್ಲಿ ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ತೀವ್ರವಾಗಿದ್ದು, ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಬಗೆ ಬಗೆಯ ಆಫರ್‌ ನೀಡುತ್ತಿವೆ. ಜಿಯೋ ಸಂಸ್ಥೆಯನ್ನು ಹಿಂದಿಕ್ಕಲೂ ಏರ್‌ಟೆಲ್‌ ಮತ್ತು ವೊಡಾಫೋನ್ ಸೆಣಸುತ್ತಿದ್ದು, ಅವುಗಳಲ್ಲಿಗ ವೊಡಾಫೋನ್ ತನ್ನ ಜನಪ್ರಿಯ ಪ್ಲ್ಯಾನ್‌ವೊಂದರಲ್ಲಿ ಬದಲಾವಣೆ ತಂದಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಖುಷಿ ಸಮಾಚಾರ ಹೊರಹಾಕಿದೆ.

ವೊಡಾಫೋನ್

ಹೌದು, ವೊಡಾಫೋನ್ ಸಂಸ್ಥೆಯು ತನ್ನ ಜನಪ್ರಿಯ 255ರೂ ಪ್ರಿಪೇಡ್‌ ಪ್ಲ್ಯಾನ್‌ನಲ್ಲಿ ಪರಿಷ್ಕರಣೆ ಮಾಡಿದ್ದು, ಉಚಿತ ಡೇಟಾ ಸೌಲಭ್ಯವನ್ನು ಹೆಚ್ಚಿಸಿದೆ. ಈ ಪ್ರಿಪೇಡ್‌ ಪ್ಲ್ಯಾನ್‌ನಲ್ಲಿ ಈಗ ಹೆಚ್ಚುವರಿಯಾಗಿ 14GB ಡೇಟಾ ಲಭ್ಯವಾಗಲಿದ್ದು, ಗ್ರಾಹಕರಿಗೆ ತಿಂಗಳಿಗೆ ಒಟ್ಟು 70GB ಡೇಟಾ ದೊರೆಯಲಿದೆ. ಅಂದರೇ 28 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ ಇನ್ನು 2.5GB ಡೇಟಾ ಗ್ರಾಹಕರಿಗೆ ದೊರೆಯಲಿದೆ.

ಪ್ರಿಪೇಡ್‌ ಪ್ಲ್ಯಾನ್‌

ವೊಡಾಫೋನ್‌ 255ರೂ ಪ್ರಿಪೇಡ್‌ ಪ್ಲ್ಯಾನ್‌ 28ದಿನಗಳ ವಾಯಿದೆಯನ್ನು ಹೊಂದಿದ್ದು, ಈ ಮೊದಲು ಪ್ರತಿದಿನ 2GB ಡೇಟಾ ದೊರೆಯುತ್ತಿತ್ತು. ಇನ್ಮುಂದೆ ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಗ್ರಾಹಕರಿಗೆ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರೀಯ ಕರೆಗಳು ಸಹ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಸೇರಿದಂತೆ ವೊಡಾಫೋನ್ ಪ್ಲೇ ಆಪ್‌ ಆಕ್ಸಸ್‌ ಸಹ ಗ್ರಾಹಕರಿಗೆ ಸಿಗಲಿದೆ.

ಪ್ರತಿದಿನ 2GB

ಹಾಗೆಯೇ ವೊಡಾಫೋನ್ ಇತ್ತೀಚಿಗೆ 229ರೂ.ಗಳ ಪ್ರಿಪೇಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ನೀಡುತ್ತಿದೆ. ಅದರೊಂದಿಗೆ ಅನಿಯಮಿತ ಉಚಿತ ಕರೆಗಳು ಮತ್ತು ಉಚಿತ ರೋಮಿಂಗ್ ಪ್ರಯೋಜನ ಸಹ ನೀಡುತ್ತಿದೆ. ಉಳಿದಂತೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ವೊಡಾಫೋನ್ ಪ್ಲೇ ಆಕ್ಸಸ್ ಇರಲಿವೆ. ಒಟ್ಟು ವ್ಯಾಲಿಡಿಟಿ ಅವಧಿಯು 28 ದಿನಗಳಾಗಿವೆ.

ಏರ್‌ಟೆಲ್‌

ವೊಡಾಫೋನಿನ ಈ ಹೊಸ ಪ್ಲ್ಯಾನ್‌ ಏರ್‌ಟೆಲ್‌ನ 249ರೂ. ಪ್ಲ್ಯಾನಿಗೆ ನೇರ ಸ್ಪರ್ಧೆಯೊಡ್ಡುತ್ತದೆ. ಏರ್‌ಟೆಲ್‌ 249ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯ, ಅದೇ ವೊಡಾಫೋನ್‌ 255ರೂ ಪ್ಲ್ಯಾನ್‌ನಲ್ಲಿ 2.5GB ಡೇಟಾ ಪ್ರಯೋಜನವಿದೆ. ಜೊತೆಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಲೈವ್ ಟಿವಿ, ವಿಡಿಯೊ ಸ್ಟ್ರೀಮಿಂಗ್ ಸೌಲಭ್ಯದ ಆಯ್ಕೆಗಳು ದೊರೆಯಲಿವೆ. ಈ ಪ್ಲ್ಯಾನ್‌ ಓಪೆನ್ ಪ್ಲ್ಯಾನ್‌ ಆಗಿದ್ದು, ಪ್ರಿಪೇಡ್‌ ಗ್ರಾಹಕರಿಗೆ ಲಭ್ಯ.

Best Mobiles in India

English summary
Vodafone Rs 255 prepaid plan of Vodafone now comes with 2.5GB daily data for a period of 28 days. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X