ಹೆಚ್ಚಿನ ಡೇಟಾ: ಬಳಕೆದಾರರಿಗೆ ಆಫರ್ ಕೊಟ್ಟ ವೊಡಾಫೋನ್...!
ವೊಡಾಫೋನ್ ಭಾರತೀಯ ಟೆಲಿಕಾಂ ಮಾರುಕಟ್ಟೆ ಸಾಕಷ್ಟು ಬಳಕೆದಾರರನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೆಚ್ಚು ಲಾಭವನ್ನು ಮಾಡಿಕೊಡುವ ಸಲುವಾಗಿ ಪ್ರತಿ ನಿತ್ಯ 3GB ಡೇಟಾವನ್ನು ನೀಡುವಂತಹ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವು ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಇತರೆ ಟೆಲಿಕಾಂ ಕಂಪನಿಗಳ ವಿರುದ್ಧ ಸ್ಪರ್ಧೆಯನ್ನು ನಡೆಸಲು ಈ ಆಫರ್ ಅನ್ನು ಲಾಂಚ್ ಮಾಡಲಾಗಿದೆ ಎನ್ನಲಾಗಿದೆ.

ರೂ.348 ಪ್ಲಾನ್ ವೊಂದನ್ನು ವೊಡಾಫೋನ್ ಲಾಂಚ್ ಆಗಿದ್ದು, ಇದು ದೇಶದ ಮೂಲೆ ಮೂಲೆಯಲ್ಲಿಯೂ ಈ ಆಫರ್ ತಲುಪಿಸಲು ವೊಡಾಫೋನ್ ಮುಂದಾಗಿದೆ. ಕೆಲವು ಸರ್ಕಲ್ ಗಳಲ್ಲಿ 2.5GB ಮತ್ತು ಇನ್ನು ಕೆಲವು ಸರ್ಕಲ್ ಗಳಲ್ಲಿ 3GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಇದು ಭಾರ್ತಿ ಏರ್ ಟೆಲ್ ಮತ್ತು ಜಿಯೋಗೆ ವಿರುದ್ಧವಾಗಿ ಈ ಆಫರ್ ಅನ್ನು ಲಾಂಚ್ ಮಾಡಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್ ಟೆಲ್ ನಿತ್ಯ 3GB ಡೇಟಾವನ್ನು ನೀಡುವಂತಹ ಆಫರ್ ಅನ್ನು ಲಾಂಚ್ ಮಾಡಿದ್ದು, ಇವುಗಳಿಗೆ ಟಕ್ಕರ್ ನೀಡುವ ಸಲುವಾಗಿ ವೊಡಾಪೋನ್ ಈ ಹೊಸ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಈ ಮೂಲಕ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ವೊಡಾಪೋನ್ ಮುಂದಾಗಿದೆ.
ಓದಿರಿ: ಮೊಟ್ಟ ಮೊದಲ ಪ್ರಯತ್ನ: ಜಿಯೋ ಬಳಕೆದಾರರಿಗೆ ಅಂಬಾನಿ ಕೊಟ್ಟ ಗಿಫ್ಟ್...!
ವೊಡಾಫೋನ್ ಲಾಂಚ್ ಮಾಡಿರುವ ರೂ.348 ಪ್ಲಾನ್ ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಡಿಟಿಯೂ ದೊರೆಯಲಿದ್ದು, ಇದರಲ್ಲಿ ನಿತ್ಯ 3GB ಡೇಟಾ ಬಳಕೆಗೆ ದೊರೆಯಲಿದೆ. ಇದರೊಂದಿಗೆ ನಿತ್ಯ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ರೋಮಿಂಗ್ ಸಹ ಉಚಿತವಾಗಿರಲಿದೆ.
ದೇಶದಲ್ಲಿ ಐಪಿಎಲ್ ಹವಾ ಜೋರಾಗಿದ್ದು, ಮೊಬೈಲ್ ನಲ್ಲಿ ಕ್ರಿಕೆಟ್ ನೋಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ನಿತ್ಯ 3GB ಡೇಟಾವನ್ನು ನೀಡುತ್ತಿವೆ, ಇದೇ ಮಾದರಿಯಲ್ಲಿ ವೊಡಾಫೋನ್ ಸಹ ಸೇವೆಯನ್ನು ನೀಡಲು ಶುರು ಮಾಡಿದೆ. ಈ ಮೂಲಕ ಹೆಚ್ಚಿನ ಬಳಕೆದಾರನ್ನು ಸೆಳೆಯಲಿದೆ ಎನ್ನಲಾಗಿದೆ.


Click it and Unblock the Notifications








