ವೊಡಾಫೋನ್ ಆಫರ್ : ಅನಿಯಮಿತ ಕರೆ, ಬಿಗ್ ವ್ಯಾಲಿಡಿಟಿ ಪ್ಲ್ಯಾನ್‌ಗಳು!
ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ 'ವೊಡಾಫೋನ್' ಸಂಸ್ಥೆಯು ಹಲವು ಆಕರ್ಷಕ ಪ್ರೀಪೇಡ್ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಮೆಚ್ಚಿಸಿದೆ. ಅದೇ ದಾರಿಯಲ್ಲಿ ಮುಂದುವರೆದಿರುವ ವೊಡಾಫೋನ್ ಇತ್ತೀಚಿಗೆ ಮತ್ತೆ ಕೆಲವು ಭರ್ಜರಿ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಘೋಷಿಸಿದೆ. ಈ ಪ್ರೀಪೇಡ್ ಪ್ಲ್ಯಾನ್‌ಗಳು ಅಧಿಕ ಡೈಲಿ ಡೇಟಾ ಮತ್ತು ಹೆಚ್ಚಿನ ವ್ಯಾಲಿಡಿಟಿ ಅವಧಿಯನ್ನು ಹೊಂದಿವೆ. ಈ ಮೂಲಕ ಇತರೆ ಟೆಲಿಕಾಂ ಸಂಸ್ಥೆಗಳಿಗೆ ವೊಡಾಫೋನ್ ಟಾಂಗ್ ನೀಡಿದೆ.

ಹೌದು, ವೊಡಾಫೋನ್ ಸಂಸ್ಥೆಯು 205ರೂ, 225ರೂ ಮತ್ತು 299ರೂ. ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ಗಳು ಉಚಿತ ಡೇಟಾ, ಉಚಿತ ಕರೆಗಳು, ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆದಿದ್ದು, ಜೊತೆಗೆ ಅಧಿಕ ವ್ಯಾಲಿಡಿಟಿ ಅವಧಿಯನ್ನು ಪಡೆದಿವೆ. ಆದರೆ ವೊಡಾಫೋನ್‌ನ 225ರೂ. ಪ್ರೀಪೇಡ್ ಪ್ಲ್ಯಾನ್ ಗ್ರಾಹಕರನ್ನು ಹೆಚ್ಚು ಸೆಳೆಯಲಿದೆ. ಹಾಗಾದರೇ ವೊಡಾಫೋನ್ ಸಂಸ್ಥೆಯ ಹೊಸ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂದು ತಿಳಿಯಲು ಮುಂದೆ ಓದಿರಿ.

225ರೂ. ಪ್ರೀಪೇಡ್ ಪ್ಲ್ಯಾನ್
ವೊಡಾಫೋನ್ 225ರೂ. ಪ್ರೀಪೇಡ್ ಪ್ಲ್ಯಾನ್‌ನಲ್ಲಿ 4GB (2G/3G/4G) ಡೇಟಾ ಲಭ್ಯವಾಗುತ್ತದೆ. ಅನಿಯಮಿತ ಉಚಿತ ಲೋಕಲ್, ನ್ಯಾಶನಲ್ ಮತ್ತು ರೋಮಿಂಗ್ ಕರೆಗಳ ಸೌಲಭ್ಯ ಒಳಗೊಂಡಿದ್ದು, ಇದರೊಂದಿಗೆ ಒಟ್ಟು 600 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನವು ಸಿಗಲಿದೆ. ಇನ್ನು ಈ ಪ್ಲ್ಯಾನ್ ಒಟ್ಟು 48 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

205ರೂ. ಪ್ರೀಪೇಡ್ ಪ್ಲ್ಯಾನ್
ವೊಡಾಫೋನ್ 205ರೂ. ಪ್ರೀಪೇಡ್ ಪ್ಲ್ಯಾನ್ ಸಹ ಅನಿಯಮಿತ ಉಚಿತ ಲೋಕಲ್, ನ್ಯಾಶನಲ್ ಮತ್ತು ರೋಮಿಂಗ್ ಕರೆಗಳ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಒಟ್ಟು 600 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನವು ಸಿಗಲಿದ್ದು, ಆದ್ರೆ 2GB (2G/3G/4G) ಡೇಟಾ ಲಭ್ಯವಾಗುತ್ತದೆ. ಇನ್ನು ಈ ಪ್ಲ್ಯಾನ್ ಒಟ್ಟು 35 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

299ರೂ. ಪ್ರೀಪೇಡ್ ಪ್ಲ್ಯಾನ್
ವೊಡಾಫೋನ್ 299ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಉಳಿದಂತೆ ಈ ಪ್ಲ್ಯಾನ್ ಸಹ ಸಹ ಅನಿಯಮಿತ ಉಚಿತ ಲೋಕಲ್, ನ್ಯಾಶನಲ್ ಮತ್ತು ರೋಮಿಂಗ್ ಕರೆಗಳ ಸೌಲಭ್ಯ ಒಳಗೊಂಡಿದ್ದು, ಇದರೊಂದಿಗೆ ಒಟ್ಟು 1000 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ಪಡೆದಿದೆ. 3GB (2G/3G/4G) ಡೇಟಾ ಲಭ್ಯವಾಗುತ್ತದೆ.

ವಾರ್ಷಿಕ ಪ್ಲ್ಯಾನ್
ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗಾಗಿ ವೊಡಾಫೋನ್ ಸಂಸ್ಥೆ 1699ರೂ.ಪ್ರೀಪೇಡ್ ಪ್ಲ್ಯಾನ್ ಪರಿಚಯಿಸಿದ್ದು, ಈ ಪ್ಯಾನ್ ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಕರೆ ಪ್ರಯೋಜನ ಒದಗಿಸುವ ಜೊತೆಗೆ ಪ್ರತಿದಿನ 1.5GB (2G/3G/4G) ಉಚಿತ ಡೇಟಾ ಲಭ್ಯವಾಗಲಿದೆ.


Click it and Unblock the Notifications








