Just In
Don't Miss
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Movies
Katheyondu Shuruvagide: ಮಾತಂಗಿ ಕೆನ್ನೆಗೆ ಬಿತ್ತು ಏಟು.. ಯುವರಾಜನ ಅವಮಾನ ಸಹಿಸಲ್ಲ ಕೃತಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೊಡಾಫೋನ್‌ನಿಂದ ಹೊಸ ರೀಚಾರ್ಜ್ ಪ್ಲ್ಯಾನ್; ಒಂದು ವರ್ಷ ಅನಿಯಮಿತ ಉಚಿತ ಕರೆ!
ಪ್ರಸ್ತುತ ನೆಟ್‌ವರ್ಕ್ ಕಂಪನಿಗಳ ನಡುವೆ ಪೈಪೋಟಿಯಿದ್ದು, ಅತ್ಯುತ್ತಮ ಆಫರ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ಅವುಗಳ ನಡುವೆ ಇದೀಗ ವೊಡಾಫೋನ್ ಕಂಪನಿಯು ಭರ್ಜರಿ ದೀರ್ಘಾವಧಿಯ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಒಂದು ವರ್ಷಪೂರ್ತಿ ಅನ್‌ಲಿಮಿಟೆಡ್ ಕರೆ ಮತ್ತು 12GB ಡೇಟಾ ಬಳಸಬಹುದಾಗಿದೆ.

ಹೌದು, ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗೆ 999ರೂ.ಗಳ ರೀಚಾರ್ಜ್ ಆಯ್ಕೆಯನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಈ ಪ್ಲ್ಯಾನಿನಲ್ಲಿ ಗ್ರಾಹಕರು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಬಹುದಾಗಿದೆ ಹಾಗೂ ಉಚಿತ ಕರೆಗಳು ಮತ್ತು ರೋಮಿಂಗ್ ಸಹ ಇರಲಿದೆ. ಹಾಗಾದರೇ ವೊಡಾಫೋನ್ 999ರೂ.ಗಳ ರೀಚಾರ್ಜ್ ಪ್ಲ್ಯಾನಿನ ಇತರೆ ಅಂಶಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಗ್ ವ್ಯಾಲಿಡಿಟಿ
ವೊಡಾಪೋನ್ ಪ್ರಿಪೇಡ್ 999ರೂ.ಗಳ ರೀಚಾರ್ಜ್ ಆಯ್ಕೆಯಲ್ಲಿ 365 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಗ್ರಾಹಕರು ಪೂರ್ಣ ಒಂದು ವರ್ಷ ಉಚಿತ ಲೋಕಲ್ ಕರೆಗಳು, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಾಗಿ ಡೇಟಾ ಬಳಸದ ಕಂಪನಿ ಪ್ರಿಪೇಡ್ ಬಳಕೆದಾರರಿಗೆ ಈ ರೀಚಾರ್ಜ್ ಉತ್ತಮ ಎನಿಸಲಿದೆ.

ಅನ್‌ಲಿಮಿಟೆಡ್ ಕರೆಗಳು
ವೊಡಾಫೋನಿನ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಅನಿಯಮಿತ ಉಚಿತ ಲೋಕಲ್, ಎಸ್‌ಟಿಡಿ ಮತ್ತು ಉಚಿತ ರೋಮಿಂಗ್ ಕರೆಗಳನ್ನು ಮಾಡಬಹುದಾಗಿದ್ದು, ಒಂದು ವರ್ಷದ ವ್ಯಾಲಿಡಿಟಿ ಇರಲಿದೆ. ವೊಡಾಫೋನ್ ಪ್ರಿಪೇಡ್ ಬಳಕೆದಾರರು ಈ ಪ್ರಯೋಜನ ಪಡೆಯಬಹುದು.

ಉಚಿತ ಎಸ್‌ಎಮ್‌ಎಸ್
ಒಂದು ವರ್ಷದ ವ್ಯಾಲಿಡಿಟಿಯ ವೊಡಾಫೋನಿನ 999ರೂ.ಗಳ ಪ್ಲ್ಯಾನಿನಲ್ಲಿ ಬಳಕೆದಾರರು ಪ್ರತಿದಿನ 100 ಉಚಿತ ರಾಷ್ಟ್ರೀಯ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಬಹುದಾಗಿದೆ. ಪ್ರಮುಖ ಎಲ್ಲ ನೆಟವರ್ಕ್ ಕಂಪನಿಗಳು ಇದೀಗ ಪ್ರತಿದಿನ 100 ಎಸ್‌ಎಮ್‌ಎಸ್ ನೀಡುತ್ತಿವೆ. ಅದರಂತೆಯೆ ವೊಡಾಫೋನ್ ಸಹ ಉಚಿತ ಎಸ್‌ಎಮ್‌ಎಸ್ ಸೇವೆ ಒದಗಿಸಲಿದೆ.

12GB ಡೇಟಾ
ವಾರ್ಷಿಕ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುವ ವೊಡಾಫೋನ್ ಈ ಪ್ಲ್ಯಾನ್‌ನಲ್ಲಿ ಕಂಪನಿಯು ವರ್ಷಕ್ಕೆ 12GB ಡೇಟಾವನ್ನು ಮಾತ್ರ ನೀಡಿರುವುದು ಈ ಪ್ಲ್ಯಾನಿನ ಮೈನಸ್ ಪಾಯಿಂಟ್ ಎನ್ನಬಹುದಾಗಿದೆ. ಇದೇ ತರಹದ ಒಂದು ಪ್ಲ್ಯಾನ್ ಅನ್ನು ಏರಟೆಲ್ ನೆಟವರ್ಕ್ ಸಹ ತನ್ನ ಗ್ರಾಹಕರಿಗೆ ಪರಿಚಯಿಸಿದೆ.

ಪಂಜಾಬ್‌ನಲ್ಲಿ ಮಾತ್ರ
ವೊಡಾಫೋನ್ ಪರಿಚಯಿಸಿರುವ 999ರೂ.ಗಳ ಪ್ಲ್ಯಾನ್ ಸದ್ಯ ಪಂಜಾಬ್ ರಾಜ್ಯದಲ್ಲಿ ಮಾತ್ರ ಎನ್ನಲಾಗಿದ್ದು, ಕಂಪನಿಯು ಮುಂದಿನ ದಿನಗಳಿಗೆ ಉಳಿದ ರಾಜ್ಯಗಳಿಗೆ ಈ ಯೋಜನೆಯನ್ನು ವಿಸ್ತರಿಸಬಹುದು ಎನ್ನಲಾಗುತ್ತಿದೆ. ಈ ಹೊಸ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್ ಬಳಕೆದಾರರನ್ನು ಉಳಿಸಿಕೊಳ್ಳವ ಲಕ್ಷಣಗಳನ್ನು ಸೂಚಿಸುತ್ತಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470