ವೊಡಾಫೋನ್ ನಿಂದ 3G/4G ಆಫರ್: ಡೇಟಾ, ವಾಯ್ಸ್ ಮತ್ತು ಮೇಸೆಜ್..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವೊಡಾಫೋನ್ ಮತ್ತೇ ನೂತನ ಆಫರ್ ವೊಂದನ್ನು ಲಾಂಚ್ ಮಾಡಿದೆ. ದರ ಸಮರದಲ್ಲಿ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಹೊಡೆದಾಡುತ್ತಿರುವ ಸಂದರ್ಭದಲ್ಲಿಯೇ ತಾನು ಸಹ ಸ್ಪರ್ಧೆಯಲ್ಲಿ ಇರುವುದನ್ನು ಖಚಿತ ಪಡಿಸುವ ಸಲುವಾಗಿ ನೂತನ ಆಫರ್ ವೊಂದನ್ನು ಲಾಂಚ್ ಮಾಡಿದೆ.

ಎಲ್ಲಾ ಟೆಲಿಕಾಂ ಕಂಪನಿಗಳು ಮತ್ತೆ ಚಿಕ್ಕ ಮೊತ್ತದ ಪ್ಲಾನ್ ಗಳನ್ನು ಘೋಷಣೆ ಮಾಡಲು ಮುಂದಾಗಿವೆ. ಜಿಯೋ ಫೋನ್ ಬಳಕೆದಾರರಿಗೆ ರೂ.49ರ ಮಾಸಿಕ ಪ್ಲಾನ್ ಘೋಷಣೆ ಮಾಡಿದ ನಂತರದಲ್ಲಿ ಏರ್‌ಟೆಲ್ ಸಹ ಇದೇ ಮಾದರಿಯ ಆಫರ್ ನೀಡಿತ್ತು. ಇದಾದ ನಂತರದಲ್ಲಿ ವೊಡಾಫೋನ್ ಸಹ ಮಾಸಿಕ ಪ್ಲಾನ್ ವೊಂದನ್ನು ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ.

ವೊಡಾಫೋನ್ ಪ್ಲಾನ್:
ವೊಡಾಫೋನ್ ರೂ.151ರ ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ವಾಯ್ಡ್, ಮೇಸೆಜ್ ಮತ್ತು ಡೇಟಾ ಬಳಕೆಯ ಅವಕಾಶವನ್ನು ಇದರಲ್ಲಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಈ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಡೇಟಾ:
ವೊಡಾಫೋನ್ ರೂ.151ರ ಪ್ಲಾನ್ ನಲ್ಲಿ ಬಳಕೆದಾರರಿಗೆ 1GB ಡೇಟಾವನ್ನು ಪ್ಲಾನ್ ಅವಧಿಯಲ್ಲಿ ಬಳಕೆ ಮಾಡಿಕೊಳ್ಳಲು ನೀಡಿದ್ದು, ಇದು 4G/3G ಡೇಟಾ ಆಗಬಹುದಾಗಿದೆ. ಇದರಿಂದಾಗಿ ಯಾರು ಬೇಕಾದರು ಈ ಫ್ಲಾನ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ವ್ಯಾಲಿಡಿಟಿ:
ಇದಲ್ಲದೇ ವೊಡಾಫೋನ್ ರೂ.151ರ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಪ್ಲಾನ್‌ನಲ್ಲಿ ದೊರೆಯುವ ಎಲ್ಲಾ ಸೇವೆಗಳನ್ನು ರೀಚಾರ್ಜ್ ಮಾಡಿಸಿಕೊಂಡವರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಇದೆ:
ವೊಡಾಫೋನ್ ರೂ.151ರ ಪ್ಲಾನ್ ನಲ್ಲ ಬಳಕೆದಾರರು ಪ್ರತಿ ನಿತ್ಯ 250 ನಿಮಿಷ, ಪ್ರತಿ ವಾರಕ್ಕೆ 1000 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಇದು ಬಳಕೆದಾರಿಗೆ ಹೆಚ್ಚಿನ ಲಾಭವಾಗಿದೆ.

ಓದಿರಿ: ಜಿಯೋ ದೇಶದಲ್ಲಿ ಫಾಸ್ಟ್, ಇಂಟರ್ನೆಟ್ ವೇಗದಲ್ಲಿ ಭಾರತ ಲಾಸ್ಟ್..!


Click it and Unblock the Notifications








