ಜಿಯೋ-ಏರ್‌ಟೆಲ್ ಮುಳುಗಿಸಲು ಬಂದಿದೆ ವೋಡಾಫೋನ್‌ನ ಎರಡು ಬೊಂಬಾಟ್ ಆಫರ್‌ಗಳು...!
ವೊಡಾಫೋನ್ ಸಹ ದರ ಸಮರದಲ್ಲಿ ಜಿಯೋ ಮತ್ತು ಏರ್‌ಟೆಲ್ ಸಮಕ್ಕೆ ಬಂದಿದೆ ಎಂದರೆ ತಪ್ಪಾಗುವುದಿಲ್ಲ, ಈಗಾಗಲೇ ಸಾಕಷ್ಟು ಬಳಕೆದಾರರನ್ನು ಕಳೆದುಕೊಂಡಿರುವ ವೊಡಾಫೋನ್ ಮತ್ತಷ್ಟು ಬಳಕೆದಾರರನ್ನು ಕಳೆದುಕೊಳ್ಳುವುದಲ್ಲದೇ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಎರಡು ಆಫರ್ ಗಳನ್ನು ಲಾಂಚ್ ಮಾಡಿದೆ.

ಓದಿರಿ: ಶಿಯೋಮಿ ಫೋನ್‌ನಲ್ಲಿ ಫೋಟೋ ತೆಗೆಯಿರಿ 20 ಲಕ್ಷ ಬಹುಮಾನ ಗೆಲ್ಲಿ..!
ಜಿಯೋ ಮತ್ತು ಏರ್‌ಟೆಲ್ ಒಂದೇ ಮಾದರಿಯ ಆಫರ್ ಗಳನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ವೊಡಾಫೋನ್ ಸಹ ಆಫರ್ ಘೋಷಣೆ ಮಾಡಿದೆ. ಈಗಾಗಲೇ ಹೆಚ್ಚಿನ ಗ್ರಾಹಕರು 70 ದಿನಗಳ ಆಫರ್ ಲಾಭ ಪಡೆದುಕೊಳ್ಳುತ್ತಿದ್ದು, ವೊಡಾಫೋನ್ ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದೆ.

ಒಟ್ಟು ಎರಡು ಪ್ಲಾನ್:
ಜಿಯೋ ಮಾದರಿಯನ್ನು ಅನುಸರಿಸಲು ಮುಂದಾಗಿರುವ ವೊಡಾಫೋನ್ ಒಟ್ಟು ಎರಡು ಮಾದರಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ರೂ. 458 ಮತ್ತು ರೂ. 509 ಪ್ಲಾನ್‌ಗಳೇರಡು ನೋಡಲು ಒಂದೇ ಮಾದರಿಯಲ್ಲಿ ಇದ್ದರೂ ಸಹ ಕೊಂಚ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ.

ರೂ. 458 ಪ್ಲಾನ್:
ಈ ಪ್ಲಾನ್ ಗ್ರಾಹಕರಿಗೆ 70 ದಿನಗಳ ವ್ಯಾಲಿಡಿಯನ್ನು ನೀಡಲಿದ್ದು, ಪ್ರತಿ ನಿತ್ಯ 1GB 3G/4G ಡೇಟಾವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಪ್ರತಿ ನಿತ್ಯ 250 ನಿಮಿಷಗಳ ಹಾಗೇ ವಾರಕ್ಕೆ 1000 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ವೊಡಾಫೋನ್ ಆಪ್‌ಗಳ ಬಳಕೆಯನ್ನು ಉಚಿತವಾಗಿ ಮಾಡಬಹುದಾಗಿದೆ.

ರೂ. 509 ಪ್ಲಾನ್:
ಈ ಪ್ಲಾನ್ ಗ್ರಾಹಕರಿಗೆ 84 ದಿನಗಳ ಅವಧಿಗೆ ಪ್ರತಿ ನಿತ್ಯ 1GB 3G/4G ಡೇಟಾವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಪ್ರತಿ ನಿತ್ಯ 250 ನಿಮಿಷಗಳ ಹಾಗೇ ವಾರಕ್ಕೆ 1000 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ವೊಡಾಫೋನ್ ಆಪ್‌ಗಳ ಬಳಕೆಯನ್ನು ಉಚಿತವಾಗಿ ಮಾಡಬಹುದಾಗಿದೆ.

ಜಿಯೋ ಏರ್‌ಟೆಲ್‌ನಲ್ಲಿಯೂ ಇದೇ ಮಾದರಿಯ ಆಫರ್:
ಜಿಯೋ-ಏರ್‌ಟೆಲ್‌ನಲ್ಲಿಯೂ ಇದೇ ಮಾದರಿಯ ಆಫರ್ ಕಾಣಬಹುದಾಗಿದೆ. ಅದಕ್ಕಾಗಿ ತನ್ನ ಗ್ರಾಹಕರು ಆ ಕಡೆ ವಾಲದಿರುವಂತೆ ತಡೆಯಲು ವೊಡಾಫೋನ್ ಈ ಮಾದರಿಯ ಆಫರ್ ನೀಡಿದೆ ಎನ್ನಲಾಗಿದೆ.


Click it and Unblock the Notifications








