ಶಿಯೋಮಿ ಫೋನ್‌ನಲ್ಲಿ ಫೋಟೋ ತೆಗೆಯಿರಿ 20 ಲಕ್ಷ ಬಹುಮಾನ ಗೆಲ್ಲಿ..!

Written By:

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇದೇ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್ ಆಗಿರುವ Mi A1 ಸ್ಮಾರ್ಟ್‌ಫೋನ್ ನಲ್ಲಿ ಫೋಟೋ ತೆಗೆದವರಿಗೆ ಹತ್ತಿರ ಹತ್ತಿರ 20 ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ. ಈ ಮೂಲಕ ತನ್ನ ಸ್ಮಾರ್ಟ್‌ಫೋನ್ ಮಾರಾಟವನ್ನು ಹೆಚ್ಚಿಸಲು ಮುಂದಾಗಿದೆ ಎನ್ನಲಾಗಿದೆ.

ಶಿಯೋಮಿ ಫೋನ್‌ನಲ್ಲಿ ಫೋಟೋ ತೆಗೆಯಿರಿ 20 ಲಕ್ಷ ಬಹುಮಾನ ಗೆಲ್ಲಿ..!

ಓದಿರಿ: ಆಪ್‌ನಲ್ಲೇ ಬಿಯರ್ ಬುಕ್‌ ಮಾಡಿ, ಮನೆ ಬಾಗಿಲಿಗೆ ತರಿಸಿಕೊಳ್ಳಿ..!!

ಆಂಡ್ರಾಯ್ಡ್ ಓನ್ ಬಳಕೆಯನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿರುವ Mi A1 ಸ್ಮಾರ್ಟ್‌ಫೋನ್ ಈಗಾಗಲೇ ಭಾರತ, ರಷ್ಯಾ, ವಿಯೆಟ್ನಾಮ್ ಮತ್ತು ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿದ್ದು, ಇಲ್ಲಿನ ಬಳಕೆದಾರರಿಗೆ $30,000 ಬಹುಮಾನವನ್ನು ನೀಡಲು ಮುಂದಾಗಿದೆ. ಈ ಫೋನಿನಲ್ಲಿ ತೆಗೆದ ಫೋಟೋಗಾಗಿ ಇಷ್ಟು ಮೊತ್ತದ ಬಹುಮಾನವನ್ನು ತ್ವರೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Mi A1 ಸ್ಮಾರ್ಟ್‌ಫೋನ್ ಫೋಟೋ ಬಹುಮಾನ:

Mi A1 ಸ್ಮಾರ್ಟ್‌ಫೋನ್ ಫೋಟೋ ಬಹುಮಾನ:

ಶೂಟ್ ಆನ್ Mi A1 ಎನ್ನುವ ಸ್ಪರ್ಧೆಯನ್ನು ಎರ್ಪಡಿಸಿದ್ದು, ಡಿಸೆಂಬರ್ 20ರವರೆಗೂ Mi A1 ಸ್ಮಾರ್ಟ್‌ಫೋನ್ ಫೋಟೋವನ್ನು ತೆಗೆದು ಕಳುಹಿಸಬಹುದಾಗಿದೆ. ಮೊದನೇ ಬಹುಮಾನ $30000 ನೀಡಲಾಗುವುದು. ಇದೇ ಮಾದರಿಯಲ್ಲಿ ಇಬ್ಬರು ವಿಜೇತರಿಗೆ $10000 ಬಹುಮಾನ ಹಾಗೂ ಮೂರು ವಿಜೇತರಿಗೆ $5000 ಬಹುಮಾನವನ್ನು ನೀಡಲು ಮುಂದಾಗಿದೆ.

10 ಫೋಟೋ ಕಳುಹಿಸಬಹುದು:

10 ಫೋಟೋ ಕಳುಹಿಸಬಹುದು:

ಈ ಸ್ಪರ್ಧೆಯಲ್ಲಿ Mi A1 ಸ್ಮಾರ್ಟ್‌ಫೋನ್ ಬಳಕೆದಾರಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಪ್ರತಿ ಬಳಕೆದಾರರು 10 ಫೋಟೋವನ್ನು ಆಪ್‌ಲೋಡ್ ಮಾಡಬಹುದಾಗಿದೆ.

ಎಡಿಟಿಂಗ್ ಮಾಡುವ ಹಾಗಿಲ್ಲ:

ಎಡಿಟಿಂಗ್ ಮಾಡುವ ಹಾಗಿಲ್ಲ:

ಈ ಫೋಟೋ ಸ್ಪರ್ಧೆಗೆ ಕಳುಹಿಸುವ ಫೋಟೋಗಳನ್ನು ಯಾವುದೇ ರೀತಿಯಲ್ಲಿಯೂ ಎಡಿಟ್ ಮಾಡುವ ಹಾಗಿಲ್ಲ. ಎಡಿಟ್ ಮಾಡಿದ ಫೋಟೋಗಳನ್ನು ಆಪ್‌ಲೋಡ್ ಮಾಡುವ ಅವಕಾಶವಿಲ್ಲ. ಅಲ್ಲದೇ ಇಷ್ಟ ಬಂದ ಫೋಟೋಗಳನ್ನು ಆಪ್‌ಲೋಡ್ ಮಾಡುವ ಅವಕಾಶವನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi announces photo challenge for Mi A1 users, will give over Rs 19 lakh to 1st prize winner. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot