ವೊಡಾಫೋನ್: ಪ್ರತಿದಿನ 3GB ಡೇಟಾ!..ದಂಗಾದ ಏರ್‌ಟೆಲ್ ಮತ್ತು ಜಿಯೋ!

|

ಪ್ರಸ್ತುತ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಇತ್ತೀಚಿಗೆ ಒಂದು GB ಡೇಟಾಗೆ ಕನಿಷ್ಠ 35ರೂ. ಶುಲ್ಕ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಇದೀಗ ವೊಡಾಫೋನ್ ಟೆಲಿಕಾಂ ಅಚ್ಚರಿಯ ಹೆಜ್ಜೆಯೊಂದನ್ನು ಇಟ್ಟಿದ್ದು, ಸಂಸ್ಥೆಯ ಹೊಸ ನಿರ್ಧಾರಕ್ಕೆ ವೊಡಾಫೋನ್ ಚಂದಾದಾರರು ಸೇರಿದಂತೆ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳು ಶಾಕ್ ಆಗಿವೆ.

ವೊಡಾಫೋನ್

ಹೌದು, ಸದ್ಯ ವೊಡಾಫೋನ್ ಸುಮಾರು 50,000ಕೋಟಿ AGR ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಬಾಕಿ ಪಾವತಿಸಬೇಕಿದೆ. ಆದರೂ ತನ್ನ ಗ್ರಾಹಕರಿಗೆ ಈಗ ಅಧಿಕ ಡೇಟಾ ನೀಡುವ ಘೋಷಣೆ ಮಾಡಿದ್ದು, ಎಲ್ಲರೂ ದಂಗಾಗುವಂತೆ ಮಾಡಿದೆ. ಆರ್ಥಿಕ ಹೊಡೆತದಿಂದ ಈ ಕಂಪನಿಗೆ ಬೀಗ ಬೀಳುತ್ತೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ತನ್ನ ಕೆಲವು ಜನಪ್ರಿಯ ಪ್ರೀಪೇಯ್ಡ್ ಪ್ಲ್ಯಾನ್‌ಗಳಿಗೆ ಪ್ರತಿದಿನ ಹೆಚ್ಚುವರಿ ಡೇಟಾ ಸೌಲಭ್ಯ ಘೋಷಿಸಿರುವುದು ಅಚ್ಚರ ತಂದಿದೆ.

399ರೂ.ಪ್ಲ್ಯಾನ್

ವೊಡಾಫೋನಿನ 249ರೂ. ಪ್ಲ್ಯಾನ್, 399ರೂ.ಪ್ಲ್ಯಾನ್ ಮತ್ತು 599ರೂ, ಪ್ಲ್ಯಾನ್‌ಗಳ ರೀಚಾರ್ಜ್ ನೊಂದಿಗೆ ಇದೀಗ ಹೆಚ್ಚುವರಿಯಾಗಿ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಈಗಾಗಲೇ ಈ ಪ್ಲ್ಯಾನ್‌ಗಳು ಪ್ರತಿದಿನ 1.5GB ಡೇಟಾ ಸೌಲಭ್ಯಗಳನ್ನು ಪಡೆದಿದ್ದು, ಹೆಚ್ಚುವರಿ 1.5GB ಡೇಟಾ ಲಭ್ಯತೆಯೊಂದಿಗೆ ಒಟ್ಟು ಪ್ರತಿದಿನ 3GB ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ವಾಯಿಸ್‌ ಕರೆಗಳ ಪ್ರಯೋಜನ ಹೊಂದಿವೆ. ಹಾಗಾದರೇ ವೊಡಾಫೋನಿನ ಈ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನಿನ 249ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನಿನ 399ರೂ.ಪ್ಲ್ಯಾನ್ ಸಹ 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

Most Read Articles
Best Mobiles in India

English summary
Vodafone will provide its customers with an additional 1.5 GB data on select recharge plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X