ಒನ್ ಪ್ಲಸ್ 5 ಗ್ರಾಹಕರಿಗೆ ಆಚ್ಚರಿಯ ಆಫರ್ ನೀಡಿದ ವೊಡಾಪೋನ್..!!!
ವೊಡಾಪೋನ್ ಆಚ್ಚರಿಯ ಆಫರ್ ವೊಂದನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಒನ್ ಪ್ಲಸ್ ನೊಂದಿಗೆ ವೊಡಫೋನ್ ಒಪ್ಪಂದವನ್ನು ಮಾಡಿಕೊಂಡಿದೆ.
ಸದ್ಯ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಒನ್ ಪ್ಲಸ್ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ವೊಡಾಪೋನ್ ಆಚ್ಚರಿಯ ಆಫರ್ ವೊಂದನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಒನ್ ಪ್ಲಸ್ ನೊಂದಿಗೆ ವೊಡಾಫೋನ್ ಒಪ್ಪಂದವನ್ನು ಮಾಡಿಕೊಂಡಿದೆ.
ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಈಗಾಗಲೇ ಬೆಂಗಳೂರು ಮತ್ತು ದೆಹಲಿಯಲ್ಲಿರುವ ವೊಡಾಪೋನ್ ಸ್ಟೋರ್ ಗಳಲ್ಲಿ ನೂತನವಾಗಿ ಲಾಂಚ್ ಆಗಿರುವ ಒನ್ ಪ್ಲಸ್ 5 ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗ್ರಾಹಕರು ವೊಡಾಪೋನ್ ಸ್ಟೋರ್ ಗೆ ಭೇಟಿ ನೀಡುವ ಮೂಲಕ ನೂತನ ಫೋನನ್ನು ಬಳಸಿ ನೋಡಬಹುಗಾಗಿದೆ.

ವೊಡಾಪೋನ್ ನೀಡಿರುವ ಆಫರ್ ಏನು..?
ಒನ್ ಪ್ಲಸ್ 5 ಕೊಂಡು ಕೊಳ್ಳುವ ಗ್ರಾಹಕರಿಗೆ 45GB 3G/4G ಡೇಟಾವನ್ನು ಐದು ತಿಂಗಳ ಅವಧಿಗೆ ನೀಡಲಿದೆ. ಅದುವೇ ಪ್ರತಿ ತಿಂಗಳು 9GB ಡೇಟಾವನ್ನು ಒದಗಿಸಲಿದೆ.

ವೊಡಾಪೋನ್ ಪ್ಲೇ ಉಚಿತ:
ಇದರೊಂದಿಗೆ ಮೂರು ತಿಂಗಳ ಕಾಲ ವೊಡಾಫೋನ್ ಪ್ಲೇ ಸೇವೆಯನ್ನು ಉಚಿತವಾಗಿ ನೀಡಲಿದೆ. ಇದಕ್ಕಾಗಿ 1GB ಗಿಂತ ಹೆಚ್ಚಿನ ಡೇಟಾವನ್ನು ರಿಜಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ವೊಡಾಪೋನ್ ರೆಡ್ ಗ್ರಾಹಕರಿಗೆ:
ಇದಲ್ಲದೇ ವೊಡಾಪೋನ್ ರೆಡ್ ಗ್ರಾಹಕರು ಹೆಚ್ಚಿನ ಡೇಟಾ ಬೆನಿಫಿಟ್ ಪಡೆಯಲಿದ್ದು ಮೂರು ತಿಂಗಳ ಕಾಲ ಪ್ರತಿ ತಿಂಗಳು 10GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಅದುವೇ ಮೈ ವೊಡಾಫೋನ್ ಆಪ್ ಮೂಲಕ.

ಒನ್ ಪ್ಲಸ್ 5 ಕುರಿತು:
ಒಟ್ಟು ಎರಡು ಮಾದರಿಯಲ್ಲಿ ಒನ್ ಪ್ಲಸ್ 5 ಲಭ್ಯವಿದೆ. 6GB RAM/64 GB ಮೆಮೊರಿ ಮತ್ತು 8GB RAM/ 128GB ಮೆಮೊರಿಯಲ್ಲಿ ದೊರೆಯಲಿದ್ದು, ಬೆಲೆ ರೂ.32,999 ಮತ್ತು ರೂ.37,999 ಆಗಿದೆ.


Click it and Unblock the Notifications