Home
ಸುದ್ದಿಜಾಲ

ವೊಡಾಫೋನಿನ 251ರೂ ಪ್ಲ್ಯಾನ್ ಈಗ ಪ್ಯಾನ್ ಇಂಡಿಯಾ ಲಭ್ಯ!..ಪ್ರಯೋಜನಗಳೆನು?

ಲಾಕ್‌ಡೌನ್‌ನಿಂದಾಗಿ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ವ್ಯವಸ್ಥೆ ಮಾಡಿವೆ. ಮನೆಯಿಂದ ಕೆಲಸ ಮಾಡಲು ಗ್ರಾಹಕರಿಗೆ ಅನುಕೂಲವಾಗಲೆಂದು ಟೆಲಿಕಾಂ ಸಂಸ್ಥೆಗಳು ವರ್ಕ್ ಫ್ರಂ ಹೋಂ ಪ್ಲ್ಯಾನ್‌ನಲ್ಲಿ ಅಧಿಕ ಡೇಟಾ ಪ್ರಯೋಜನ ನೀಡಿವೆ. ಅವುಗಳಲ್ಲಿ ವೊಡಾಫೋನ್ ಟೆಲಿಕಾಂ ಸಹ ಆಕರ್ಷಕ ವರ್ಕ್ ಫ್ರಂ ಹೋಮ್ ಪ್ಲ್ಯಾನ್‌ ಘೋಷಿಸಿದ್ದು, ಇದೀಗ ಆ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.

ವೊಡಾಫೋನ್

ಹೌದು, ವೊಡಾಫೋನ್ ಸಂಸ್ಥೆಯು ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗಾಗಿ 251ರೂ. ಡೇಟಾ ಪ್ಲ್ಯಾನ್‌ ನೀಡಿದೆ. ಈ ಡೇಟಾ ವೋಚರ್‌ನಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ದೊರೆಯುತ್ತದೆ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಹಾಗೂ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ವೊಡಾಫೋನಿನ ಈ ಡೇಟಾ ವೋಚರ್ ಹೆಚ್ಚು ಸೂಕ್ತ ಅನಿಸಲಿದೆ. ಈ ಯೋಜನೆ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಪ್ಯಾನ್ ಇಂಡಿಯಾ/ದೇಶದ ಎಲ್ಲ ಟೆಲಿಕಾಂ ವ್ಯಾಪ್ತಿಗಳಿಗೂ ಲಭ್ಯವಾಗಲಿದೆ ಎಂದು ತಿಳಿಸಿದೆ. ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 251ರೂ. ಡೇಟಾ ಪ್ಲ್ಯಾನ್

ವೊಡಾಫೋನ್ 251ರೂ. ಡೇಟಾ ಪ್ಲ್ಯಾನ್

ವೋಡಾಫೋನಿನ 251ರೂ. ಡೇಟಾ ವೋಚರ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಸೌಲಭ್ಯ ದೊರೆಯುತ್ತದೆ. ಇದೊಂದು ಡೇಟಾ ವೋಚರ್ ಆಗಿರುವುದರಿಂದ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಅನುಕೂಲವಾಗಿದೆ.

ಜಿಯೋ 251ರೂ. ಪ್ಲ್ಯಾನ್‌

ಜಿಯೋ 251ರೂ. ಪ್ಲ್ಯಾನ್‌

ವರ್ಕ್‌ ಫ್ರಂ ಹೋಮ್ ವ್ಯವಸ್ಥೆಯನ್ನು ಬೆಂಬಲಿಸಿ ಜಿಯೋ ಈ ಕೊಡುಗೆಯನ್ನು ನೀಡಿದೆ. ಈ ಪ್ರೀಪೇಯ್ಡ್‌ ಒಟ್ಟು 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಅಂದರೇ ಒಟ್ಟು ವ್ಯಾಲಿಡಿಟಿ ಅವಧಿಗೆ 102GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಇನ್ನು ಇಂಟರ್ನೆಟ್ ವೇಗವು 64 kbps ಸಾಮರ್ಥ್ಯದಲ್ಲಿರಲಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಯ ಪ್ರಯೋಜನೆಗಳು ಇರುವುದಿಲ್ಲ. ಜಿಯೋ ಇತ್ತೀಚಿಗಷ್ಟೆ ಡೇಟಾ ವೋಚರ್‌ಗಳಲ್ಲಿಯೂ ಡಬಲ್ ಧಮಾಕಾ ಕೊಡುಗೆ ನೀಡಿದೆ.

ಏರ್‌ಟೆಲ್‌ 251ರೂ. ಪ್ಲ್ಯಾನ್

ಏರ್‌ಟೆಲ್‌ 251ರೂ. ಪ್ಲ್ಯಾನ್

ಹೆಚ್ಚುವರಿ ಡೇಟಾ ಸೌಲಭ್ಯದ ಅನುಕೂಲಕ್ಕಾಗಿ ಏರ್‌ಟೆಲ್‌ ಸಹ 251ರೂ ಯೋಜನೆ ನೀಡಿದ್ದು, ಈ ಯೋಜನೆಯು ಒಟ್ಟು 50GB ಡೇಟಾ ಪ್ರಯೋಜನ ಒಳಗೊಂಡಿದೆ. ಇದೊಂದು ಹೆಚ್ಚುವರಿ ಡೇಟಾ ವೋಚರ್ ಪ್ಲ್ಯಾನ್‌ ಆಗಿರುವ ಕಾರಣ ಈ ಯೋಜನೆಯಲ್ಲಿ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಅನುಕೂಲವಾಗಿದೆ.

ವೊಡಾಫೋನ್ 98ರೂ. ಪ್ಲ್ಯಾನ್

ವೊಡಾಫೋನ್ 98ರೂ. ಪ್ಲ್ಯಾನ್

ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್‌ ಆನ್‌ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್‌ ಈಗ ಪರಿಷ್ಕರಣೆ ಆಗಿದ್ದು, ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್‌ ಆನ್‌ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್‌ ಇತ್ತೀಚಿಗಷ್ಟೆ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌, ಉಚಿತ ವಾಯಿಸ್‌ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.

ವೊಡಾಫೋನ್ 16ರೂ ಮತ್ತು 48ರೂ ಡೇಟಾ ಪ್ಯಾಕ್‌

ವೊಡಾಫೋನ್ 16ರೂ ಮತ್ತು 48ರೂ ಡೇಟಾ ಪ್ಯಾಕ್‌

ವೊಡಾಫೋನ್‌ ಆರಂಭಿಕ 16ರೂ, ಡೇಟಾ ಆಡ್‌ ಆನ್ ಪ್ಯಾಕ್‌ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್‌ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ. ವೊಡಾಫೋನ್ 98ರೂ. ಪ್ಲ್ಯಾನ್ ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. 28 ದಿನಗಳ ವ್ಯಾಲಿಡಿಟಿ ಪಡೆದಿದೆ.

Best Mobiles in India

English summary
Vodafone joins Jio in offering its Work from Home pack with a standalone validity.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+