ಸಂಪೂರ್ಣ ಮಹಿಳಾ ಉದ್ಯೋಗಿಗಳ ವೊಡಾಫೋನ್‌ "ಏಂಜಲ್ಸ್‌ ಸ್ಟೋರ್‌"

Posted By: Staff


ಸಂಪೂರ್ಣ ಮಹಿಳಾ ಉದ್ಯೋಗಿಗಳ ವೊಡಾಫೋನ್‌

ಭಾರತದ ಪ್ರತಿಷ್ಠಿತ ದೂರವಾಣಿ ಸಂಪರ್ಕ ಸೇವಾ ಸಂಸ್ಥೆಯಾದ ವೊಡಾಫೋನ್‌ ಇಂಡಿಯಾ ಸಂಸ್ಥೆಯು ಮಹಿಳಾ ಸಬಲೀಕರಣಕ್ಕಾಗಿ ಮುಂದಾಗಿದ್ದು, ಮುಂಬೈನಲ್ಲಿ ಪ್ರಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಉದ್ಯೋಗಿಗಳಿಂದ ಕಾರ್ಯಾನಿರ್ವಹಿಸುವ "ವೊಡಾಫೋನ್‌ ಏಂಜಲ್ಸ್‌ ಸ್ಟೋರ್‌" ರಿಟೇಲ್‌ ಮಳಿಗೆಯನ್ನು ಅನಾವರಣ ಗೊಳಿಸಿದೆ.

ಭಾರತದ ಮೊಟ್ಟಮೊದಲ ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಣೆ ಯಾಗಲಿರುವ ರಿಟೇಲ್‌ ಮಳಿಗೆ ಎಂದೆನಿಸಿಕೊಂಡಿರುವ ಏಂಜಲ್ಸ್‌ ಸ್ಟೋರ್‌ ಮುಂಬೈನ ಪ್ರಭಾದೇವಿಯಲ್ಲಿನ ಅಪ್ಪಾಸಾಹೆಬ್‌ ಮರಾಠೆ ರಸ್ತೆಯಲ್ಲಿ ಅನಾವರಣಗೊಳಿಸಲಾಗಿದೆ. ಅಂದಹಾಗೆ ಈ ಮಳಿಗೆಯಲ್ಲಿ ಸೆಕ್ಯುರಿಟಿ, ಪ್ಯಾಂಟ್ರೀ ಸಿಬ್ಬಂದಿ, ಕಸ್ಟಮರ್‌ ಸರ್ವೀಸ್‌ ರಿಸೊರ್ಸ್‌ ಸೇರಿದಂತೆ ಮ್ಯಾನೇಜ್‌ಮೆಂಟ್‌ ಎಲ್ಲವೂ ಮಹಿಳೆಯರದ್ದೇ ಕಾರುಬಾರು. ಏನಪ್ಪಾ ಇಲ್ಲಿ ಎಲ್ಲಾ ಮಹಿಳೆಯರೇ ಇದ್ದಾರೆ ಇಲ್ಲಿ ಪುರುಷರಿಗೆ (ಗ್ರಾಹಕರಿಗೆ) ನೋ ಎಂಟ್ರಿ ಅಂತ ಅಂದುಕೊಳ್ಳಬೇಡಿ. ಮಹಿಳಾ ಹಾಗೂ ಪುರುಷ ಗ್ರಾಹಕರುಗಳು ಏಂಜಲ್ಸ್‌ ಸ್ಟೋರ್‌ ನ ಸೇವೆ ಪಡೆಯಬಹುದಾಗಿದೆ.

ಮುಂಬೈನಲ್ಲಿ ನೂತನ ಮಹಿಳಾ ವೊಡಾಫೋನ್‌ ಮಳಿಗೆ ಅನಾವರಣ ಗೊಳಿಸಿ ಮಾತನಾಡಿದ ವೊಡಾಫೋನ್‌ ಸಂಸ್ಥೆಯ ಮುಂಬೈ ವಿಭಾದ ವ್ಯವಹಾರಿಕಾ ಮುಖ್ಯಸ್ಥರಾದ ಅರವಿಂದ್‌ ವೊರ್ಹಾ " ಭಾರತದ ಮೊಟ್ಟಮೊದಲ ಮಹಿಳಾ ನಿರ್ವಹಣೆಯ ಮಲಳಿಗೆ ಆರಂಭಿಸಿದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದ್ದಲ್ಲದೆ ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಸಾಮಾಜಿಕ ಬೆಳವಣಿಗೆ ಭದ್ರ ಬುನಾದಿ ಯಾಗಲಿದೆ ಅದಕ್ಕಾಗಿಯೇ ವೊಡಾಫೋನ್‌ ಇಂಡಿಯಾ ಸಂಸ್ಥೆಯು ಮಹಿಳೆಯರಿಗೆ ಆರ್ಥಿಕ ಸ್ಥಿರತೆ ಪಡೆಯುವಲ್ಲಿ ಸಹಕರಿಸಲು ವೊಡಾಫೋನ್‌ ಏಂಜಲ್ಸ್‌ ಸ್ಟೋರ್‌ ಆರಂಭಿಸಿದೆ" ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ರಿಲೈನ್ಸ್‌ನಿಂದ ವಿಶೇಷ ಟ್ಯಾರಿಫ್‌ಪ್ಲಾನ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot