ವಿದ್ಯಾರ್ಥಿಗಳಿಗೆ ರಿಲೈನ್ಸ್‌ನಿಂದ ವಿಶೇಷ ಟ್ಯಾರಿಫ್‌ಪ್ಲಾನ್‌

Posted By: Staff
ವಿದ್ಯಾರ್ಥಿಗಳಿಗೆ ರಿಲೈನ್ಸ್‌ನಿಂದ ವಿಶೇಷ ಟ್ಯಾರಿಫ್‌ಪ್ಲಾನ್‌

ರಿಲೈನ್ಸ್‌ ಕಮ್ಯುನಿಕೇಷನ್ಸ್‌ ಹಾಗೂ ವಾಟ್ಸ್‌ಆಪ್‌ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ನೂತನ ಟ್ಯಾರಿಫ್‌ ಪ್ಲಾನ್‌ ಪರಿಚಯಿಸಿದೆ. "ಮೈ ಕಾಲೇಜ್‌ ಪ್ಲಾನ್‌" ಹೆಸರಿನ ನೂತನ ಟ್ಯಾರಿಫ್‌ ಪ್ಲಾನ್‌ನ ಮೂಲಕ ಕಾಲೇಜು ವಿದ್ಯಾರ್ಥಿಗಳು ಯಾವುದೇ ಮಿತಿ ಇಲ್ಲದೆ ಫೆಸ್‌ಬುಕ್‌ ಬಳಸಬಹುದಾಗಿದೆ ಹಾಗೂ ತಿಂಗಳಿಗೆ 16 ರೂ. ಪಾವತಿಸುವ ಮೂಲಕ ವಾಟ್ಸ್‌ಆಪ್‌ ಪಡೆಯಬಹುದಾಗಿದೆ.

ಈ ಟ್ಯಾರಿಫ್‌ ಪ್ಲಾನ್‌ ಕೇವಲ ರಿಲೈನ್ಸ್‌ ಜಿಎಸ್‌ಎಂ ಬಳಕೆದಾರರಿಗೆ ಮಾತ್ರ ಅನ್ವಯ ವಾಗುತ್ತದೆ. ಹಾಗೂ ಭಾರತದಾದ್ಯಂತ 16 ವೃತ್ತಗಳಲ್ಲಿ ಮಾತ್ರವಷ್ಟೇ ಲಭ್ಯವಿದ್ದು ಬಳಕೆದಾರರಿಗೆ ಮತ್ತಷ್ಟು ಪ್ಲಾನ್‌ಗಳನ್ನು ನೀಡಲಾಗುವುದು.

ಮೂಲಗಳ ಪ್ರಕಾರ ವಿಶೇಷ ಟಾರಿಫ್‌ ಪ್ಲಾನ್‌ನಿಂದಾಗಿ ರಿಲೈನ್ಸ್‌ ಬಳಕೆದಾರರು ನಿಗದಿತ ಗುಂಪಿನವರಿಗೆ ಕೇವಲ 5 ಪೈಸೆಗೆ ಕರೆ ಹಾಗೂ sms ಗಳನ್ನು ಕಳುಹಿಸ ಬಹುದಾಗಿದೆ. ಹಾಗೂ sms ಸಂದೇಶಗಳನ್ನು 3 ರೂ. ದರದೊಂದಿಗೆ ಬ್ರಾಡ್ಕಾಸ್ಟ್‌ ಮಾಡಬಹುದಾಗಿದೆ. 51112 ನಿಮ್ಮ ಸಂದೇಶ ಕಳುಹಿಸುವ ಮೂಲಕ ಬ್ರಾಡ್ಕಾಸ್ಟ್‌ ಮಾಡಬಹುದಾಗಿದೆ.

ಅಂದಹಾಗೆ ಈ ವಿಶೇಷ ಪ್ಲಾನ್‌ನಲ್ಲಿ ಕೆಲ ಕುಂದು ಕೊರತೆಗಳು ಸಹಾ ಇವೆ. ಮೂಲಗಳ ಪ್ರಕಾರ ಈ ಪ್ಲಾನ್‌ನಲ್ಲಿ ಬಳಕೆದಾರರು ಕೇವಲ ಒಂದು ಗ್ರೂಪ್‌ನ ಸದಸ್ಯರಾಗಬಹುದಷ್ಟೆ ಅಲ್ಲದೆ ಫೇಸ್‌ಬುಕ್‌ ಹಾಗೂ ವಾಟ್ಸ್ಆಪ್‌ ಹೊರತುಪಡಿಸಿ ಬೇರಾವುದಾರು ಬಳಸಿದಲ್ಲಿ ಹಣ ಪಾವತಿಸ ಬೇಕಾಗುತ್ತದೆ. ಪ್ಲಾನ್‌ 30 ದಿನಗಳ ನಂತರ ತಾನಾಗಿಯೇ ಮುಂದುವರೆಯುತ್ತದೆ. ಒಂದು ವೇಳೆ ಬಳಕೆದಾರರಿಗೆ ಬೇಡವೆನಿಸಿದಲ್ಲಿ ಅನ್ಸಸ್ಕ್ರೈಬ್ ಮಾಡಿಕೊಳ್ಳ ಬೇಕಾಗುತ್ತದೆ.

ಈ ನೂತನ ಪ್ಲಾನ್‌ ಕರಿತಾಗಿ ರಿಲೈನ್ಸ್‌ ಹಾಗೂ ವಾಟ್ಸ್ಆಪ್‌ ಸಂಸ್ಥೆಗಳಿಂದ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗಗೊಂಡಿಲ್ಲಾ. ಈ ವದಂತಿಯು ಮೊದಲಿಗೆ ಮೀಡಿಯಾನಮಃ.ಕಾಮ್‌ ಮೂಲಕ ಮೊದಲು ಆರಂಭ ಗೊಂಡಿದೆ. ಅಂದಹಾಗೆ ಈ ವದಂತಿಗಳು ನಿಜವೇ ಆದಲ್ಲಿ ವಾಟ್ಸ್‌ಆಪ್‌ ಮೆಸೇಜಿಂಗ್‌ ಆಪ್‌ಗೆ ಭಾರತದಲ್ಲಿ ಭಾರೀ ನಡೆ ಸಾಧಿಸಿದಂತಾಗುತ್ತದೆ.

ಅಂದಹಾಗೆ ಈ ನೂತನ ಟ್ಯಾರಿಫ್‌ ಪ್ಲಾನ್‌ ಅಸ್ಸಾಂ, ಜಾರ್ಖಂಡ್‌, ದೆಹಲಿ, ಕೋಲ್ಕತ್ತ, ಮುಂಬೈ, ಹಾಗೂ ರಾಜಸ್ಥಾನ ಸೇರಿದಂತೆ ಕೆಲ ಪ್ರಮುಖ ರಾಜ್ಯ ಹಾಗೂ ನಗರಗಳಲ್ಲಿ ಲಭ್ಯವಿದೆ.

ನೆಟ್ವರ್ಕ್‌ ಪೊರ್ಟ್‌ ಮಾಡಿಕೊಳ್ಳುವುದು ಹೇಗೆ?

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot