Home
ಸುದ್ದಿಜಾಲ

ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಪ್ರಯೋಜನ! ಖಂಡಿತಾ ಇಷ್ಟ ಪಡ್ತೀರಾ..

ಸ್ಮಾರ್ಟ್‌ಫೋನ್‌ಗಳು (Smartphones) ಬಳಕೆದಾರರಿಗೆ ಭಿನ್ನ ಅನುಭವ ನೀಡುವ ಕೆಲಸ ಮಾಡುತ್ತವೆ. ಅದರಲ್ಲೂ ಇತ್ತೀಚಿಗೆ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ನೀವು ನಿರೀಕ್ಷೆ ಸಹ ಮಾಡಿರದ ಫೀಚರ್ಸ್‌ ಅನ್ನು ಸಹ ನೀಡುತ್ತಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿವೆ.

ಹೌದು, ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಗಳಲ್ಲಿ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ (Samsung) ಫೋನ್‌ ಬಳಕೆದಾರರಿಗೆ ಈ ವಿಶೇಷ ಸೌಲಭ್ಯ ಸಿಗಲಿದೆ. ಈಗಾಗಲೇ ಸ್ಯಾಮ್‌ಸಂಗ್‌ ಉತ್ತಮ ಕ್ಯಾಮೆರಾ ಫೀಚರ್ಸ್‌, ಎಐ ಫೀಚರ್ಸ್‌ ಸೇರಿದಂತೆ ಅನೇಕ ವಿಷಯಗಳಲ್ಲಿ ಅಗ್ರಸ್ಥಾನ ಪಡೆದಿದೆ. ಹಾಗೆಯೇ ಈಗ ಈ ವಿಶೇಷ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನ ಎನಿಸಿಕೊಂಡಿದೆ. ಹಾಗಿದ್ರೆ, ಯಾವುದು ಈ ಹೊಸ ಸೌಲಭ್ಯ?, ಇದರಿಂದ ಬಳಕೆದಾರರಿಗೆ ಏನೆಲ್ಲಾ ಉಪಯೋಗ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಪ್ರಯೋಜನ! ಖಂಡಿತಾ ಇಷ್ಟ ಪಡ್ತೀರಾ...

VoWiFi ಕರೆ ರೆಕಾರ್ಡ್ ಸೌಲಭ್ಯ: ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ವಾಯ್ಸ್‌ ಕರೆಯನ್ನು ರೆಕಾರ್ಡ್ ಮಾಡುವ ಆಯ್ಕೆಯನ್ನು ಇದೀಗ ಅಪ್‌ಗ್ರೇಡ್ ಮಾಡಲಾಗಿದೆ. ಅಲ್ಲಿ ಬಳಕೆದಾರರು ಈಗ VoWiFi (ವಾಯ್ಸ್ ಓವರ್ ವೈಫೈ) ಮೋಡ್‌ನಲ್ಲಿ ರೆಕಾರ್ಡ್ ಮಾಡಲು ಅನುಮತಿ ನೀಡಲಾಗಿದೆ. ಇದೀಗ, ಈ ಫೀಚರ್ಸ್‌ ಗ್ಯಾಲಕ್ಸಿ S24 ಸರಣಿಗೆ (samsung Galaxy S24 series) ಸೀಮಿತವಾಗಿದೆ. ಹಾಗೆಯೇ ಆಂಡ್ರಾಯ್ಡ್‌ 14 ಓಎಸ್‌ ಆಧಾರಿತ ಒನ್‌ಯುಐ 6.1 ನಲ್ಲಿ ರನ್‌ ಆಗಲಿದ್ದು, ಮುಂಬರುವ ದಿನಗಳಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳಿಗೂ ಈ ಸೌಲಭ್ಯ ಸಿಗಲಿದೆ ಎಂದು ತಿಳಿದುಬಂದಿದೆ.

ಇನ್ನು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಡಿಯೊ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಿದ್ದರೂ, VoWiFi ಆಫ್ ಮಾಡಿದಾಗ ಅಥವಾ ಟ್ರೂಕಾಲರ್ ನಂತಹ ಥರ್ಡ್‌ ಪಾರ್ಟಿ ಆಪ್‌ಗಳ ಸಹಾಯದಿಂದ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಗೂಗಲ್‌ ಡಯಲರ್‌ನಂತೆ, 'ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ' ಎಂದು ರೆಕಾರ್ಡ್‌ ಮಾಡಲು ಮುಂದಾದಾಗ ತಿಳಿಸುವುದಿಲ್ಲ. ಬದಲಾಗಿ ನೀವು ಇದನ್ನು ಸಕ್ರಿಯಗೊಳಿಸಿದ್ದೀರಿ ಎಂದರೆ ಆಟೋಮ್ಯಾಟಿಕ್‌ ಆಗಿ ವಾಯ್ಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಮುಂದಾಗುತ್ತದೆ.

ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಪ್ರಯೋಜನ! ಖಂಡಿತಾ ಇಷ್ಟ ಪಡ್ತೀರಾ...

VoWiFi ಮೋಡ್‌ನಲ್ಲಿ ಕರೆ ರೆಕಾರ್ಡಿಂಗ್ ಆವೃತ್ತಿ ಸಂಖ್ಯೆ 15.1.66 ಅಥವಾ ಹೊಸದರೊಂದಿಗೆ ಇತ್ತೀಚಿನ ಡಯಲರ್ ಆಪ್‌ನೊಂದಿಗೆ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ. VoWiFi ಕರೆಗಳಷ್ಟೇ ಅಲ್ಲದೆ, ಈ ಸ್ಮಾರ್ಟ್‌ಫೋನ್‌ಗಳು VoLTE (4G) ಮತ್ತು VoNR (5G) ನೆಟ್‌ವರ್ಕ್‌ಗಳ ಮೂಲಕ ಮಾಡಿದ ಕರೆಗಳನ್ನು ಸಹ ರೆಕಾರ್ಡ್ ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ.

ಸ್ಯಾಮ್‌ಸಂಗ್‌ ಪ್ರಸ್ತುತ ಒನ್‌ಯುಐ 6 ಅಥವಾ ಹಳೆಯ ಆವೃತ್ತಿಗಳಲ್ಲಿ ರನ್‌ ಆಗುವ ಫೋನ್‌ಗಳಲ್ಲಿ WiFi ಕರೆಗಳನ್ನು ರೆಕಾರ್ಡ್ ಮಾಡಲು ಅನುಮತಿ ನೀಡಿಲ್ಲ. ಈ ಬಗ್ಗೆ ಪಾಪ್-ಅಪ್ ಅನ್ನು ಸಹ ಪ್ರದರ್ಶಿಸುತ್ತದೆ ಮತ್ತು ಈ ಫೀಚರ್ಸ್‌ ಪ್ರಸ್ತುತ ಕೇವಲ ಮೂರು ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿದೆ. ಹಾಗೆಯೇ ಈ VoWiFi ಕರೆ ಮಾಡುವಿಕೆಯನ್ನು ತ್ವರಿತ ಸೆಟ್ಟಿಂಗ್ ಪ್ಯಾನೆಲ್‌ನಿಂದ ಆಕ್ಟಿವ್‌ ಮಾಡಬಹುದಾಗಿದ್ದು, ಇದರಿಂದಾಗಿ ಸ್ಯಾಮ್‌ಸಂಗ್‌ ಡಯಲರ್ ಆಪ್‌ ಮೂಲಕ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಪ್ರಯೋಜನ! ಖಂಡಿತಾ ಇಷ್ಟ ಪಡ್ತೀರಾ...

VoWiFi ನಲ್ಲಿ ಅಂತಹುದ್ದೇನಿದೆ?: ನಿಯಮಿತ ವಾಯ್ಸ್‌ ಕರೆಗಳಿಗೆ ಹೋಲಿಸಿದರೆ, VoWiFi ಉತ್ತಮ ಆಡಿಯೊ ಗುಣಮಟ್ಟವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಒಳಾಂಗಣದಲ್ಲಿ, ಸೆಲ್ಯುಲಾರ್ ನೆಟ್‌ವರ್ಕ್ ಕವರೇಜ್ ಸರಿಯಾಗಿ ಇರದಿದ್ದರೆ ಈ VoWiFi ನೆಟ್‌ವರ್ಕ್ ಸಮಸ್ಯೆಗಳಿಂದ ಕರೆ ಸಂಪರ್ಕ ಕಡಿತ ಮಾಡುವುದಿಲ್ಲ. ಜೊತೆಗೆ ಸ್ಪಷ್ಟ ಆಡಿಯೋವನ್ನು ಖಚಿತಪಡಿಸುತ್ತದೆ. ಹಾಗಿದ್ರೆ ನೀವು ಇತ್ತೀಚಿನ ಆವೃತ್ತಿಯ ಫೋನ್‌ ಬಳಕೆ ಮಾಡುತ್ತಿದ್ರೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ.

Best Mobiles in India

English summary
VoWiFi call record facility is now available on Samsung Galaxy smartphones. That means the voice call recording option is now upgraded.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+