Home
ಸುದ್ದಿಜಾಲ

YouTube ನಲ್ಲಿನ ವಿಡಿಯೋ ವೀಕ್ಷಣೆ ಮಾಡಿಕೊಂಡೇ ಹಣ ಗಳಿಸುವುದು ಹೇಗೆ ಗೊತ್ತಾ!?

ಈ ಮೊದಲು ಯಾರೇ ಆದರೂ ಯೂಟ್ಯೂಬ್‌ ಚಾನಲ್‌ ಮಾಡಿಕೊಂಡು ಅದರಲ್ಲಿ ಉತ್ತಮ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಹಣ ಗಳಿಕೆ ಮಾಡುತ್ತಿದ್ದರು. ಆದರೆ, ಇನ್ಮುಂದೆ ವಿಡಿಯೋ ವೀಕ್ಷಣೆ ಮಾಡುವವರಿಗೂ ಹಣ ಸಿಗಲಿದೆ. ಹೀಗಾಗಿ ಯೂಟ್ಯೂಬ್ ಮೂಲಕ ಹಣ ಗಳಿಸಲು ಚಾನೆಲ್ ಹೊಂದಿರಲೇಬೇಕು ಎಂಬ ನಿಯಮ ಇಲ್ಲ.

ಹೌದು, ಸಾಮಾನ್ಯನಾಗಿ ಸೆಲೆಬ್ರಿಟಿ ಎನಿಸಿಕೊಂಡವರು ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರುವವರೂ ಸಹ ಒಂದೊಂದು ಯೂಟ್ಯೂಬ್‌ ಚಾನಲ್‌ ಮಾಡಿಕೊಂಡು ಭಾರೀ ಹಣ ಸಂಪಾದನೆ ಮಾಡುತ್ತಿದ್ದಾರೆ. ಯಾಕೆಂದರೆ ಇವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವುದರಿಂದ ಇವರ ವಿಡಿಯೋ ಹೆಚ್ಚಿನ ವೀಕ್ಷಣೆ ಪಡೆಯುತ್ತವೆ. ಇದರೊಂದಿಗೆ ಹಣ ಸಹ ಅವರಿಗೆ ಸಿಗುತ್ತದೆ.ಆದರೆ,ಇನ್ಮುಂದೆ ನೀವು ಈ ವಿಡಿಯೋಗಳನ್ನೇ ನೋಡಿ ಹಣ ಸಂಪಾದನೆ ಮಾಡಬಹುದು ಎಂದರೆ ನಂಬಲೇಬೇಕು.

YouTube ನಲ್ಲಿನ ವಿಡಿಯೋ ವೀಕ್ಷಣೆ ಮಾಡಿಕೊಂಡೇ ಹಣ ಗಳಿಸುವುದು ಹೇಗೆ ಗೊತ್ತಾ!?

ವಿಡಿಯೋ ನೋಡಿ ಹಣ ಗಳಿಸುವುದು ಹೇಗೆ?: ಯೂಟ್ಯೂಬ್ ವಿಆರ್‌ಎಸ್ ಪ್ರೋಗ್ರಾಂ ಅನ್ನು ಪರಿಚಯಿಸಿದ್ದು, ಇದಕ್ಕೆ ವೀಕ್ಷಕರ ಆದಾಯ ಹಂಚಿಕೆ ಕಾರ್ಯಕ್ರಮ (VRS ) ಎಂದು ಕರೆಯಲಾಗುತ್ತದೆ. ಹಾಗಿದ್ರೆ, ಏನಿದು ಯೂಟ್ಯೂಬ್‌ನ ತಂತ್ರ?, ಈ ವಿಆರ್‌ಎಸ್‌ನಿಂದ ವೀಕ್ಷಕರಿಗೆ ಹಣ ಹೇಗೆ ಬರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಈ ವಿಆರ್‌ಎಸ್‌ ಪ್ರೋಗ್ರಾಂ ಅನ್ನು ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಪರಿಚಯಿಸಲಾಗಿದ್ದು, ಈಗ ಯೂಟ್ಯೂಬ್‌ ತನ್ನ ಎರಡನೇ ಹಂತದ ವಿಆರ್‌ಎಸ್‌ ಕಾರ್ಯಕ್ರಮವನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಬಗ್ಗೆ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅಧಿಕೃತ ಹೇಳಿಕೆ ನೀಡಿದ್ದು, ಈ ಯೋಜನೆಯು ಯೂಟ್ಯೂಬ್ ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

  • * ಕೆಲವು ಯೂಟ್ಯೂಬ್‌ ವೀಕ್ಷಕರು ಈಗ ತಿಂಗಳಿಗೆ $200 (16,406ರೂ. ಗಳು) ವರೆಗೂ ಹಣ ಗಳಿಸಬಹುದು ಎಂದು ಹೇಳಲಾಗುತ್ತದೆ.ಆದರೆ, ಇದಕ್ಕೆ ಕೆಲವು ನಿಯಮಗಳಿವೆ. ಅದೇನೆಂದರೆ ವಿಡಿಯೋಗಳು ಪ್ಲೇ ಆಗುತ್ತಿರುವಾಗ ಡಿವೈಸ್‌ ಅನ್ನು ಎಲ್ಲೋ ದೂರದಲ್ಲಿ ಇಟ್ಟು ಆಲಿಸುವುದಲ್ಲ. ಹಾಗೆಯೇ ವೀಕ್ಷಣೆ ಮಾಡುವ ವೇಳೆ ನೀವು 5 ನಿಮಿಷಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ ಹಣ ಗಳಿಕೆ ಮಾಡಲು ಸಾಧ್ಯವಿರುವುದಿಲ್ಲ.
  • * ವೀಡಿಯೋ ವೀಕ್ಷಣೆ ಮಾಡುವಾಗ ಹೆಚ್ಚಿನ ಜಾಹೀರಾತುಗಳನ್ನು ವೀಕ್ಷಿಸಿದರೆ ಹೆಚ್ಚು ಗಳಿಸಬಹುದಾಗಿದೆ. ಈ ಜಾಹೀರಾತುಗಳನ್ನು ತಪ್ಪಿಸುವುದರಿಂದ ಕಡಿಮೆ ಆದಾಯ ವಿತರಣೆಗೆ ಕಾರಣವಾಗುತ್ತದೆ. ಅದರಲ್ಲೂ ತಂತ್ರಜ್ಞಾನ ಹಾಗೂ ಹಣಕಾಸಿನಂತಹ ಹೆಚ್ಚು ಆದಾಯ ನೀಡುವ ಜಾಹೀರಾತುಗಳಿಂದ ಹೆಚ್ಚಿನ ಹಣವನ್ನು ಗಳಿಸಬಹುದು ಎಂಬುದು ನಿಮ್ಮ ಗಮನಕ್ಕೆ ಇರಲಿ.
  • * ಹಾಗೆಯೇ ಈ ಆದಾಯವನ್ನು ಶಾರ್ಟ್ಸ್‌ ವಿಡಿಯೋ ಹಾಗೂ ದೀರ್ಘ ವಿಡಿಯೋಗಳನ್ನು ನೋಡುವ ಮೂಲಕ ಪಡೆದುಕೊಳ್ಳಬಹುದು. ವಿಷಯ ಏನೆಂದರೆ ನೀವು ಹಣ ಗಳಿಕೆ ಮಾಡುವ ಆಸೆಯಲ್ಲಿ ಯಾವುದೇ ಮೋಸದ ಚಟುವಟಿಕೆಯನ್ನು ಮಾಡಿದರೆ ಅಥವಾ ಅಂತಹ ಕಂಟೆಂಟ್‌ದ ಅನ್ನು ಹ್ಯಾಕ್ ಮಾಡಿದರೆ ತಕ್ಷಣವೇ ಈ ಪ್ರೋಗ್ರಾಂನಿಂದ ನಿಮ್ಮನ್ನು ನಿಷೇಧಿಸಲಾಗುತ್ತದೆ
YouTube ನಲ್ಲಿನ ವಿಡಿಯೋ ವೀಕ್ಷಣೆ ಮಾಡಿಕೊಂಡೇ ಹಣ ಗಳಿಸುವುದು ಹೇಗೆ ಗೊತ್ತಾ!?

ವೀಕ್ಷಕರ ಆದಾಯ ಹಂಚಿಕೆ ಕಾರ್ಯಕ್ರಮದ ಅಡಿಯಲ್ಲಿ ಯಾರಿಗೆ ಎಷ್ಟು?:ಈ ಯೂಟ್ಯೂಬ್‌ ಜಾಹೀರಾತು ಆದಾಯವನ್ನು ವೀಕ್ಷಕರಿಗೆ 10%, ಕಂಟೆಂಟ್‌ ಕ್ರಿಯೇಟರ್ಸ್‌ಗೆ 45% ಮತ್ತು ಯೂಟ್ಯೂಬ್‌ಗೆ 45% ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಯೂಟ್ಯೂಬ್‌ ವಿಡಿಯೋ ವೀಕ್ಷಣೆ ಮಾಡಿಕೊಂಡು ಸುಮ್ಮನೆ ಮನೆಯಲ್ಲಿ ಕೂರುವವರು ಸಹ ಹಣ ಸಂಪಾದನೆ ಮಾಡಬಹುದಾಗಿದೆ.

ಇನ್ನು ವೀಕ್ಷಕರು ತಮ್ಮ ಜಾಹೀರಾತು ಆದಾಯದ ಪಾಲನ್ನು ಸ್ವೀಕರಿಸಲು ಕೆವೈಸಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಹಣವನ್ನು ಆಟೋಮ್ಯಾಟಿಕ್‌ ಆಗಿ ಜಮಾ ಮಾಡಲಾಗುತ್ತದೆ. ಹಾಗೆಯೇ ಯುಪಿಐ ಐಡಿಗಳನ್ನು ಬಳಸಿಕೊಂಡು ಸಹ ಪಡೆಯಬಹುದಾಗಿದೆ. ಇನ್ನು ಈ ಆದಾಯ ಹಂಚಿಕೆಗೆ ಅರ್ಹತೆ ಪಡೆಯಲು ಪ್ರತಿ ವಿಡಿಯೋಗೆ ಕನಿಷ್ಠ $100 ಜಾಹೀರಾತು ಆದಾಯವನ್ನು ಉತ್ಪಾದಿಸಬೇಕು.

Best Mobiles in India

English summary
youtube newly launched Viewer Revenue Share program Phase II in India. in this program viewers can earn money watching videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+