Home
ಸುದ್ದಿಜಾಲ

Apple: ಆಪಲ್‌ ಐಫೋನ್ 12 ಹಾಗೂ M2 ಮ್ಯಾಕ್‌ಬುಕ್‌ ಏರ್‌ನಲ್ಲಿ ದೋಷ

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಆಪಲ್‌ ಐಫೋನ್‌ಗಳು (Apple iPhone) ಹೆಚ್ಚು ಭದ್ರತಾ ಫೀಚರ್ಸ್‌ ಹೊಂದಿರುತ್ತವೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಆದರೂ ಸಹ ಸ್ಕ್ಯಾಮರ್‌ಗಳು ಈ ಫೋನ್‌ಗಳ ಮೇಲೂ ದಾಳಿ ಮಾಡುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ.

ಹೌದು, ಐಫೋನ್ 12 ಹಾಗೂ M2 ಮ್ಯಾಕ್‌ಬುಕ್‌ ಏರ್ (Apple iPhone 12, M2 MacBook Air) ಡಿವೈಸ್‌ ಹೊಂದಿರುವ ಬಳಕೆದಾರರಿಗೆ ಈಗ ಭದ್ರತಾ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಸಂಶೋಧಕರು ಆಪಲ್‌ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಈ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದಾರೆ. ಹಾಗಿದ್ರೆ, ಈ ಎರಡು ಡಿವೈಸ್‌ಗಳಲ್ಲಿ ಯಾವ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಂಬಂಧ ಆಪಲ್ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

Apple: ಆಪಲ್‌ ಐಫೋನ್ 12 ಹಾಗೂ M2 ಮ್ಯಾಕ್‌ಬುಕ್‌ ಏರ್‌ನಲ್ಲಿ ದೋಷ

ಆಪಲ್‌ ಡಿವೈಸ್‌ಗಳಲ್ಲಿ ಸಮಸ್ಯೆ: ಆಪಲ್‌ ಐಫೋನ್ 12 ಮತ್ತು M2 ಮ್ಯಾಕ್‌ಬುಕ್ ಏರ್‌ಗಳು GPU ದುರ್ಬಲತೆಯನ್ನು ಹೊಂದಿವೆ ಎಂದು ತಿಳಿದುಬಂದಿದೆ. ಈ ದುರ್ಬಲತೆಯನ್ನು ದುರ್ಬಳಕೆ ಮಾಡಿಕೊಂಡರೆ, ಡಿವೈಸ್‌ನಲ್ಲಿನ ಡೇಟಾವನ್ನು ಪ್ರವೇಶಿಸಲು ಆಕ್ರಮಣಕಾರರಿಗೆ ಸುಲಭ ಅವಕಾಶ ಸಿಗಲಿದೆ ಎಂದು ಟ್ರಯಲ್ ಬಿಟ್ಸ್‌ ಭದ್ರತಾ ಸಂಶೋಧಕರು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹಾಗೂ ಆಪಲ್‌ಗೆ ಎಚ್ಚರಿಕೆ ನೀಡಿದ್ದಾರೆ.

ಲೆಫ್ಟ್‌ಓವರ್‌ಲೋಕಲ್ಸ್‌(LeftoverLocals) ಎಂದು ಹೆಸರಿಸಲಾದ ದುರ್ಬಲತೆಯು ಆಪಲ್‌, ಕ್ವಾಲ್ಕಾಮ್, ಎಎಮ್‌ಡಿ ಮತ್ತು ಇಮ್ಯಾಜಿನೇಷನ್‌ನಿಂದ ತಯಾರಿಸಲ್ಪಟ್ಟ ಗ್ರಾಫಿಕ್ ಪ್ರೊಸೆಸರ್ ಘಟಕಗಳಲ್ಲಿ (GPUs) ಕಾಣಿಸಿಕೊಂಡಿದೆ. ಈ ದುರ್ಬಲತೆ ಮೂಲಕ ಡಿವೈಸ್‌ಗಳಿಗೆ ಸ್ಥಳೀಯ ಪ್ರವೇಶವನ್ನು ಆಕ್ರಮಣಕಾರರು ಹೊಂದಿದ್ದಾರಂತೆ. ಜೊತೆಗೆ ಈ ವೇಳೆ ಡೇಟಾವನ್ನು ಹಿಂಪಡೆಯುವ ಶೋಷಣೆಯನ್ನು ಸಂಶೋಧಕರು ಯಶಸ್ವಿಯಾಗಿ ಕಂಡುಕೊಂಡಿದ್ದಾರೆ.

Apple: ಆಪಲ್‌ ಐಫೋನ್ 12 ಹಾಗೂ M2 ಮ್ಯಾಕ್‌ಬುಕ್‌ ಏರ್‌ನಲ್ಲಿ ದೋಷ

ಈ ಸಂಬಂಧ ಸಂಶೋಧಕರು ಈಗಾಗಲೇ ಆಪಲ್, ಕ್ವಾಲ್ಕಾಮ್ ಮತ್ತು ಇತರ ಸಂಬಂಧಿಸಿದ ಸಂಸ್ಥೆಗಳಿಗೆ ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಕೆಲವು ವರದಿಗಳ ಪ್ರಕಾರ ಆಪಲ್‌ ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅದರಲ್ಲೂ A17 ಮತ್ತು M3 ಚಿಪ್‌ಗಳಲ್ಲಿ ಕಾರ್ಯನಿರ್ವಹಿಸುವ ಡಿವೈಸ್‌ಗಳನ್ನು ಒಳಗೊಂಡಂತೆ ಈ ದುರ್ಬಲತೆಯಿಂದ ಪ್ರಭಾವಿತವಾದ ಐಫೋನ್ 12 ಮತ್ತು M2 ಮ್ಯಾಕ್‌ಬುಕ್ ಏರ್‌ ಸೇರಿದಂತೆ ಇನ್ನೂ ಹೆಚ್ಚಿನ ಆಪಲ್‌ ಡಿವೈಸ್‌ಗಳಿಗೆ ಭದ್ರತಾ ನವೀಕರಣವನ್ನು ಕಳುಹಿಸಲಾಗಿದ್ದು, ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಆಪಲ್‌ ಹೇಳಿಕೆ ನೀಡಿದೆ.

ಆದಾಗ್ಯೂ, ಐಫೋನ್ 12 ಮತ್ತು M2 ಮ್ಯಾಕ್‌ಬುಕ್ ಏರ್ ಇನ್ನೂ ಪ್ಯಾಚ್ ಆಗಿಲ್ಲ ಎಂದು ತಿಳಿದುಬಂದಿದ್ದು, ಈ ಎರಡು ಡಿವೈಸ್‌ಗಳು ಇನ್ನೂ ದುರ್ಬಲವಾಗಿವೆ ಎಂದು ಹೇಳಲಾಗಿದೆ. ಈ ಸಂಬಂಧ ಆಪಲ್‌ ಪ್ರಮುಖ ಮಾಧ್ಯಮ ವೆಬ್‌ಸೈಟ್‌ ಆದ ಡಿ ವೈರ್ಡ್‌ಗೆ ಮಾಹಿತಿ ನೀಡಿದೆ. ನಾವು ಜನವರಿ 10 ರಂದು ದುರ್ಬಲತೆಯನ್ನು ಮರು ಪರೀಕ್ಷಿಸಿದ್ದೇವೆ. ಅಲ್ಲಿ ಕೆಲವು ಡಿವೈಸ್‌ಗಳನ್ನು ಪ್ಯಾಚ್ ಮಾಡಲಾಗಿದೆ.

Apple: ಆಪಲ್‌ ಐಫೋನ್ 12 ಹಾಗೂ M2 ಮ್ಯಾಕ್‌ಬುಕ್‌ ಏರ್‌ನಲ್ಲಿ ದೋಷ

ಅದರಲ್ಲಿ ಆಪಲ್‌ ಐಪ್ಯಾಡ್‌ ಏರ್‌ 3rd G (A12) ಸೇರಿದಂತೆ ಇತರೆ ಡಿವೈಸ್‌ಗಳನ್ನು ಪ್ಯಾಚ್ ಮಾಡಲಾಗಿದ್ದು, ಆದಾಗ್ಯೂ ಕೆಲವು ಸಮಸ್ಯೆಯು ಇನ್ನೂ ಆಪಲ್‌ ಮ್ಯಾಕ್‌ಬುಕ್‌ ಏರ್‌(M2) ನಲ್ಲಿ ಕಂಡುಬರುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಆಪಲ್‌ ಐಫೋನ್‌ 15 ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಗಳಂತೆ ಪ್ರಭಾವಕ್ಕೆ ಒಳಗಾಗುವುದಿಲ್ಲ. ಯಾಕೆಂದರೆ A17 ಮತ್ತು M3 ಸರಣಿಯ ಪ್ರೊಸೆಸರ್‌ಗಳು ತಮ್ಮದೇ ಆದ ಪರಿಹಾರಗಳನ್ನು ಹೊಂದಿವೆ ಎಂದು ಆಪಲ್ ದೃಢಪಡಿಸಿದೆ.

ಟ್ರಯಲ್ ಆಫ್ ಬಿಟ್ಸ್‌ನ ಇಂಜಿನಿಯರಿಂಗ್ ನಿರ್ದೇಶಕರಾದ ಹೈಡಿ ಖ್ಲಾಫ್ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್‌ಗಳ ಬಗ್ಗೆ ಗಮನಾರ್ಹವಾದ ಸುರಕ್ಷತಾ ಕಾಳಜಿ ಇದೆ. ಅದು ಇರಬೇಕಾದಷ್ಟು ಸುರಕ್ಷಿತವಾಗಿಲ್ಲದಿರಬಹುದು, ಇದರಿಂದಾಗಿ ಗಣನೀಯ ಪ್ರಮಾಣದಲ್ಲಿ ಸೋರಿಕೆಯಾಗುವ ಸಾಧ್ಯತೆ ಇದೆ. ಸೋರಿಕೆಯಾದ ಡೇಟಾದ ಪ್ರಮಾಣವು 5 ಮೆಗಾಬೈಟ್‌ಗಳಿಂದ 180 ಮೆಗಾಬೈಟ್‌ಗಳವರೆಗೆ ಇರಬಹುದು, ಇದು ದೊಡ್ಡ ಮೊತ್ತವಾಗಿದೆ. ಒಂದು ಸಣ್ಣ ಸೋರಿಕೆ ಕೂಡ ಹಾನಿಕಾರಕವಾಗಬಹುದು ಎಂದಿದ್ದಾರೆ.

Best Mobiles in India

English summary
Users with Apple iPhone 12 and M2 MacBook Air devices have now received a security warning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+