Home
ಸುದ್ದಿಜಾಲ

ಫ್ಯಾಶನ್‌ ಲೋಕಕ್ಕೆ ಹೊಸತು!..ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಡಿಜಿಟಲ್ ಸ್ಕ್ರೀನ್‌!

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಉತ್ಪನ್ನಗಳು ಸ್ಮಾರ್ಟ್‌ ಲುಕ್‌ ಕಾಣಿಸಿಕೊಳ್ಳುತ್ತಿದ್ದು, ಅಗತ್ಯ ಎಲ್ಲ ಉತ್ಪನ್ನಗಳು ಡಿಜಿಟಲ್‌ ರೂಪದಲ್ಲಿ ಪಡೆದುಕೊಳ್ಳುತ್ತಿವೆ. ಏಕೆಂದರೇ ಮನುಷ್ಯನಲ್ಲಿ ಡಿಜಟಲೀಕರಣ ಬೇರೆತುಕೊಂಡಿದೆ. ಅದಕ್ಕೆ ಪ್ರಮುಖ ಫ್ಯಾಶನ್ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸ್ಮಾರ್ಟ್‌ ಆಗಿ ಬದಲಾಯಿಸುತ್ತಿವೆ. ಹಾಗೇ ಇದೀಗ ಹೆಸರಾಂತ ಫ್ಯಾಶನ್ ಬ್ರ್ಯಾಂಡ್ ಕಂಪನಿ ಲೂಯಿ ವಿಟಾನ್ (Louis Vuitton) ಸಹ ತನ್ನ ಉತ್ಪನ್ನಗಳನ್ನು ಸ್ಮಾರ್ಟ್‌ ಲುಕ್‌ನಲ್ಲಿ ಪರಿಚಯಿಸಲು ಮುಂದಾಗಿದೆ.

ಫ್ಯಾಶನ್‌ ಲೋಕಕ್ಕೆ ಹೊಸತು!.ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಡಿಜಿಟಲ್ ಸ್ಕ್ರೀನ್!

ಹೌದು, ಲೂಯಿ ವಿಟಾಸ್ ಫ್ಯಾಶನ್ ಕಂಪನಿಯು ಈಗಾಗಲೇ ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು, ಇತ್ತೀಚಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಕ್ರೂಸ್‌ 2020 ಫ್ಯಾಶನ್ ಶೋನಲ್ಲಿ ಕಂಪನಿಯು ತನ್ನ ಎರಡು ಪರ್ಸ್‌ಗಳನ್ನು ಪ್ರದರ್ಶಿಸಿದ್ದು, ಅವು ಡಿಸ್‌ಪ್ಲೇ ಸ್ಕ್ರೀನ್‌ ಹೊಂದಿವೆ. ಆ ಎರಡು ಪರ್ಸ್‌ಗಳು ಮಹಿಳೆಯರಿಗಾಗಿ ತಯಾರಿಸಲಾಗಿದ್ದು, ಅವುಗಳ ಹೊರಭಾಗದಲ್ಲಿ ಫ್ಲೆಕ್ಸಿಬಲ್ ಸ್ಕ್ರೀನ್‌ ಅಳವಡಿಸಲಾಗಿದ್ದು, ಮಹಿಳೆಯರನ್ನು ಆಕರ್ಷಸುತ್ತಿವೆ.

ಫ್ಯಾಶನ್‌ ಲೋಕಕ್ಕೆ ಹೊಸತು!.ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಡಿಜಿಟಲ್ ಸ್ಕ್ರೀನ್!

ಪರ್ಸ್‌ನ ಎರಡು ಬದಿಯಲ್ಲಿ ಫ್ಲೆಕ್ಸಿಬಲ್ ಸ್ಕ್ರೀನ್‌ ನೀಡಿರುವುದು ಭವಿಷ್ಯದ ಡಿಜಿಟಲ್ ಕ್ಯಾನ್ವಾಸ್‌ ಪರಿಕಲ್ಪನೆ ಮುನ್ನುಡಿ ಆಗಿದೆ ಮತ್ತು ಕಂಪನಿಯು ಫ್ಯಾಶನ್‌ನಲ್ಲಿ ಸದಾ ಹೊಸ ಪ್ರಯತ್ನಗಳನ್ನು ಪರಿಚಯಿಸುತ್ತದೆ ಎಂಬುದನ್ನು ಲೂಯಿಸ್ ವಿಟಾನ್ ಕಂಪನಿಯು ತಿಳಿಸಿದೆ. ಹಾಗಾದರೇ ಲೂಯಿಸ್ ವಿಟಾನ್ ಕಂಪನಿಯ ಈ ಡಿಜಿಟಲ್ ಪರ್ಸ್‌ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ ಹಾಗೂ ಕೊನೆಯಲ್ಲಿ ವಿಡಿಯೊ ನೋಡಿರಿ.

ಲೂಯಿಸ್ ವಿಟಾನ್

ಲೂಯಿಸ್ ವಿಟಾನ್

ಎಲ್‌ವಿ ಎಂದೇ ಜನಪ್ರಿಯ ಪಡೆದಿರುವ ಈ ಕಂಪನಿಯು ವಿಶ್ವಮಟ್ಟದ ಫ್ಯಾಶನ್ ಬ್ರ್ಯಾಂಡ್ ಆಗಿದ್ದು, ಈ ಕಂಪನಿಯು 1854ರಲ್ಲಿ ಆರಂಭವಾಗಿದೆ. ಉನ್ನತ ಗುಣಮಟ್ಟದ ಫ್ಯಾಶನ್ ಉತ್ಪನ್ನಗಳನ್ನು ಪರಿಚಯಿಸಿ ಹೆಸರುವಾಸಿಯಾಗಿರುವ ಈ ಕಂಪನಿಯ ಉತ್ಪನ್ನಗಳು ದುಬಾರಿ ಬೆಲೆಯನ್ನು ಹೊಂದಿವೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಲೂಯಿಸ್ ಕಂಪನಿಯ ಹೊಸ ಪರ್ಸ್‌ ಮಾದರಿಗಳಲ್ಲಿ ಫ್ಲೆಕ್ಸಿಬಲ್ ಸ್ಕ್ರೀನ್ ಅಳವಡಿಸಲಾಗಿದ್ದು, ಸ್ಕ್ರೀನ್ ಪರ್ಸ್‌ನ ಹೊರಭಾಗದಲ್ಲಿ ಇವೆ. ಒಂದು ಬದಿ ಪೂರ್ಣ ಸ್ಕ್ರೀನ್ ಅಳವಡಿಸಲಾಗಿದೆ ಮತ್ತು ಇನ್ನೊಂದು ಬದಿ ಎರಡು ಸ್ಕ್ರೀನ್‌ಗಳನ್ನು ನೀಡಲಾಗಿದೆ. ಸ್ಕ್ರೀನ್‌ 1920 x 1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದ್ದು, ಪೂರ್ಣ AMOLED ಮಾದರಿಯಲ್ಲಿದೆ.

ಡಿಜಿಟಲ್ ಕ್ಯಾನ್ವಾಸ್‌ ಪರಿಕಲ್ಪನೆ

ಡಿಜಿಟಲ್ ಕ್ಯಾನ್ವಾಸ್‌ ಪರಿಕಲ್ಪನೆ

ಲೂಯಿಸ್‌ ವಿಟಾನ್ ಕಂಪನಿಯು ತಯಾರಿಸಿರುವ ಈ ಡಿಜಿಟಲ್ ಪರ್ಸ್‌ ಫ್ಯಾಶನ ಆಧಾರಿತವಾಗಿದ್ದರೂ ಅದು ಭವಿಷ್ಯದ ಡಿಜಿಟಲ್ ಕ್ವಾನ್ವಾಸ್ ಪರಿಕಲ್ಪನೆ ಎಂಬುದನ್ನು ಕಂಪನಿಯು ತಿಳಿಸಿದೆ. ಮುಂದೊಂದು ದಿನ ಕ್ಯಾನ್ವಾಸ್‌ಗಾಗಿ ಈ ತರಹದ ಉತ್ಪನ್ನಗಳು ಬಳಕೆಗೆ ಬರುವುದರಲ್ಲಿ ಆಶ್ವರ್ಯವೆನಿಲ್ಲ ಎನಿಸುತ್ತದೆ.

ಸ್ಮಾರ್ಟ್‌ಫೋನ್‌ನ ಮುಂದುವರಿದ ಭಾಗ

ಸ್ಮಾರ್ಟ್‌ಫೋನ್‌ನ ಮುಂದುವರಿದ ಭಾಗ

ಹ್ಯಾಂಡ್‌ಬ್ಯಾಗ್‌ಗಳಲ್ಲಿ ಸ್ಕ್ರೀನ್‌ ನೀಡುತ್ತಿರುವುದು ಸ್ಮಾರ್ಟ್‌ಫೋನ್‌ಗಳ ಮುಂದುವರಿದ ಭಾಗ ಎನ್ನಲಾಗುತ್ತಿದೆ. ಸದ್ಯ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರರು ಅಂತೆಯೇ ಈ ಹ್ಯಾಂಡ್‌ಬ್ಯಾಗ್‌ಗಳು ಸ್ಮಾರ್ಟ್‌ಫೋನಿನಂತೆ ಗ್ರಾಹಕರನ್ನು ಸೆಳೆಯಲಿವೆ ಎನ್ನುವ ವಿಶ್ವಾಸವನ್ನು ಕಂಪನಿ ಹೊರಹಾಕಿದೆ.

ವಿಡಿಯೊ ಪ್ಲೇ ಆಯ್ಕೆ

ವಿಡಿಯೊ ಪ್ಲೇ ಆಯ್ಕೆ

ಮಹಿಳೆಯರ ಈ ಸ್ಕ್ರೀನ್ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿರಲಿದ್ದು, ವಿಶಾಲಾದ ಆಕಾರದಲ್ಲಿಯರಲಿದೆ. ಜೊತೆಗೆ ಸ್ಕ್ರೀನ್‌ನಲ್ಲಿ ಒಂದೇ ಚಿತ್ರವಿರುವುದಿಲ್ಲ ಬದಾಲಾಗಿ ಗ್ರಾಹಕರು ತಮ್ಮಿಷ್ಟದಂತೆ ಸ್ಕ್ರೀನ್ ಬದಲಾಯಿಸಬಹುದು. ವಿಡಿಯೊಗಳು ಸಹ ಪ್ಲೇ ಮಾಡಬಹುದಾದ ಆಯ್ಕೆ ಸಹ ಇರಲಿದೆ ಎನ್ನಲಾಗಿದೆ.

Best Mobiles in India

English summary
Want something new? See this Louis Vuitton purse with screen.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+