ನಿಮ್ಮ ಫೋನಿನಲ್ಲಿ ಅತ್ಯುತ್ತಮವಾಗಿ ಫೋಟೊ ಸೆರೆಹಿಡಿಯಲು ಈ ಟಿಪ್ಸ್ ಅನುಸರಿಸಿ!

|

ಪ್ರಸ್ತುತ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್ ನೀಡಲಾಗುತ್ತಿದೆ. ಈಗಿನ ಅಧಿಕ ಕ್ಯಾಮೆರಾ ಸೆನ್ಸಾರ್‌ನ ಫೋನ್‌ಗಳಲ್ಲಿ ಸೆರೆಹಿಡಿಯುವ ಫೋಟೊಗಳು ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿನ ಫೋಟೊಗಳಂತೆ ಕಾಣಿಸುತ್ತವೆ. ಹೀಗಾಗಿ ಸದ್ಯ ಯಾವಾಗಲೂ ನಮ್ಮ ಜೊತೆಗೆ ಇರುವ ಸ್ಮಾರ್ಟ್‌ಫೋನ್‌ ಮೂಲಕ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯಬಹುದಾಗಿದೆ.

ನೆನಪುಗಳ

ಹೌದು, ಫೋಟೊಗಳು ನೆನಪುಗಳ ಬುತ್ತಿಯನ್ನು ಕಟ್ಟಿಕೊಡುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಬಳಿ ಇರುವ ಫೋನ್‌ಗಳಲ್ಲಿ ಫೋಟೊ ಕ್ಲಿಕ್ಕಿಸುತ್ತಾರೆ. ಆದರೆ ಬಳಕೆದಾರರು ತಮ್ಮ ಬಳಿ ಇರುವ ಸ್ಮಾರ್ಟ್‌ಫೋನಿನಲ್ಲಿಯೇ ಬೆಸ್ಟ್ ಸೆಲ್ಫಿ ಫೋಟೊ ಸೆರೆ ಹಿಡಿಯಬಹುದಾಗಿದೆ. ಆದರೆ ಫೋಟೊ ಕ್ಲಿಕ್ಕಿಸುವಾಗ ಫೋಟೊಗ್ರಫಿ ಬೇಸಿಕ್ ಕ್ರಮಗಳನ್ನು ಮರೆಯದೆ ಅನುಸರಿಸಬೇಕು. ಜೊತೆಗೆ ಕ್ರಿಯೆಟಿವ್ ಆದ ಐಡಿಯಾಗಳಿರಬೇಕು. ಇವೆರಡರ ಸಮ್ಮಿಶ್ರಣದಿಂದ ಖಂಡಿತಾ ಅತ್ಯುತ್ತಮ ಫೋಟೊಗಳು ಮೂಡಿಬರಲು ಸಾಧ್ಯವಿದೆ. ಹಾಗಾದರೆ ಫೋನ್‌ ಮೂಲಕ ಒಬ್ಬ ಛಾಯಾಗ್ರಹಕನಂತೆ ಬೆಸ್ಟ್‌ ಫೋಟೊ ಸೆರೆಹಿಡಿಯಲು ಯಾವೆಲ್ಲಾ ಟಿಪ್ಸ್ ಅನುಸರಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಬೆಳಕಿನ ಆಟ

ಬೆಳಕಿನ ಆಟ

ಫೋಟೊಗ್ರಫಿಯಲ್ಲಿ ಬೆಳಕು ಪ್ರಮುಖ ಪಾತ್ರವಹಿಸುತ್ತದೆ. ಒಂದು ಅತ್ಯುತ್ತಮ ಫೋಟೊದಲ್ಲಿ ಯಾವ ರೀತಿಯ ಬೆಳಕು, ಅದು ಎಷ್ಟು, ಮತ್ತು ಅದು ಯಾವ ದಿಕ್ಕಿನಲ್ಲಿ ಮೂಡುತ್ತದೆ ಎಂಬುದು ನಿರ್ಣಾಯಕ. ನೈಸರ್ಗಿಕ ಬೆಳಕಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯಬಹುದು. ಮುಖ್ಯವಾಗಿ ದಿನದ ಪ್ರಾರಂಭ ತಿಳಿಬೆಳಕು ಮತ್ತು ಸೂರ್ಯಾಸ್ತದ ಬೆಳಕಿನಲ್ಲಿ ಫೋಟೊಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ.

ರೂಲ್‌ ಆಫ್‌ ಥರ್ಡ್ಸ್

ರೂಲ್‌ ಆಫ್‌ ಥರ್ಡ್ಸ್

ಫೋಟೊ ಸೆರೆಹಿಡಿಯುವಾಗ ಮುಖ್ಯ ವ್ಯಕ್ತಿಯ/ಫೋಕಸ್‌ ವಸ್ತುವನ್ನು ಎಡ ಅಥವಾ ಬಲ ಭಾಗದ ಒಂದು ಬದಿಯಲ್ಲಿ ಕಾಣುವಂತೆ ಮಾಡಿ ಫೋಟೊ ಕ್ಲಿಕ್ಕಿಸುವುದೇ ಈ ನಿಯಮವಾಗಿದೆ. ಫೋಟೊಗ್ರಫಿಯಲ್ಲಿ ಬಹುತೇಕರು ಈ ನಿಯಮ ಪಾಲನೆ ಮಾಡುತ್ತಾರೆ. ಈ ರೀತಿ ಸೆರೆಹಿಡಿಯುವ ಫೋಟೊಗಳು ಆಕರ್ಷಕ ಅನಿಸುತ್ತವೆ.

ಕ್ಯಾಮೆರಾ ಕಾಳಜಿ

ಕ್ಯಾಮೆರಾ ಕಾಳಜಿ

ಅತ್ಯುತ್ತಮ ಫೋಟೊ ಸೆರೆಹಿಡಿಯಬೇಕೆಂದರೇ ಕ್ರಿಯೆಟಿವ್ ಐಡಿಯಾಗಳಿರಬೇಕು ಜೊತೆಗೆ ಸೂಕ್ತ ವಾತಾವರಣ ಆಯ್ಕೆ ಮಾಡಬೇಕು. ಇವುಗಳ ಜೊತೆಗೆ ಒಬ್ಬ ಛಾಯಾಚಿತ್ರಗಾರನಿಗೆ ಅವರು ಬಳಸುವ ಕ್ಯಾಮೆರಾ ಸ್ವಚ್ಛತೆಯ ಬಗ್ಗೆಯು ಗಮನ ನೀಡಬೇಕು. ಲೆನ್ಸ್‌ಗಳ ಬಗ್ಗೆ ಕಾಳಜಿ ಇರಬೇಕು ಅವುಗಳು ಸ್ವಚ್ಛವಿಲ್ಲದಿದ್ದರೇ ಫೋಟೊ ಉತ್ತಮವಾಗಿ ಮೂಡಲು ಹೇಗೆ ಸಾಧ್ಯ.?

ಕ್ಯಾಮೆರಾ ಸ್ಥಿರವಾಗಿರಲಿ ಹಿಡಿಯಿರಿ

ಕ್ಯಾಮೆರಾ ಸ್ಥಿರವಾಗಿರಲಿ ಹಿಡಿಯಿರಿ

ಫೋಟೊ ಕ್ಲಿಕ್ಕಿಸುವಾಗ ಕ್ಯಾಮೆರಾವನ್ನು ಸ್ಥಿರವಾಗಿ ಹಿಡಿಯಬೇಕು. ಒಂದು ವೇಳೆ ಕ್ಯಾಮೆರಾ ಶೇಕ್ ಮಾಡಿದರೇ ಫೋಟೊಗಳು ಬ್ಲರ್ ಆಗಿ ಮೂಡಿಬರುವ ಸಾಧ್ಯತೆಗಳು ಇರುತ್ತವೆ. ಕೈಯಿಂದ ಕ್ಯಾಮೆರಾ ಸ್ಥಿರವಾಗಿ ಹಿಡಿಯಲು ಅನುಕೂಲ ಅನಿಸದಿದ್ದರೇ ಟ್ರೈಪಾಡ್ ಬಳಕೆ ಮಾಡುವುದು ಉತ್ತಮ.

ರೆಸಲ್ಯೂಶನ್ ಉತ್ತಮವಾಗಿರಲಿ

ರೆಸಲ್ಯೂಶನ್ ಉತ್ತಮವಾಗಿರಲಿ

ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುವಾಗ ಫೋಟೊಗಳ ರೆಸಲ್ಯೂಶನ್ ಬಗ್ಗೆಯೂ ಹೆಚ್ಚು ಗಮನ ನೀಡಬೇಕಿರುತ್ತದೆ. ರೆಸಲ್ಯೂಶನ್ ಉತ್ತಮವಾಗಿದ್ದರೇ ಫೋಟೊಗಳ ಸ್ಪಷ್ಟತೆ ಹೆಚ್ಚಿರುತ್ತದೆ ಹಾಗೂ ಹೈ ರೆಸಲ್ಯೂಶನ್ ಇದ್ದರೇ ಪಿಕ್ಸಲ್ ಒಡೆಯುವುದಿಲ್ಲ.

ಹೆಚ್ಚಿನ ಫೋಟೊ ಕ್ಲಿಕ್ಕಿಸಿ

ಹೆಚ್ಚಿನ ಫೋಟೊ ಕ್ಲಿಕ್ಕಿಸಿ

ವೃತ್ತಿಪರ ಛಾಯಾಗ್ರಾಹಕ ಒಂದು ಫೋಟೊ ಸೆರೆಹಿಡಿಯುವಾಗ ಹೆಚ್ಚಿನ ಕ್ಲಿಕ್ಕ್‌ಗಳನ್ನು ಮಾಡಿರುತ್ತಾರೆ. ಅವುಗಳಲ್ಲಿ ಅತ್ಯುತ್ತಮವಾದ ಒಂದೆರಡನ್ನು ಫೈನಲ್ ಮಾಡುತ್ತಾರೆ. ಹಾಗೆಯೇ ಫೋಟೊ ಸೆರೆಹಿಡಿಯುವಾಗ ಕೇವಲ ಒಂದೇ ಕ್ಲಿಕ್ ಮಾಡುವ ಬದಲು ಕೆಲವು ಹೆಚ್ಚಿನ ಕ್ಲಿಕ್ ಮಾಡಿಕೊಳ್ಳಿ ಮತ್ತು ನಂತರ ಅವುಗಳಲ್ಲಿ ಅತ್ಯುತ್ತವಾದ ಒಂದು ಅಥವಾ ಎರಡು ಫೋಟೊಗಳನ್ನು ಆಯ್ದುಕೊಳ್ಳಿರಿ.

ಫೋಟೊ ಕಥೆ ಹೇಳುವಂತಿರಲಿ

ಫೋಟೊ ಕಥೆ ಹೇಳುವಂತಿರಲಿ

ಒಂದು ಫೋಟೊ ಸಾವಿರ ಪದಗಳಿಗೆ ಸಮ ಎಂದು ಹೇಳುತ್ತಾರೆ. ಮಾತಿನಲ್ಲಿ ಹೇಳಲಾಗದ್ದುನ್ನು ಚಿತ್ರದಲ್ಲಿ ಅರ್ಥೈಸಬಹುದು. ಹೀಗಾಗಿ ಫೋಟೊ/ಚಿತ್ರ ಬಹಳ ಮುಖ್ಯ. ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಫೋಟೊಗಳನ್ನು ಸೆರೆಹಿಡಿಯಿರಿ. ನೀವು ಸೆರೆಹಿಡಿಯುವ ಫೋಟೊಗಳು ಒಂದು ವಿಷಯದ ಮೇಲೆ ಬೆಳಕು ಚೆಲ್ಲುವಂತಿರಲಿ.

ಕ್ಯಾಮೆರಾ ಸೆಟ್ಟಿಂಗ್‌ ಬಳಸಿ

ಕ್ಯಾಮೆರಾ ಸೆಟ್ಟಿಂಗ್‌ ಬಳಸಿ

ನಿಮ್ಮ ಫೋನ್‌ನಲ್ಲಿ ಕ್ಯಾಮೆರಾ ಸೆಟ್ಟಿಂಗ್ ಆಯ್ಕೆಯನ್ನು ಬಳಸಿ. ಏಕೆಂದರೇ ಫೋನ್‌ಗಳಲ್ಲಿ ಅತ್ಯುತ್ತಮ ಫೋಟೊಗ್ರಫಿಗಾಗಿ ಕೆಲವು ವಿಶೇಷ ಆಯ್ಕೆಗಳನ್ನು ನೀಡಿರುತ್ತಾರೆ. ನಿಮ್ಮ ಪ್ರದೇಶಕ್ಕೆ ಹಾಗೂ ಫೋಟೊ ಸೆರೆಹಿಡಿಯುವ ಸನ್ನಿವೇಶಕ್ಕೆ ಅನುಗುಣವಾಗಿ ಕ್ಯಾಮೆರಾ ಸೆಟ್ಟಿಂಗ್ ಬಳಕೆ ಮಾಡಿ ಫೋಟೊ ಕ್ಲಿಕ್ಕಿಸಿದರೇ ಖಂಡಿತಾ ಬೆಸ್ಟ್ ಫೋಟೊ ಮೂಡಿಬರಲು ಸಾಧ್ಯ.

ಆಪ್‌ ಬಳಸಿ

ಆಪ್‌ ಬಳಸಿ

ಅತ್ಯುತ್ತಮ ಫೋಟೊಗ್ರಫಿಗಾಗಿ ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪ್‌ ಸ್ಟೋರ್‌ಗಳಲ್ಲಿ ಪ್ರಸ್ತುತ ಆಪ್‌ಗಳು ಲಭ್ಯ ಇವೆ. ಬಳಕೆದಾರರು ಈ ಆಪ್‌ಗಳ ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಫೋಟೊ ಫೋಕಸ್ ಮಾಡಬಹುದು ಹಾಗೂ ಉತ್ತಮ ಫೋಟೊ ಸೆರೆಹಿಡಿಯಬಹುದು. ಐಓಎಸ್‌ನಲ್ಲಿ ಕ್ಯಾಮೆರಾ ಪ್ಲಸ್‌ ಆಪ್‌ ಇದೆ. ಹಾಗೆಯೇ ಆಂಡ್ರಾಯ್ಡ್‌ ಫೋನ್‌ಗಾಗಿ ಪ್ರೊಕ್ಯಾಪ್ಚರ್ ಆಪ್ ಇದೆ.

ಫೋಟೊ ಎಡಿಟ್ ಮಾಡಿ

ಫೋಟೊ ಎಡಿಟ್ ಮಾಡಿ

ಫೋಟೊ ಸೆರೆಹಿಡಿದ ಮೇಲೆ ಅವುಗಳ ಅಂದ ಇನ್ನಷ್ಟು ಹೆಚ್ಚು ಮಾಡಲು ಫೋಟೋ ಎಡಿಟಿಂಗ್ ಮಾಡಬಹುದು. ಫೋಟೊ ಎಡಿಟ್ ಮಾಡುವುದೇನು ದೊಡ್ಡ ಸಂಗತಿಯಲ್ಲ. ಏಕೆಂದರೇ ಸದ್ಯ ಫೋಟೊ ಎಡಿಟ್ ಮಾಡಲು ಹಲವು ಆಪ್‌ಗಳು ಲಭ್ಯ ಇವೆ. ಇವುಗಳ ಮೂಲಕ ಫೋಟೊಗಳನ್ನು ಇನ್ನಷ್ಟು ಉತ್ತಮಗೊಳಿಸಬಹುದು.

Most Read Articles
Best Mobiles in India

English summary
Want To Becoming An Expert Smartphone Photographer: Follow These 10 Tips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X