Home
ಸುದ್ದಿಜಾಲ

ಮೊಬೈಲ್‌ ಚಾರ್ಜರ್‌ ಖರೀದಿಸುವಾಗ ಈ ತಪ್ಪು ಮಾಡದಿರಿ!..ಯಾಕೆ ಗೊತ್ತಾ?

ಸದ್ಯ ಮೊಬೈಲ್‌ ಎಷ್ಟು ಅಗತ್ಯ ಸಾಧನ ಆಗಿದೆಯೋ, ಮೊಬೈಲ್‌ ಚಾರ್ಜರ್‌ ಅದಕ್ಕೆ ಪೂರಕ ಅಗತ್ಯ ಆಕ್ಸಸರಿಸ ಆಗಿದೆ. ಬಜೆಟ್‌ ಬೆಲೆಯ ಅಥವಾ ದುಬಾರಿ ಬೆಲೆಯ ಯಾವುದೇ ಮೊಬೈಲ್‌ ಖರೀದಿಸಿದರೂ ಅದಕ್ಕೆ ಚಾರ್ಜರ್‌ ಅವಶ್ಯ. ಅದಾಗ್ಯೂ, ಕೆಲವೊಮ್ಮೆ ಯಾವುದೋ ಕಾರಣಕ್ಕೆ ಮೊಬೈಲ್‌ ಚಾರ್ಜರ್‌ ಕಳೆದುಹೋಗಬಹುದು ಅಥವಾ ಹಾನಿ ಆಗುವ ಸಾಧ್ಯತೆ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಬಳಕೆದಾರರು ಹೊಸ ಚಾರ್ಜರ್‌ ಖರೀದಿಸಲು ಮುಂದಾಗುತ್ತಾರೆ.

ಆದರೆ ಮೊಬೈಲ್‌ಗೆ ಚಾರ್ಜರ್‌ ಖರೀದಿಸುವಾಗ ಕೆಲವು ಅಂಶಗಳನ್ನು ಮರೆಯದೆ ಗಮನಿಸಬೇಕಿರುತ್ತದೆ. ನೀವು ಖರೀದಿಸುವ ಚಾರ್ಜರ್‌ ನಿಮ್ಮ ಮೊಬೈಲ್‌ಗೆ ಸರಿಹೊಂದುವಂತಿರಬೇಕು. ಆ ಚಾರ್ಜರ್‌ನ ವಾಟ್ಸ್‌ ಬಗ್ಗೆ ಗಮನಿಸಬೇಕು. ಇದರೊಂದಿಗೆ ಸುರಕ್ಷತೆಯ ಅಂಶಗಳ ಬಗ್ಗೆಯೂ ಗಮನ ನೀಡುವುದು ಸೂಕ್ತ ಎನಿಸುತ್ತದೆ. ಹಾಗಾದರೆ ನೀವೇನಾದರೂ ನಿಮ್ಮ ಆಂಡ್ರಾಯ್ಡ್‌ ಫೋನಿಗೆ ಹೊಸದಾಗಿ ಮೊಬೈಲ್‌ ಚಾರ್ಜರ್‌ ಖರೀದಿ ಮಾಡುವ ಯೋಚನೆ ಮಾಡಿದ್ರೆ, ಈ ಅಂಶಗಳನ್ನು ಒಮ್ಮೆ ಗಮನಿಸಿ. ಮುಂದೆ ಓದಿರಿ.

ಮೊಬೈಲ್‌ ಚಾರ್ಜರ್‌ ಖರೀದಿಸುವಾಗ ಈ ತಪ್ಪು ಮಾಡದಿರಿ!..ಯಾಕೆ ಗೊತ್ತಾ?

ನಿಮಗೆ ಅಗತ್ಯ ಇರುವ ಚಾರ್ಜಿಂಗ್ ಬಗ್ಗೆ ತಿಳಿದಿರಿ : ಚಾರ್ಜರ್‌ ಖರೀದಿಸುವ ಮುನ್ನ ಚಾರ್ಜಿಂಗ್‌ ಅಗತ್ಯಗಳ ಬಗ್ಗೆ ತಿಳಿಯುವುದು ಅಗತ್ಯ. ನಿಮ್ಮ ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು, ನೀವು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜಿಂಗ್ ಹಾಕುವಿರಿ ಎಂಬುದನ್ನು ಗಮನಿಸಬೇಕು. ಒಂದು ವೇಳೆ ನೀವು ಹೆಚ್ಚು ಪ್ರಯಾಣ ಮಾಡುವವರಾಗಿದ್ದರೆ, ಪೋರ್ಟಬಲ್ ಚಾರ್ಜರ್ ನಿಮಗೆ ಬೇಕಾಗಬಹುದು. ಒಂದು ವೇಳೆ ಕಚೇರಿ ಅಥವಾ ವರ್ಕ ಫ್ರಂ ಹೋಮ್ ಕೆಲಸ ಮಾಡುವಿರಾದರೆ, ಡೆಸ್ಕ್‌ಟಾಪ್‌ ಚಾರ್ಜರ್‌ ಸೂಕ್ತ ಎನಿಸುತ್ತದೆ.

ಚಾರ್ಜರ್‌ನ ಸ್ಪೇಡ್‌ ಪರಿಗಣಿಸಿ : ಎಲ್ಲಾ ಮೊಬೈಲ್‌ ಚಾರ್ಜರ್‌ಗಳು ಒಂದೇ ಸಮಾನವಾಗಿ ಇರುವುದಿಲ್ಲ. ಅವುಗಳ ಚಾರ್ಜಿಂಗ್ ವೇಗ, ಸಾಮರ್ಥ್ಯ ಭಿನ್ನವಾಗಿರುತ್ತವೆ. ಹೀಗಾಗಿ ಫೋನ್‌ ಚಾರ್ಜ್ ಮಾಡುವ ತೆಗೆದುಕೊಳ್ಳುವ ಸಮಯ ಪ್ರಮುಖವಾಗಿರುತ್ತದೆ. ವೇಗವಾದ ಚಾರ್ಜಿಂಗ್‌ಗೆ ಕ್ವಿಕ್‌ ಚಾರ್ಜ್‌ ತಂತ್ರಜ್ಞಾನ ಸಪೋರ್ಟ್‌ ಮಾಡುವ ಚಾರ್ಜರ್‌ಗಳು ಸೂಕ್ತ. ಅಂದಹಾಗೆ ಇಂದಿನ ಬಹುತೇಕ ಚಾರ್ಜರ್‌ಗಳು ತ್ವರಿತ ಚಾರ್ಜ್‌ ಸಪೋರ್ಟ್‌ ಮಾಡುವ ನಿಟ್ಟಿನಲ್ಲಿ ರಚಿತವಾಗಿತ್ತವೆ.

ಚಾರ್ಜರ್‌ ವಿಧದ ಬಗ್ಗೆ ಗಮನಿಸಿ : ಪ್ರಸ್ತುತ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಚಾರ್ಜರ್‌ಗಳು ಲಭ್ಯ. ಕಾರ್‌ ಚಾರ್ಜರ್‌, ವಾಲ್‌ ಚಾರ್ಜರ್‌, ಪೋರ್ಟಬಲ್ ಚಾರ್ಜರ್‌, ವೈರ್‌ಲೆಸ್‌ ಚಾರ್ಜರ್‌, ಸಾಮಾನ್ಯ ಚಾರ್ಜರ್‌ ಹೀಗೆ ವಿವಿಧ ಮಾದರಿಗಳಲ್ಲಿ ಖರೀದಿಗೆ ಲಭ್ಯ ಇವೆ. ಹೀಗಾಗಿ ನಿಮ್ಮ ಅನುಕೂಲತೆಗೆ ಅನುಸಾರವಾಗಿ ಸೂಕ್ತ ಚಾರ್ಜರ್ ಆಯ್ಕೆ ಮಾಡಿರಿ. ಇನ್ನು ವೈರ್‌ಲೆಸ್‌ ಚಾರ್ಜರ್‌ಗಳು ಭೌತಿಕ ಕನೆಕ್ಟಿವಿಟಿ ಇಲ್ಲದೆ ನಿಮ್ಮ ಫೋನಿಗೆ ಪವರ್‌ ಭರ್ತಿ ಮಾಡುವ ಸಾಮರ್ಥ್ಯ ಒಳಗೊಂಡಿರುತ್ತವೆ.

ರಿವ್ಯೂವ್‌ ಬಗ್ಗೆ ಹಾಗೂ ಸುರಕ್ಷತಾ ಫೀಚರ್ಸ್‌ ಬಗ್ಗೆ ಚೆಕ್ ಮಾಡಿ : ಯಸ್‌, ನೀವು ಮೊಬೈಲ್‌ ಚಾರ್ಜರ್ ಖರೀದಿ ಮಾಡುವಾಗ ಸುರಕ್ಷತಾ ಅಂಶಗಳ ಬಗ್ಗೆ ಗಮನ ನೀಡುವುದು ಉತ್ತಮ. ಇನ್ನು ಚಾರ್ಜರ್‌ ಕಾರ್ಯವೈಖರಿ ಹೇಗೆ ಎಂದು ತಿಳಿಯಲು ಈಗಾಗಲೇ ಆ ಚಾರ್ಜರ್ ಖರೀದಿಸಿದ ಗ್ರಾಹಕರ ರಿವ್ಯೂವ್‌/ ವಿಮರ್ಶೆಗಳನ್ನು ಆನ್‌ಲೈನ್‌ನಲ್ಲಿ ತಿಳಿಯುವುದು. ಹಾಗೆಯೇ ಓವರ್-ಚಾರ್ಜ್ ರಕ್ಷಣೆ, ಶಾರ್ಟ್-ಸರ್ಕ್ಯೂಟ್ ರಕ್ಷಣೆ ನಂತಹ ಅವಘಡಗಳಿಂದ ಸುರಕ್ಷಿತವಾಗಿದೆಯೇ ಗಮನಿಸಿ.

ಬ್ರ್ಯಾಂಡ್‌ ಮತ್ತು ಬೆಲೆಗಳ ಬಗ್ಗೆ ಗಮನ ನೀಡಿ : ನೂತನ ಮೊಬೈಲ್‌ ಚಾರ್ಜರ್‌ ಖರೀದಿ ಮಾಡುವಾಗ ಅತ್ಯುತ್ತಮ ಗುಣಮಟ್ಟದ ಚಾರ್ಜರ್‌ ನಿಮ್ಮ ಆಯ್ಕೆ ಆಗಿರಲಿ. ಸಾಧಾರಣ ಚಾರ್ಜರ್‌ ನಿಮ್ಮ ಮೊಬೈಲ್‌ ಹಾನಿ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಚಾರ್ಜರ್‌ ಖರೀದಿಸುವಾಗ ಬ್ರ್ಯಾಂಡ್‌ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಲೇಸು. ಜೊತೆಗೆ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಉತ್ತಮ ಚಾರ್ಜರ್‌ ಖರೀದಿಸಲು ಮುಂದಾಗಿ.

Best Mobiles in India

English summary
Want to buy Mobile Charger? don't do this mistakes. full details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+