Home
ಸುದ್ದಿಜಾಲ

Apple: ಭಾರತದಲ್ಲಿರುವ ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಆಪಲ್‌ನಿಂದ ಎಚ್ಚರಿಕೆ! ಯಾಕೆಂದು ತಿಳಿಯಿರಿ..

ಆಪಲ್‌ ಡಿವೈಸ್‌ಗಳು (Apple device) ಎಂದರೆ ಭದ್ರತೆಗೆ ಇನ್ನೊಂದು ಹೆಸರು ಎಂದು ಈ ಹಿಂದೆ ಹೇಳಲಾಗುತ್ತಿದ್ದು, ಆದರೆ ಈ ಡಿವೈಸ್‌ಗಳು ಸಹ ಇತ್ತೀಚಿನ ದಿನಗಳಲ್ಲಿ ಹಲವಾರು ದುರ್ಬಲತೆಗಳನ್ನು ವರದಿ ಮಾಡುತ್ತಿವೆ. ಈ ಮೂಲಕ ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಬಳಕೆದಾರರನ್ನು ಹಿಂಸಿಸಲು ಮುಂದಾಗಿದ್ದಾರೆ.

ಹೌದು, ಭಾರತದಲ್ಲಿ ಸಾಕಷ್ಟು ಆಪಲ್‌ ಡಿವೈಸ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅದರಲ್ಲೂ ಇತ್ತೀಚೆಗೆ ಲಾಂಚ್‌ ಆದ ಐಫೋನ್‌ಗಳನ್ನು ಸಾಕಷ್ಟು ಜನರು ಈಗಲೂ ಸಹ ಖರೀದಿ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಭಾರತ ಸೇರಿದಂತೆ 92 ದೇಶಗಳಲ್ಲಿ ಐಫೋನ್ ಬಳಕೆದಾರರ ಮೇಲೆ ಸೈಬರ್ ದಾಳಿಯ ಕುರಿತು ಆಪಲ್ ಎಚ್ಚರಿಕೆ ನೀಡಿದೆ. ಹಾಗಿದ್ರೆ ಆಪಲ್‌ ಹೇಳಿದ್ದೇನು?, ಬಳಕೆದಾರರು ಮಾಡಬೇಕಿರುವುದೇನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿರುವ ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಆಪಲ್‌ನಿಂದ ಎಚ್ಚರಿಕೆ!

ಆಪಲ್‌ ಡಿವೈಸ್ ಬಳಕೆದಾರರಿಗೆ ಎಚ್ಚರಿಕೆ: ಭಾರತ ಸೇರಿದಂತೆ 92 ದೇಶದಲ್ಲಿನ ಐಫೋನ್ ಬಳಕೆದಾರರ ಮೇಲೆ ಸೈಬರ್ ದಾಳಿಯ ಕುರಿತು ಆಪಲ್ ಎಚ್ಚರಿಕೆ ನೀಡಿದೆ. ಸಾಮಾನ್ಯ ಸೈಬರ್ ಕ್ರಿಮಿನಲ್ ಚಟುವಟಿಕೆ ಮತ್ತು ಗ್ರಾಹಕ ಮಾಲ್‌ವೇರ್‌ಗಳಿಗೆ ಹೋಲಿಸಿದರೆ ಮರ್ಸೆನರಿ ಸ್ಪೈವೇರ್ ದಾಳಿಗಳು (Mercenary spyware attacks) ಹೆಚ್ಚು ಸಂಕೀರ್ಣವಾಗಿವೆ ಎಂದು ಆಪಲ್ ಇದೇ ವೇಳೆ ತಿಳಿಸಲಾಗಿದೆ.

ಮರ್ಸೆನರಿ ಸ್ಪೈವೇರ್ ದಾಳಿಗಳು ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವೆಚ್ಚ ಮಾಡುತ್ತವೆ. ಆಗಾಗ್ಗೆ ಕಡಿಮೆ ಶೆಲ್ಫ್ ಜೀವನವನ್ನು ಹೊಂದಿರುತ್ತವೆ, ಅವುಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಹೆಚ್ಚು ಕಷ್ಟವಾಗುತ್ತದೆ. ಬಹುಪಾಲು ಬಳಕೆದಾರರು ಇಂತಹ ದಾಳಿಗಳಿಂದ ಗುರಿಯಾಗುವುದಿಲ್ಲ. ಆದರೆ ಅವರು ರಾಜಕಾರಣಿಗಳು, ಪತ್ರಕರ್ತರು ಮತ್ತು ರಾಜತಾಂತ್ರಿಕರು ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ ಎಂದು ಆಪಲ್ ಇದೇ ಮಾರ್ಗಸೂಚಿಗಳಲ್ಲಿ ಉಲ್ಲೇಖ ಮಾಡಿದೆ.

ಭಾರತದಲ್ಲಿರುವ ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಆಪಲ್‌ನಿಂದ ಎಚ್ಚರಿಕೆ!

ಇನ್ನು ಮರ್ಸೆನರಿ ಸ್ಪೈವೇರ್ ದಾಳಿಯೊಂದಿಗೆ ಸ್ಥಿರವಾದ ಚಟುವಟಿಕೆಯನ್ನು ಕಂಡುಕೊಂಡಿದ್ದೇ ಆದರೆ ಬಳಕೆದಾರರು appleid.apple.com ಗೆ ಸೈನ್ ಇನ್ ಮಾಡಿದ ನಂತರ ಪೇಜ್‌ನ ಮೇಲ್ಭಾಗದಲ್ಲಿ ಪ್ರದರ್ಶಿಸಲಾದ ಬೆದರಿಕೆ ನೋಟಿಫಿಕೇಶನ್‌ ಅನ್ನು ಕಳುಹಿಸುವ ಮೂಲಕ ಬಳಕೆದಾರರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಆಪಲ್‌ ಹೇಳಿದ್ದು, ಇದರ ಹೊರತಾಗಿ, ಆಪಲ್‌ ಬಳಕೆದಾರರ ಆಪಲ್‌ ಐಡಿ ಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳಿಗೆ ಇಮೇಲ್ ಮತ್ತು ಐಮೆಸೆಜ್‌ಗಳಿಗೆ ನೋಟಿಫಿಕೇಶನ್‌ ಅನ್ನು ಕಳುಹಿಸುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ.

ಇನ್ನು ಆಪಲ್‌ನ ಈ ನೋಟಿಫೀಕೇಶನ್‌ಗಳು ಲಾಕ್‌ಡೌನ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಡಿವೈಸ್‌ಗಳನ್ನು ರಕ್ಷಿಸಲು ಹೆಚ್ಚುವರಿ ಹಂತಗಳನ್ನು ನೀಡಲಿವೆ. ಗಮನಾರ್ಹವಾಗಿ, ಆಪಲ್‌ ಬೆದರಿಕೆ ನೋಟಿಫೀಕೇಶನ್‌ನಲ್ಲಿ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಲು, ಫೈಲ್‌ಗಳನ್ನು ತೆರೆಯಲು, ಆಪ್‌ಗಳು ಅಥವಾ ಪ್ರೊಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡಲು ಅಥವಾ ಇಮೇಲ್ ಅಥವಾ ಫೋನ್‌ನಲ್ಲಿ ಅವರ ಆಪಲ್‌ಐಡಿ ಪಾಸ್‌ವರ್ಡ್ ಅಥವಾ ಪರಿಶೀಲನೆ ಕೋಡ್ ಅನ್ನು ಒದಗಿಸಲು ಬಳಕೆದಾರರನ್ನು ಎಂದಿಗೂ ಕೇಳುವುದಿಲ್ಲ ಅನ್ನೋದು ಸಹ ನಿಮ್ಮ ಗಮನಕ್ಕೆ ಇರಲಿ.

ಭಾರತದಲ್ಲಿರುವ ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಆಪಲ್‌ನಿಂದ ಎಚ್ಚರಿಕೆ!

ಮರ್ಸೆನರಿ ಸ್ಪೈವೇರ್ ದಾಳಿಯಿಂದ ನಿಮ್ಮ ಡಿವೈಸ್‌ ಅನ್ನು ರಕ್ಷಣೆ ಮಾಡಲು ಹೀಗೆ ಮಾಡಿ: ಇತ್ತೀಚಿನ ಸಾಫ್ಟ್‌ವೇರ್‌ಗೆ ನವೀಕರಣ ಮಾಡಿ. ಏಕೆಂದರೆ ಇದು ಇತ್ತೀಚಿನ ಭದ್ರತಾ ಪರಿಹಾರಗಳನ್ನು ನೀಡುತ್ತದೆ. ಜೊತೆಗೆ ಆಪಲ್‌ ಐಡಿ ಗಾಗಿ ಎರಡು ಅಂಶದ ದೃಢೀಕರಣ ಮತ್ತು ಬಲವಾದ ಪಾಸ್ವರ್ಡ್ ಅನ್ನು ಬಳಸಿ. ಅಲ್ಲದೆ ಆಪ್ ಸ್ಟೋರ್‌ನಿಂದ ಮಾತ್ರ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಎಲ್ಲದರ ಜೊತೆಗೆ ಅಪರಿಚಿತ ಬರುವ ಯಾವುದೇ ಮೆಸೆಜ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

ಗಮನಿಸಬೇಕಾದ ವಿಷಯ ಏನೆಂದರೆ ಆಪಲ್‌ ಮಾರ್ಗಸೂಚಿಗಳ ಪ್ರಕಾರ, ಬಳಕೆದಾರರು ಆಪಲ್‌ ಎಚ್ಚರಿಕೆಯ ನೋಟಿಫಿಕೇಶನ್‌ ಅನ್ನು ಸ್ವೀಕರಿಸದಿದ್ದರೆ, ಅಲ್ಲದೆ ಮರ್ಸೆನರಿ ಸ್ಪೈವೇರ್ ದಾಳಿಗೆ ಹೆದರಿದ್ದರೆ ಹೆಚ್ಚುವರಿ ರಕ್ಷಣೆಗಾಗಿ ತಮ್ಮ ಐಫೋನ್‌ಗಳಲ್ಲಿ ಲಾಕ್‌ಡೌನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು ಎಂದು ತಿಳಿಸಲಾಗಿದೆ. ಈ ಮೂಲಕ ಮುಂದೆ ಉಂಟಾಗುವ ಸಮಸ್ಯೆಗಳಿಂದ ಪಾರಾಗಬಹುದು ಎಂದು ಸೂಚಿಸಲಾಗಿದೆ.

Best Mobiles in India

English summary
Apple warns of cyber attack on iPhone users in 92 countries including India In this case information has been given about mercenary spyware attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+