ಡ್ರೈವರ್‌ಲೆಸ್ ಕಾರ್ 'ವೇಮೋ'ಗೆ ನಗರದಲ್ಲಿ ಓಡಾಡುವ ಭಾಗ್ಯ!!

|

ಇನ್ನೇನು ಕೆಲವೇ ವರ್ಷಗಳಲ್ಲಿ ಡ್ರೈವರ್ ಇಲ್ಲದ ಕಾರ್‌ಗಳು ವಿಶ್ವದೆಲ್ಲೆಡೆ ಓಡಾಡಲಿರೋದು ನಮಗೆಲ್ಲಾ ಗೊತ್ತಿರೋ ವಿಷಯಾನೇ. ಈಗಾಗಲೇ ಡ್ರೈವರ್ ಇಲ್ಲದ ಹಲವು ಕಾರ್‌ಗಳ ಹಲವು ಪ್ರಯೋಗಗಳು ನಡೆದಿವೆ. ಆದರೆ, ಡ್ರೈವರ್ ಇಲ್ಲದ ಕಾರ್‌ಗಲ್ಲಿಯೂ ಗೂಗಲ್ ಕಂಪೆನಿಯಡಿಯ ಡ್ರೈವರ್‌ಲೆಸ್ ಕಾರ್ ವೇಮೋಗೆ ಸಿಕ್ಕಿರೋ ಲೈಸೆನ್ಸ್ ಮಾತ್ರ ಬೇರೇಯದೇ ರೀತಿಯಾಗಿದೆ.

ಹೌದು, ಈ ಹಿಂದೆ ಡ್ರೆವರ್ ಕಾರ್‌ಗಳು ಓಡಾಡೋದಕ್ಕೆ ಸ್ಟೀರಿಂಗ್ ಹಿಂದೆ ಬ್ಯಾಕಪ್ ಡ್ರೈವರ್ ಆಗಿ ಮನುಷ್ಯರೊಬ್ಬರು ಕುಳಿತುಕೊಳ್ಳಬೇಕಾಗಿತ್ತು. ಆದರೆ, ಈಗ ಈಗ ವೇಮೋಗೆ ಸಿಕ್ಕಿರುವ ಅನುಮತಿ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ ವೇಮೋ ಆ ಬ್ಯಾಕಪ್ ಡ್ರೈವರ್ ಕೂಡ ಇಲ್ಲದೇ ತನ್ನ ಟೆಸ್ಟಿಂಗ್ ನಡೆಸಬಹುದಂತೆ. ವೇಮೋಗೆ ಮೊನ್ನೆ ಮೊನ್ನೆಯಷ್ಟೇ ಈ ಅನುಮತಿ ಸಿಕ್ಕಿದೆಯಂತೆ.

ಡ್ರೈವರ್‌ಲೆಸ್ ಕಾರ್ 'ವೇಮೋ'ಗೆ ನಗರದಲ್ಲಿ ಓಡಾಡುವ ಭಾಗ್ಯ!!

ಇದೇ ಈ ಫೆಬ್ರವರಿ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾದ ಡಿಎಂವಿ (ಡಿಪಾರ್ಟ್‌ಮೆಂಟ್ ಆಫ್ ಮೋಟರ್ ವೆಹಿಕಲ್) ಡ್ರೈವರ್‌ಲೆಸ್ ಕಾರ್‌ಗಳಿಗೆ ಅನುಮತಿ ನೀಡುವ ಕುರಿತಾದ ಕೆಲವು ಗೈಡ್‌ಲೈನ್‌ಗಳನ್ನು ಅಂತಿಮಗೊಳಿಸಿತ್ತು. ಇದಾದ ನಂತರ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಗೂಗಲ್‌ನ ವೇಮೋಗೆ ಮೊನ್ನೆ ಮೊನ್ನೆಯಷ್ಟೇ ಈ ಅನುಮತಿ ಸಿಕ್ಕಿದೆ ಎಂದು ತಿಳಿದುಬಂದಿದೆ.

ಡಿಎಂವಿ ಡ್ರೈವರ್‌ಲೆಸ್ ಕಾರ್‌ಗಳಿಗೆ ಅನುಮತಿ ನೀಡಿದ ನಂತರ, ತಾನು ಮೊದಲು ನಿಯಮಿತ ಪ್ರದೇಶಗಳಲ್ಲಿ ಮಾತ್ರ ಟೆಸ್ಟಿಂಗ್ ನಡೆಸಿ ನಂತರ ನಿಧಾನವಾಗಿ ನಗರ ಪ್ರದೇಶದಲ್ಲಿ ಸ್ವಲ್ಪವೇ ಟೆಸ್ಟ್ ಮಾಡಿದ ನಂತರ ಕ್ಯಾಲಿಫೋರ್ನಿಯಾ ರಾಜ್ಯಾದ್ಯಂತ ಟೆಸ್ಟಿಂಗ್ ನಡೆಸಲಿದ್ದೇನೆ ಎಂದು ವೇಮೋ ಹೇಳಿದೆ. ನಂತರ ಚಾಲಕರಹಿತ ಕಾರ್ ಸೇವೆಯನ್ನು ಸಹ ಆರಂಭಿಸಲಿದೆಯಂತೆ.

ಡ್ರೈವರ್‌ಲೆಸ್ ಕಾರ್ 'ವೇಮೋ'ಗೆ ನಗರದಲ್ಲಿ ಓಡಾಡುವ ಭಾಗ್ಯ!!

ಡ್ರೈವರ್‌ಲೆಸ್ ಕಾರ್‌ಗಳಿಗೆ ಅನುಮತಿ ನೀಡುವ ಡಿಎಂವಿನಿಂದ ವೇಮೋ ಮಾತ್ರ ಅಲ್ಲದೇ ಮತ್ತೊಂದು ಕಂಪೆನಿ ಕ್ಯಾಲಿಫೋರ್ನಿಯಾದಲ್ಲಿ ಅರ್ಜಿ ಹಾಕಿದೆ ಎಂದು ತಿಳಿದುಬಂದಿದೆ. ವೇಮೋಗೆ ಸಿಕ್ಕಂತೆ ಇನ್ನುಳಿದ ಕಂಪೆನಿಗಳಿಗೂ ಕೂಡ ಅನುಮತಿ ಸಿಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಒಟ್ಟಿನಲ್ಲಿ ಡ್ರೈವರ್‌ಲೆಸ್ ಕಾರುಗಳ ಭವಿಷ್ಯಕ್ಕೆ ಇದೊಂದು ಉತ್ತಮ ಆರಂಭವಾಗಿದೆ.

ಓದಿರಿ: ಮೋದಿ, ಟ್ರಂಪ್ ಸೇರಿ ವಿಶ್ವದ ನಾಯಕರು ಬಳಸುವ ಮೊಬೈಲ್ ಯಾವುವು?

Best Mobiles in India

English summary
Under a new name, the Google sibling plans to methodically build a futuristic rival to Uber and Lyft. This is how it will unfold. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X