ಸುಭಾಷ್ ಚಂದ್ರ ಬೋಸ್‌ ಸಾವಿನ ಮಾಹಿತಿ ಬಯಲು ಮಾಡಲಿರುವ ವೆಬ್‌ಸೈಟ್‌

By Suneel
|

ಭಾರತೀಯರಲ್ಲದೇ ವಿದೇಶಗಳ ಸಾರ್ವಜನಿಕರಲ್ಲೂ ಇಂದಿಗೂ ಸಹ ಪ್ರಶ್ನೆಯಾಗಿರುವ ಮಾಹಿತಿ ಅಂದ್ರೆ ಅದು ಸುಭಾಷ್‌ ಚಂದ್ರ ಬೋಸ್‌ ರವರ ಸಾವು. ಭಾರತೀಯ ಸ್ವತಂತ್ರ ಹೋರಾಟಗಾರ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ದಳಪತಿಯಾದ ಬೋಸ್‌ರವರ ಸಾವಿನ ಬಗ್ಗೆ ಭಿನ್ನಮತ ವಿಚಾರಗಳು ಇಂದಿಗೂ ಇದ್ದು, ತನಿಖೆ ನೆಡೆಯುತ್ತಲೇ ಇದೆ. ಈ ಕುರಿತು ಸತ್ಯವನ್ನು ಬಯಲಿಗೆಳೆಯಲು ಸುಭಾಷ್‌ ಚಂದ್ರ ಬೋಸ್‌ರವರ ಸೋದರ ಮೊಮ್ಮಗ ಮತ್ತು ಸ್ವತಂತ್ರ ಪತ್ರಕರ್ತರಾದ ಅಶಿಸ್‌ ರೇ ಎಂಬುವವರು ಬ್ರಿಟನ್‌ನಲ್ಲಿ ವೆಬ್‌ಸೈಟ್‌ ಒಂದನ್ನು ಲಾಂಚ್‌ ಮಾಡಿದ್ದಾರೆ.

ಓದಿರಿ: ಬ್ಯಾಂಕ್‌ ಖಾತೆ ರಕ್ಷಣೆಗೆ ಫೇಸ್‌ಬುಕ್‌ ಸೆಕ್ಯುರಿಟಿ ಆಪ್‌

ಹಾಗಾದರೆ ಆ ವೆಬ್‌ಸೈಟ್‌ ಯಾವುದು, ವೈಬ್‌ಸೈಟ್‌ನಲ್ಲಿರುವ ಮಾಹಿತಿ ಏನು ? ಎಂಬ ವಿಶೇಷ ಮಾಹಿತಿಯನ್ನು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ನೇತಾಜಿ ಕೊನೆಯ ದಿನಗಳ ಕುರಿತ ವೆಬ್‌ಸೈಟ್‌ ಲಾಂಚ್‌

ನೇತಾಜಿ ಕೊನೆಯ ದಿನಗಳ ಕುರಿತ ವೆಬ್‌ಸೈಟ್‌ ಲಾಂಚ್‌

ಸುಭಾಷ್ ಚಂದ್ರ ಬೋಸ್ ರವರ ಕೊನೆಯ ದಿನಗಳ ಕುರಿತ ಸಾಕ್ಷ್ಯ ಮಾಹಿತಿ ವೆಬ್‌ಸೈಟ್‌ ಒಂದನ್ನು ಬ್ರಿಟನ್‌ನಲ್ಲಿ ಲಾಂಚ್‌ ಮಾಡಲಾಗಿದೆ.

 www.bosefiles.info

www.bosefiles.info

ಈ ವೆಬ್‌ಸೈಟ್‌ ಅನ್ನು ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ದಳಪತಿ ಸುಭಾಷ್‌ ಚಂದ್ರ ಬೋಸ್‌ ರವರ ಸಾವಿನ ಸುತ್ತಮುತ್ತಲಿರುವ ಹಲವಾರು ಮಾಹಿತಿಗಳನ್ನು ಬಯಲಿಗೆಳೆಯುವ ಗುರಿ ಹೊಂದಿದ್ದು ಲಾಂಚ್‌ ಮಾಡಲಾಗಿದೆ ಎನ್ನಲಾಗಿದೆ.

ವೆಬ್‌ಸೈಟ್‌ ಲಾಂಚ್‌ ಮಾಡಿದವರು

ವೆಬ್‌ಸೈಟ್‌ ಲಾಂಚ್‌ ಮಾಡಿದವರು

ಬ್ರಿಟನ್‌ ಮೂಲದ ಸ್ವತಂತ್ರ ಪತ್ರಕರ್ತ ಹಾಗೂ ಬೋಸ್‌ ರವರ ಸೋದರ ಮೊಮ್ಮಗ ಆಶಿಸ್‌ ರೇ ರವರು ಈ ವೆಬ್‌ಸೈಟ್‌ ಅನ್ನು ಲಾಂಚ್‌ ಮಾಡಿದ್ದಾರೆ.

ವೆಬ್‌ಸೈಟ್‌ನಲ್ಲಿರುವ ಮಾಹಿತಿ ಏನು ?

ವೆಬ್‌ಸೈಟ್‌ನಲ್ಲಿರುವ ಮಾಹಿತಿ ಏನು ?

ಅಶಿಸ್‌ ರೇ ಹೇಳಿರುವಂತೆ "ಸುಭಾಷ್‌ ಚಂದ್ರ ಬೋಸ್‌ ರವರ ಬಗ್ಗೆ 25 ವರ್ಷಗಳಿಂದ ನೆಡೆದ ತನಿಖೆ ಮತ್ತು ಸಂಶೋಧನೆಯನ್ನು ಕಾಲಾನುಕ್ರಮದಲ್ಲಿ ಸತ್ಯತೆಯನ್ನು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯರಿಗಾಗಿ ಈ ವೆಬ್‌ಸೈಟ್‌

ಭಾರತೀಯರಿಗಾಗಿ ಈ ವೆಬ್‌ಸೈಟ್‌

ಸುಭಾಷ್‌ ಚಂದ್ರ ಬೋಸ್‌ ರವರ ಬಗೆಗಿನ ಮಾಹಿತಿಯನ್ನು ತಿಳಿಸುವ www.bosefiles.info ವೆಬ್‌ಸೈಟ್‌ ಅನ್ನು ಇಂದಿಗೂ ಸಹ ಯಾರು ಸುಭಾಷ್‌ ಚಂದ್ರ ಬೋಸ್‌ ರವರನ್ನು ಪೂಜಿಸುತ್ತಿರುವ ಭಾರತೀಯರಿಗಾಗಿ ನೀಡಲಾಗುತ್ತಿದೆ ಎಂದು ಅಶಿಸ್‌ ಹೇಳಿದ್ದಾರೆ.

ಬೋಸ್‌ ರವರ ಸಾವಿನ ಬಗೆಗಿನ ನಂಬಿಕೆ

ಬೋಸ್‌ ರವರ ಸಾವಿನ ಬಗೆಗಿನ ನಂಬಿಕೆ

ಸುಭಾಷ್‌ ಚಂದ್ರ ಬೋಸ್‌ ರವರು 1945 ರ ತೈವಾನ್‌ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದೆ. ಈ ಮಾಹಿತಿಯನ್ನು ಜರ್ಮನಿಯಲ್ಲಿರುವ ಮಗಳು ಮತ್ತು ಒಬ್ಬನೇ ವಾರಸುದಾರನಾದ Dr Pfaff ನಂಬಿದ್ದಾರೆ. ಆದರೆ ಇವರ ಭಾರತೀಯ ಸಂಬಂಧಿಗಳು ಈ ಮಾಹಿತಿ ಬಗ್ಗೆ ಭಿನ್ನಮತ ಹೊಂದಿದ್ದು, ಸೋವಿಯತ್‌ ಒಕ್ಕೂಟಕ್ಕೆ ತಪ್ಪಿಸಿಕೊಂಡಿರುವ ಬಗ್ಗೆ ಹೇಳಿದ್ದಾರೆ.

ನರೇಂದ್ರ ಮೋದಿಯವರ ಭರವಸೆ

ನರೇಂದ್ರ ಮೋದಿಯವರ ಭರವಸೆ

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ರವರನ್ನು ಮಾಸ್ಕೋದಲ್ಲಿ ಬೇಟಿಯಾದಾಗ ಬೋಸ್‌ ಸಾವಿನ ಕುರಿತಾದ ಮಾಹಿತಿಯನ್ನು ಚರ್ಚಿಸುವ ಭರವಸೆಯನ್ನು ಬೋಸ್‌ರವರ ಸಂಬಂಧಿ ಕುಟುಂಬಗಳಿಗೆ ನೀಡಿದ್ದರು.

ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಆದ ಮಾಹಿತಿ

ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಆದ ಮಾಹಿತಿ

ವೆಬ್‌ಸೈಟ್‌ನಲ್ಲಿ ಮಾಸ್ಕೋದಲ್ಲಿರುವ ಇಂಡಿಯನ್‌ ಎಂಬೆಸ್ಸಿ ಮತ್ತು ರಷ್ಯಾದ ವಿದೇಶಾಂಗ ಸಚಿವಾಲಯದ ದಾಖಲೆಗಳನ್ನು ಪೋಸ್ಟ್‌ ಮಾಡಲಾಗಿದೆ. ಇವುಗಳಲ್ಲಿ ಸುಭಾಷ್‌ ಚಂದ್ರ ಬೋಸ್‌ರವರು ಸೋವಿಯತ್‌ ಒಕ್ಕೂಟಕ್ಕೆ 1945 ರ ಮೊದಲು ಸಹ ಹೋಗಿಲ್ಲಾ ಹಾಗೂ ನಂತರವು ಸಹ ಹೋಗಿಲ್ಲಾ ಎಂಬುದನ್ನು ತಿಳಿಸಿದೆ.

ವೆಬ್‌ಸೈಟ್‌ ವಿವರ

ವೆಬ್‌ಸೈಟ್‌ ವಿವರ

ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Most Read Articles
Best Mobiles in India

English summary
A new website providing documentary evidence of the last days of Netaji Subhas Chandra Bose was launched here today. The www.bosefiles.info website dedicated to the freedom fighter and Supreme Commander of the Indian National Army (INA) aims to debunk numerous conspiracy theories surrounding Netaji's death.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more