ವರ್ಕ್ ಫ್ರಂ ಹೋಮ್ ಮಾಡುವವರಿಗೆ ಈ ಡಿವೈಸ್‌ಗಳು ನಿಮಗೆ ನೆರವಾಗಲಿವೆ!

|

ದೇಶದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಐಟಿ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ವರ್ಕ್ ಫ್ರಂ ಹೋಮ್‌ಗೆ ಅವಕಾಶವನ್ನು ನೀಡಿವೆ. ಹೀಗಾಗಿ ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅದಕ್ಕೆಗಾಗಿ ಕೆಲವೊಂದು ಅಗತ್ಯ ಪರಿಕರಗಳ ಅಗತ್ಯ ಇರುತ್ತದೆ.

ಉದ್ಯೋಗಿಗಳು ಮನೆಯಿಂದ ಕೆಲಸ

ಹೌದು, ಸದ್ಯ ಬಹುತೇಕ ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಆಫೀಸ್‌ನಂತೆ ಕಂಫರ್ಟ್‌ ಕೆಲಸದ ಸ್ಥಳ ಮತ್ತು ಅನುಕೂಲಗಳು ಮನೆಯಲ್ಲಿ ಕಷ್ಟ ಸಾಧ್ಯ. ಲ್ಯಾಪ್‌ಟ್ಯಾಪ್ ಹಿಡಿದು ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ ಕೆಲವೊಂದು ಪೂರಕ ಆಕ್ಸಸರಿಸಗಳ ಅಗತ್ಯ ಇರುತ್ತದೆ. ಅವುಗಳಲ್ಲಿ ಮುಖ್ಯವಾಗಿ ಲ್ಯಾಪ್‌ಟಾಪ್ ಸ್ಟ್ಯಾಂಡ್, ಪವರ್‌ ಬ್ಯಾಂಕ್, ವೈಫೈ ರೂಟರ್, ಹಾಗೂ ಇನ್ನಿತರೆ ಡಿವೈಸ್‌ಗಳ ಅನಿವಾರ್ಯ ಇರುತ್ತದೆ. ಹಾಗಾದರೆ ವರ್ಕ್‌ ಫ್ರಂ ಹೋಮ್‌ಗೆ ಅಗತ್ಯವಾಗಿರುವ ಡಿವೈಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಲಾಗಿದೆ.

ವೈ-ಫೈ ಹಾಟ್‌ಸ್ಪಾಟ್‌

ವೈ-ಫೈ ಹಾಟ್‌ಸ್ಪಾಟ್‌

ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಂಟರ್ನೆಟ್ ಅತೀ ಅಗತ್ಯವಾಗಿದೆ. ಫೋನ್‌ ಡೇಟಾ ಬಳಕೆ ಪೂರಕವಾಗದು ಹೀಗಾಗಿ ಹೆಚ್ಚಿನ ಮತ್ತು ವೇಗದ ಡೇಟಾ ಅಗತ್ಯ ಇರುತ್ತದೆ. ಅದಕ್ಕಾಗಿ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ನಲ್ಲಿ ಸೂಕ್ತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಅನೇಕ ಸಿಗುತ್ತವೆ. ಜಿಯೋಫೈ JMR541 ವಾಯರ್‌ಲೆಸ್ 4G ರೂಟರ್ ಬೆಲೆಯ 999ರೂ. ಆಗಿದೆ.

ಡೆಸ್ಕ್ ಲ್ಯಾಂಪ್

ಡೆಸ್ಕ್ ಲ್ಯಾಂಪ್

ಮನೆಯಲ್ಲಿ ಲ್ಯಾಪ್‌ಟಾಪ್‌ ಹಿಡಿದು ಟೇಬಲ್‌ ಮೇಲೆ ಕುಳಿತು ವರ್ಕ್ ಮಾಡುವ ಉದ್ಯೋಗಿಗಳಿಗೆ ನಿಗದಿತ ಬೆಳಕು ಒದಗಿಸಲು ಡೆಸ್ಕ್ ಲ್ಯಾಂಪ್‌ಗಳು ನೆರವಾಗಲಿವೆ. ತರಹೇವಾರಿ ಡೆಸ್ಕ್‌ ಲ್ಯಾಂಪ್‌ಗಳು ಮಾರತುಕಟ್ಟೆಯಲ್ಲಿ ಲಭ್ಯ ಇವೆ. ಹಾಗೆಯೇ ಫಿಲಿಪ್ಸ್‌ 61013 ಡೆಸ್ಕ್‌ಟಾಪ್‌ ಬೆಲೆಯು 753ರೂ.ಗಳು ಆಗಿದೆ.

ಎಕ್ಸ್ಟೆನ್ಶನ್ ಬೋರ್ಡ್‌(Extension board)

ಎಕ್ಸ್ಟೆನ್ಶನ್ ಬೋರ್ಡ್‌(Extension board)

ಮನೆಯಲ್ಲಿ ಕೆಲಸ ನಿರ್ವಹಿಸಲು ಬೇಕಾಗಿರುವ ಅಗತ್ಯ ಪರಿಕರಗಳಲ್ಲಿ ಎಕ್ಸ್ಟೆನ್ಶನ್ ಬೋರ್ಡ್‌ ಸಹ ಅತೀ ಮುಖ್ಯವಾಗಿರುತ್ತದೆ. ಲ್ಯಾಪ್‌ಟಾಪ್‌ಗೆ ಚಾರ್ಜರ್‌ ಕನೆಕ್ಟ್ ಮಾಡಲು, ಫೋನ್‌ ಚಾರ್ಜ್ ಮಾಡಲು, ಸ್ಪೀಕರ್, ಹಾಗೂ ವಾಯರ್‌ಲೆಸ್‌ ಇಯರ್‌ಫೋನ್/ಬಡ್ಸ್‌ ನಂತಹ ಡಿವೈಸ್‌ಗಳನ್ನು ಕೆಲಸ ಮಾಡುವ ಟೇಬಲ್‌ನಲ್ಲಿಯೇ ಚಾರ್ಜ್‌ ಮಾಡಲು ಎಕ್ಸ್ಟೆನ್ಶನ್ ಬೋರ್ಡ್‌ ಅನುಕೂಲ ಒದಗಿಸುತ್ತದೆ.

ಲ್ಯಾಪ್‌ಟಾಪ್‌ ಸ್ಟ್ಯಾಂಡ್

ಲ್ಯಾಪ್‌ಟಾಪ್‌ ಸ್ಟ್ಯಾಂಡ್

ಮನೆಯಲ್ಲಿ ಕೆಲಸ ನಿರ್ವಹಿಸುವಾಗ ಲ್ಯಾಪ್‌ಟಾಪ್‌ ಸ್ಟ್ಯಾಂಡ್‌ ಬಳಕೆ ಮಾಡಬಹುದು. ಲ್ಯಾಪ್‌ಟಾಪ್‌ ಸ್ಟ್ಯಾಂಡ್ ಲ್ಯಾಪ್‌ಟಾಪ್‌ ಮಶಿನ್ ಹಿಟ್ ಆಗುವುದನ್ನು ತಡೆಯಲು ನೆರವಾಗುತ್ತವೆ. ಹಾಗೂ ಬಳಕೆದಾರರಿಗೂ ಬಳಕೆಗೆ ಕಂಫರ್ಟ್ ಅನಿಸಲಿವೆ.

ಬ್ಲೂಟೂತ್ ಕೀ ಬೋರ್ಡ್ ಮತ್ತು ಮೌಸ್‌

ಬ್ಲೂಟೂತ್ ಕೀ ಬೋರ್ಡ್ ಮತ್ತು ಮೌಸ್‌

ಬಹುತೇಕ ಲ್ಯಾಪ್‌ಟಾಪ್‌ ಬಳಕೆದಾರರಿಗೆ ಲ್ಯಾಪ್‌ಟಾಪ್‌ ಕೀ ಬೋರ್ಡ್ ಬಳಕೆ ಹಿತಕರ ಅನಿಸದು. ಹೀಗಿದ್ದರೇ ಬ್ಲೂಟೂತ್ ಆಧಾರಿತ ಕೀ ಬೋರ್ಡ್ ಮತ್ತು ಮೌಸ್‌ ಖರೀದಿಸುವುದು ಉತ್ತಮ. ಈ ಡಿವೈಸ್‌ಗಳಿಗೆ ವಾಯರ್‌ ಕನೆಕ್ಟ್ ಮಾಡುವ ಅಗತ್ಯ ಇರದು. ಬಳಕೆ ಸಹ ಸರಳ ಮತ್ತು ಹಿತಕರ ಅನಿಸಲಿದೆ.

Best Mobiles in India

English summary
Here are few useful gadgets that will help you work from home efficiently.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X